22 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಲೂಟಿಕೋರ ಕೊನೆಗೂ ಅರೆಸ್ಟ್
Team Udayavani, Nov 12, 2018, 11:58 AM IST
ಮುಜಫರನಗರ : ಅನೇಕ ಲೂಟಿ ಕೇಸುಗಳಲ್ಲಿ ಬೇಕಾಗಿದ್ದ ಮತ್ತು ಕಳೆದ 22 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಖದೀಮನೊಬ್ಬನನ್ನು ಬಂಧಿಸುವಲ್ಲಿ ಇಲ್ಲಿನ ಪೊಲೀಸರು ಕೊನೆಗೂ ಯಶಸ್ವಿಯಾಗಿದ್ದಾರೆ.
ಆರೋಪಿ ಮುನ್ನಾ ನನ್ನು ಪೊಲೀಸರು ಖತೋಲಿ ಪೊಲೀಸ್ ಠಾಣೆ ವ್ಯಾಪ್ತಿಯ ಅಂತವಾಡ ಗ್ರಾಮದಲ್ಲಿ ಬಂಧಿಸಿದರೆಂದು ಎಸ್ಎಚ್ಓ ಸಂತೋಷ್ ಕುಮಾರ್ ತಿಳಿಸಿದ್ದಾರೆ.
ಆರೋಪಿ ಮುನ್ನಾ 1996ರಿಂದ ತಲೆ ಮರೆಸಿಕೊಂಡಿದ್ದ. ಅನೇಕ ಲೂಟಿ ಪ್ರಕರಣಗಳಲ್ಲಿ ಆತ ಪೊಲೀಸರಿಗೆ ಸಿಗದೆ ತಪ್ಪಿಸಿಕೊಳ್ಳುತ್ತಿದ್ದ ಎಂದು ಎಸ್ಎಚ್ಓ ಹೇಳಿದರು.