ಮಂಜುಳಾ ಪ್ರಜ್ಞಾಹೀನಳಾಗಿ ಬಿದ್ದಿದ್ದ ವೇಳೆ ಸಹ ಕೈದಿಗಳ ಡ್ಯಾನ್ಸ್‌!

Team Udayavani, Jul 12, 2017, 1:57 PM IST

ಮುಂಬಯಿ: ನಗರದ ಬೈಕುಲಾ ಜೈಲಿನಲ್ಲಿ ಕೈದಿ ಮಂಜುಳಾ ಶೆಟ್ಯೆಯ ಅನುಮಾನಾಸ್ಪದ ಸಾವಿನ ಹಿಂದಿನ  ಒಂದೊಂದೇ ರಹಸ್ಯಗಳು ಇದೀಗ  ಬಯಲಾಗತೊಡಗಿವೆ.  

ಜೈಲಿನ  ಅಧಿಕಾರಿಗಳು  ಮತ್ತು ಸಿಬಂದಿಯಿಂದ ತೀವ್ರ  ಥಳಿತಕ್ಕೊಳಗಾಗಿದ್ದ  ಮಂಜುಳಾ ಶೆಟ್ಯೆ ಈ ಕಾರಣ ದಿಂದಾಗಿಯೇ ಸಾವನ್ನಪ್ಪಿದ್ದಾಳೆ ಎಂದು  ಸಹಕೈದಿಗಳು ಈಗಾಗಲೇ  ಆರೋಪಿಸಿದ್ದರೆ  ಇದೀಗ  ಜೈಲಿಗೆ  ನಿರಂತರವಾಗಿ ಭೇಟಿ  ನೀಡುತ್ತಿದ್ದ  ಎನ್‌ಜಿಒ ಒಂದರ  ಪ್ರತಿನಿಧಿಗಳೂ ಇದೇ ಆರೋಪವನ್ನು  ಪುನರುಚ್ಚರಿಸಿದ್ದಾರಲ್ಲದೆ  ಮಂಜುಳಾ ಶೆಟ್ಯೆ ಸಾವನ್ನಪ್ಪಿದ  ದಿನದಂದು  ಜೈಲಿನಲ್ಲಿ  ಕಂಡ  ದೃಶ್ಯಾವಳಿಗಳನ್ನು  ಇದೀಗ  ಬಿಚ್ಚಿಟ್ಟಿದ್ದಾರೆ. 

ಜೈಲಿನ  ಕೈದಿಗಳಿಗೆ  ಕೌನ್ಸೆಲಿಂಗ್‌  ನಡೆಸುತ್ತಾ ಬಂದಿರುವ  ಎನ್‌ಜಿಒ ಒಂದರ  ಪ್ರತಿನಿಧಿ ಜೂ.23ರಂದು  ಸಂಜೆ  ಗಂಟೆ  4-5ರ  ವೇಳೆಗೆ  ಜೈಲಿಗೆ  ಭೇಟಿ  ನೀಡಿದ್ದ  ಸಂದರ್ಭದಲ್ಲಿ  ಜೈಲಿನ  ಆವರಣದಲ್ಲಿ  ಹಿಂದಿ  ಚಿತ್ರಗೀತೆಯೊಂದನ್ನು ಪ್ರಸಾರಿಸ ಲಾಗುತ್ತಿದ್ದರೆ  ಜೈಲಿನ  ನೆಲಮಹಡಿಯಲ್ಲಿ  ಸುಮಾರು  30-40ರಷ್ಟು ಮಹಿಳಾ ಕೈದಿಗಳು  ಜೂ.26ರಂದು  ಜೈಲಿನಲ್ಲಿ  ನಡೆಯಲಿದ್ದ  ಈದ್‌  ಕಾರ್ಯಕ್ರಮದಲ್ಲಿ  ಪ್ರದರ್ಶನಕ್ಕಾಗಿ  ಡ್ಯಾನ್ಸ್‌ನ  ರಿಹರ್ಸಲ್‌ನಲ್ಲಿ  ತೊಡಗಿದ್ದರು.  ಈ  ನಡುವೆ  ಜೈಲಿನ ಸಿಬಂದಿ   ಕೈದಿ ಮಂಜುಳಾ ಶೆಟ್ಯೆಗೆ  ಥಳಿಸುತ್ತಿದ್ದರು. ಇನ್ನು ಬೈಕುಲಾ ಜೈಲಿನ ಅಧೀಕ್ಷಕರಾಗಿರುವ  ಮನೀಷಾ ಪೊಖಾರ್ಕರ್‌ ಮತ್ತು ಇತರ ಸಿಬಂದಿ   ಮಂಜುಳಾ ಶೆಟ್ಯೆಯ ತಲೆಕೂದಲನ್ನು  ಹಿಡಿದೆಳೆದು  ಆಕೆಯ ಮೇಲೆ ಹಲ್ಲೆ ಎಸಗುತ್ತಿದ್ದರು ಎಂದವರು  ತಿಳಿಸಿದರು. 

ಮಂಜುಳಾ ಶೆಟ್ಯೆಗೆ  ಥಳಿಸಿ  ಸುಸ್ತಾದ  ಮನೀಷಾ  ಬಳಿಕ ಜೈಲಿನ ಕಾವಲುಗಾರರಾದ  ವಸೀಮಾ ಶೇಖ್‌ ಮತ್ತು  ಇತರ ಸಿಬಂದಿಯನ್ನು  ಕರೆದು ಶೆಟ್ಯೆಗೆ ಪಾಠ  ಕಲಿಸುವಂತೆ  ಸೂಚನೆ  ನೀಡಿದರು.  ಅದರಂತೆ  ಇವರೀರ್ವರು ಶೆಟ್ಯೆಯನ್ನು  ಥಳಿಸಲಾರಂಭಿಸಿದರು. ಹೊಡೆತವನ್ನು  ತಾಳಲಾರದೇ  ಮಂಜುಳಾ ಶೆಟ್ಯೆ ಪ್ರಜ್ಞೆ  ತಪ್ಪಿ ನೆಲಕ್ಕುರುಳಿದಳು. ಇದಾದ  ಬಳಿಕ  ಜೈಲಿನ ಸಿಬಂದಿ ಆಕೆಯನ್ನು  ಜೈಲಿನ ಮೊದಲ ಮಹಡಿಯಲ್ಲಿರುವ  ಆಕೆಯ  ಕೊಠಡಿಗೆ ತಳ್ಳಿದರು ಎಂದು  ಎನ್‌ಜಿಒನ  ಪ್ರತಿನಿಧಿಗಳು ದೂರಿದ್ದಾರೆ. 

ಸಹಕೈದಿಗಳು ನೃತ್ಯಾಭ್ಯಾಸದಲ್ಲಿ  ನಿರತರಾಗಿದ್ದರೆ ಉಳಿದ  ಕೈದಿಗಳು  ಈ ನೃತ್ಯವನ್ನು  ನೋಡುವುದರಲ್ಲಿ  ತಲ್ಲೀನರಾಗಿದ್ದರು. ಇದರಿಂದಾಗಿ ಮಂಜುಳಾ ಪ್ರಜ್ಞಾಹೀನಳಾಗಿ  ತನ್ನ  ಕೊಠಡಿ ಯಲ್ಲಿ  ಬಿದ್ದಿರುವುದು  ಯಾರ ಗಮನಕ್ಕೂ ಬಂದಿರಲಿಲ್ಲ. ಒಂದು  ವೇಳೆ  ಈಕೆಯನ್ನು  ಯಾರಾದರೂ ಗಮನಿಸಿ  ತತ್‌ಕ್ಷಣ ಆಸ್ಪತ್ರೆಗೆ ದಾಖಲಿಸುತ್ತಿದ್ದಲ್ಲಿ  ಆಕೆಯ ಪ್ರಾಣ ಉಳಿಯುತ್ತಿತ್ತು  ಎಂದವರು  ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಜಗಳೂರು: ಸಾರ್ವಜನಿಕ ಉದ್ಯಾನವನ ಮತ್ತು ರಸ್ತೆ ಮಧ್ಯೆ ಅನಧಿಕೃತವಾಗಿ ನಿರ್ಮಿಸಲಾಗಿದ್ದ ಧಾರ್ಮಿಕ ಶ್ರದ್ಧಾ ಕೇಂದ್ರಗಳ ತೆರವು ಕಾರ್ಯಾಚರಣೆಯನ್ನು ಭಾನುವಾರ...

  • ಕುಷ್ಟಗಿ: ಮಾರುಕಟ್ಟೆಯಲ್ಲಿ ವಿವಿಧ ಕಂಪನಿ, ಬ್ರ್ಯಾಂಡ್‌ಗಳ ಪೊರಕೆಗಳ ಅಬ್ಬರಕ್ಕೆ ಈಚಲು ಗರಿಯಿಂದ ತಯಾರಿಸಿದ ಈಚಲು, ಹುಲ್ಲಿನ ಪೊರಕೆ ಬೇಡಿಕೆ ಕ್ರಮೇಣ ಮಂಕಾಗುತ್ತಿದೆ....

  • ಶಹಾಪುರ: ಶಾಲಾ ದಿನಗಳಲ್ಲಿ ಮಕ್ಕಳಿಗೆ ಶಿಸ್ತು, ಸಂಯಮ ಹಾಗೂ ರಾಷ್ಟ್ರ ಪ್ರಜ್ಞೆ ಅರಿವು ಮಾಡಿಕೊಡುವ ಕರ್ನಾಟಕ ಪೊಲೀಸ್‌ ಇಲಾಖೆ ಯೋಜನೆಯೇ ಎಸ್‌ಪಿಸಿ ತುಂಬಾ ಉಪಯುಕ್ತವಾದದು...

  • ಕಲಬುರಗಿ: ನಮಗೆ ಪೆಟ್ಟು ಬಿದ್ದ ತಕ್ಷಣ "ಅಮ್ಮ' ಎನ್ನುತ್ತೇವೆ ಹೊರತು, "ಅಂಟಿ' ಅನ್ನಲ್ಲ. ಅಮ್ಮ ಎನ್ನುವ ಪದ ಹೃದಯದಿಂದ ಬರುವಂತದ್ದು, ಹಾಗೆ ಕನ್ನಡ ಭಾಷೆ ಕಣ- ಕಣದಲ್ಲಿ...

  • ಹನುಮಸಾಗರ: ಕೊಪ್ಪಳ ಜಿಲ್ಲೆಯ ಅತಿ ದೊಡ್ಡ ಗ್ರಾಪಂ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಹನುಮಸಾಗರ ಗ್ರಾಮದ ಪ್ರವಾಸಿ ಮಂದಿರ(ಐಬಿ) ಕುಡಿಯುವ ನೀರು ಹಾಗೂ ಸಿಬ್ಬಂದಿ...