ಮಾಜಿ ಸಿಎಂ ಹೂಡಾ ವಿರುದ್ಧ ಆರೋಪಪಟ್ಟಿ
Team Udayavani, Feb 3, 2018, 9:40 AM IST
ಹೊಸದಿಲ್ಲಿ: ಮನೇಸರ್ ಭೂಹಗರಣಕ್ಕೆ ಸಂಬಂಧಿಸಿ ಹರ್ಯಾಣದ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಮತ್ತು ಇತರೆ 34 ಜನರ ವಿರುದ್ಧ ಸಿಬಿಐ ಶುಕ್ರವಾರ ಆರೋಪಪಟ್ಟಿ ಸಲ್ಲಿಸಿದೆ. ಭ್ರಷ್ಟಾಚಾರ ಮತ್ತು ಕ್ರಿಮಿನಲ್ ಸಂಚು, ವಂಚನೆಗೆ ಸಂಬಂಧಿಸಿದ ಐಪಿಸಿ ಸೆಕ್ಷನ್ನಡಿ ಆರೋಪ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.