50 ಕಂತು ಪೂರೈಸಿದ ಪ್ರಧಾನಿ ಮೋದಿ ಮನ್ಕಿ ಬಾತ್
Team Udayavani, Nov 25, 2018, 6:00 AM IST
ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ನಡೆಸಿಕೊಡುವ ಮಾಸಿಕ ರೇಡಿಯೋ ಕಾರ್ಯಕ್ರಮ ಮನ್ ಕಿ ಬಾತ್ ಇಂದಿಗೆ (ಭಾನುವಾರ) 50 ಕಂತುಗಳನ್ನು ಪೂರೈಸಿದೆ. ಹೆಣ್ಣು ಮಕ್ಕಳಿಗೆ ಶಿಕ್ಷಣ, ಪರೀಕ್ಷೆಯನ್ನು ಎದುರಿಸುವುದು, ತಾಪಮಾನ ವೈಪ ರೀತ್ಯ ಹಾಗೂ ಮಾದಕದ್ರವ್ಯ ವ್ಯಸನ ಸೇರಿದಂತೆ ಹಲವು ವಿಷಯ ಗಳ ಬಗ್ಗೆ ಈ 50 ಕಂತುಗಳಲ್ಲಿ ಪ್ರಧಾನಿ ಮೋದಿ ಮಾñ ನಾಡಿದ್ದಾರೆ. 2014 ಅಕ್ಟೋಬರ್ನಲ್ಲಿ ಮೊದಲ ಬಾರಿಗೆ ಆರಂಭಿಸಿದ ಈ ಮನ್ ಕಿ ಬಾತ್ನಲ್ಲಿ, ಖಾದಿ ಉತ್ಪನ್ನವನ್ನು ಬಳಸುವಂತೆ ಜನರಿಗೆ ಕರೆ ನೀಡಿದ್ದರು. ಈ ಕಂತು ಪ್ರಸಾರವಾದ ನಂತರದಲ್ಲಿ ಖಾದಿ ಉತ್ಪನ್ನದ ಮಾರಾಟ ಶೇ. 120ರಷ್ಟು ವೃದ್ಧಿಯಾಗಿದೆ ಎಂದು ಪ್ರಧಾನಿ ಕಚೇರಿ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಪ್ರತಿ ತಿಂಗಳ ಮೊದಲ ಭಾನುವಾರದಂದು ಆಲ್ ಇಂಡಿಯಾ ರೇಡಿಯೋ ಹಾಗೂ ದೂರದರ್ಶನದಲ್ಲಿ ಮನ್ ಕಿ ಬಾತ್ ಕಾರ್ಯಕ್ರಮ ಪ್ರಸಾರವಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!
Loksabha election; ಕಾಂಗ್ರೆಸ್ ವಿರುದ್ಧ ಮೋದಿ ಈಗ ದೇಶ ವಿಭಜನೆ ಅಸ್ತ್ರ ಪ್ರಯೋಗ
Lok Sabha Election; ಕೇಜ್ರಿವಾಲ್ ಸೆರೆ ಆಪ್ಗೆ ವರವೇ? ಶಾಪವೇ?
Patanjali; ತಪ್ಪು ಜಾಹೀರಾತಿನ ಗಾತ್ರದಲ್ಲೇ ಕ್ಷಮೆ ಕೇಳಿ: ರಾಮದೇವ್ ಗೆ ಸುಪ್ರೀಂ
Defense Expenditure: 2023ರಲ್ಲಿ ವಿಶ್ವದಲ್ಲೇ ಭಾರತಕ್ಕೆ ನಾಲ್ಕನೇ ಸ್ಥಾನ