ನಾಯಿಗೆ ಕಲ್ಲಿಂದ ಹೊಡೆದ ಯುವಕನನ್ನು ಗುಂಡಿಟ್ಟು ಕೊಂದ ಮಾಲೀಕ!

Team Udayavani, Jan 7, 2019, 4:52 AM IST

ನವದೆಹಲಿ:ತನ್ನ ಪ್ರೀತಿಯ ನಾಯಿಗೆ ಕಲ್ಲಿನಿಂದ ಹೊಡೆದ ಎಂಬ ಆಕ್ರೋಶಕ್ಕೆ 30 ವರ್ಷದ ಯುವಕನನ್ನು ಗುಂಡು ಹೊಡೆದು ಸಾಯಿಸಿರುವ ಘಟನೆ ದೆಹಲಿಯಲ್ಲಿ ನಡೆದಿದೆ ಎಂದು ಮಾಧ್ಯಮದ ವರದಿ ತಿಳಿಸಿದೆ.

ಪೊಲೀಸ್ ಅಧಿಕಾರಿ ಅತುಲ್ ಠಾಕೂರ್ ಹೇಳಿಕೆ ಪ್ರಕಾರ,ಅಶ್ಪಾಕ್(30ವರ್ಷ) ಎಂಬ ಯುವಕ ದೆಹಲಿಯ ಈಶಾನ್ಯ ಪ್ರದೇಶದ ವೆಲ್ ಕಂ ಕಾಲೋನಿಯ ರಸ್ತೆಯಲ್ಲಿ ನಡೆದು ಬರುತ್ತಿದ್ದಾಗ ನಾಯಿ ಬೊಗಳಲು ಆರಂಭಿಸಿತ್ತು. ಅಷ್ಟೇ ಅಲ್ಲ ಅಶ್ಫಾಕ್ ನಿಗೆ ಕಚ್ಚಲು ಯತ್ನಿಸಿತ್ತು, ಈ ವೇಳೆ ಆತ ಕಲ್ಲಿನಿಂದ ಹೊಡೆದು ನಾಯಿಯನ್ನು ಓಡಿಸಿದ್ದ.

ತನ್ನ ಪ್ರೀತಿಯ ನಾಯಿಗೆ ಕಲ್ಲಿನಿಂದ ಹೊಡೆದಿರುವುದನ್ನು ಗಮನಿಸಿದ ಮಾಲೀಕ ಮೆಹತಾಬ್, ಮನೆಯೊಳಗೆ ಹೋಗಿ ಪಿಸ್ತೂಲ್ ಅನ್ನು ತೆಗೆದುಕೊಂಡು ಬಂದು, ಅಶ್ಫಾಕ್ ಬಳಿ ನಾಯಿಗೆ ಕಲ್ಲು ಹೊಡೆದಿದ್ದೇಕೆ ಎಂದು ಕ್ಯಾತೆ ತೆಗೆದು ಜಗಳಕ್ಕಿಳಿದುಬಿಟ್ಟಿದ್ದ. ಈ ವೇಳೆ ಆತನಿಗೆ ಗುಂಡು ಹೊಡೆದು ಬಿಟ್ಟಿದ್ದ ಎಂದು ಠಾಕೂರ್ ವಿವರಿಸಿದ್ದಾರೆ.

ಕೂಡಲೇ ಕುಸಿದುಬಿದ್ದ ಅಶ್ಫಾಕ್ ನನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಯುವಕ ಅಶ್ಫಾಕ್ ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ