ರಾಜ್ಯಸಭಾ ಚುನಾವಣೆಗೆ ಮಾಜಿ ಪ್ರಧಾನಿ ಸಿಂಗ್ ಇಂದು ನಾಮಪತ್ರ ಸಲ್ಲಿಕೆ

Team Udayavani, Aug 13, 2019, 7:59 AM IST

ಜೈಪುರ : ಮಾಜಿ ಪ್ರಧಾನ ಮಂತ್ರಿ, ಕಾಂಗ್ರೆಸ್ ಹಿರಿಯ ನಾಯಕ ಡಾ. ಮನಮೋಹನ್ ಸಿಂಗ್, ರಾಜಸ್ಥಾನ ವಿಧಾನಸಭೆಯಿಂದ ರಾಜ್ಯಸಭೆಯ ಒಂದು ಸ್ಥಾನಕ್ಕೆ ಇಂದು ನಾಮಪತ್ರ ಸಲ್ಲಿಸಲಿದ್ದಾರೆ.

ಬಿಜೆಪಿಯಿಂದ ಆಯ್ಕೆಯಾಗಿದ್ದ ಮದನ್ ಲಾಲ್ ಸೈನಿ ಜೂನ್ ನಲ್ಲಿ ನಿಧನರಾಗಿದ್ದರಿಂದ ಆ ಸ್ಥಾನಕ್ಕೆ ಇದೇ  ತಿಂಗಳ 26 ರಂದು ಉಪಚುನಾವಣೆ ನಡೆಯಲಿದೆ.

ಸುಮಾರು ಮೂರು ದಶಕಗಳಿಂದ ಸಿಂಗ್, ಅಸ್ಸಾಂನಿಂದ ಸ್ಪರ್ಧಿಸಿ ಮೇಲ್ಮನೆಯ  ಸದಸ್ಯರಾಗಿದ್ದರು.

ಮನಮೋಹನ್ ಸಿಂಗ್ ಅವರನ್ನು ರಾಜ್ಯಸಭೆಗೆ ಆಯ್ಕೆಮಾಡಲು ಪಕ್ಷ ನಿರ್ಧರಿಸಿದೆ ಎಂದು ರಾಜಸ್ಥಾನ ಉಪಮುಖ್ಯಮಂತ್ರಿಯೂ ಅದ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಸಚಿನ್ ಪೈಲಟ್ ತಿಳಿಸಿದ್ದಾರೆ.

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ