ಮಾವೋವಾದ, ಮತಾಂತರ ಅಪಾಯಕಾರಿ: ಬಿಜೆಪಿ ಕೈಪಿಡಿಯಲ್ಲಿ ಉಲ್ಲೇಖ
Team Udayavani, Sep 3, 2018, 12:39 PM IST
ಪುಣೆ/ರಾಯು³ರ: “ಪಾಕಿಸ್ತಾನ, ಚೀನಾ ದಿಂದ ದೇಶದಲ್ಲಿರುವ ಮಾವೋವಾದಿಗ ಳಿಗೆ ನಿರಂತರ ಬೆಂಬಲ ಸಿಗುತ್ತಿದೆ. ಬಲ ವಂತದ ಮತಾಂತರ ದೇಶಕ್ಕೆ ಅಪಾಯ ಕಾರಿ.’ ಹೀಗೆಂದು ಬಿಜೆಪಿಯ ಹೊಸ ಪದಾಧಿಕಾರಿಗಳು, ಕಾರ್ಯಕರ್ತರಿಗೆ ತರಬೇತಿ ನೀಡುವ ನಿಟ್ಟಿನಲ್ಲಿ ಸಿದ್ಧ ಪಡಿಸ ಲಾಗಿರುವ ಕೈಪಿಡಿಯಲ್ಲಿ ಉಲ್ಲೇಖೀಸಲಾಗಿದೆ.
“ಮಾವೋವಾದಿಗಳನ್ನು ನಕ್ಸಲೀಯರು ಎಂದು ಕರೆಯಲಾಗುತ್ತದೆ. ಈಶಾನ್ಯ ರಾಜ್ಯಗಳಲ್ಲಿರುವ ಭಯೋತ್ಪಾದಕ ಗುಂಪು ಗಳ ಜತೆ ಸೇರಿ ಅವರು ಜಂಟಿ ದಾಳಿ ನಡೆಸಲು ಯೋಜನೆ ರೂಪಿಸುತ್ತಿದ್ದಾರೆ’ ಎಂದು ಬರೆಯಲಾಗಿದೆ. ಇದಲ್ಲದೆ ಬಲ ವಂತದ ಮತಾಂತರ ಕೂಡ ಕೆಲವೊಂದು ರಾಜ್ಯಗಳಲ್ಲಿ ಒಟ್ಟೂ ವ್ಯವಸ್ಥೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ಅದಕ್ಕಾಗಿ ಹಣದ ಆಮಿಷ, ಗೂಂಡಾಗಳನ್ನು ಬಳಕೆ ಮಾಡಲಾಗುತ್ತದೆ ಎಂದು ಕೈಪಿಡಿಯಲ್ಲಿ ಉಲ್ಲೇಖೀಸಲಾಗಿದೆ.
ಹೆಚ್ಚುವರಿ 90 ದಿನ: ಭೀಮಾ-ಕೋರೆ ಗಾಂವ್ ಹಿಂಸಾಚಾರಕ್ಕೆ ಸಂಬಂಧಿಸಿ ಜೂನ್‌ನಲ್ಲಿ ಬಂಧಿತರಾಗಿರುವ ಐವರ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಕೆಗೆ ಪುಣೆ ಪೊಲೀಸರಿಗೆ 90 ದಿನಗಳ ಕಾಲಾವಕಾಶ ಸಿಕ್ಕಿದೆ. ಹಾಲಿ ಬಂಧಿತರಾಗಿರುವವರ ನ್ಯಾಯಾಂಗ ಬಂಧನ ಅವಧಿ ಸೆ.3ರಂದು ಮುಕ್ತಾಯವಾಗುವ ಹಿನ್ನೆಲೆಯಲ್ಲಿ ಶನಿ ವಾರವೇ ಪೊಲೀಸರು ಅಕ್ರಮ ಚಟು ವಟಿಕೆಗಳ ನಿಷೇಧ ಕಾಯ್ದೆ (ಯುಎಪಿಎ) ಕೋರ್ಟ್‌ಗೆ ಮತ್ತೆ ಅವಧಿ ವಿಸ್ತರಿಸುವಂತೆ ಮನವಿ ಮಾಡಿದ್ದರು. “ತನಿಖೆ ಇನ್ನೂ ಪ್ರಗತಿಯಲ್ಲಿ ಇರುವುದರಿಂದ ಇನ್ನೂ 90 ದಿನಗಳ ಕಾಲಾವಕಾಶಬೇಕು ಎಂದು ಕೇಳಿ ಕೊಂಡಿದ್ದೆವು. ಕೋರ್ಟ್ ಅದನ್ನು ಪುರಸ್ಕರಿ ಸಿದೆ’ ಎಂದು ಪುಣೆ ಪೊಲೀಸ್ ಆಯುಕ್ತ ಶಿವಾಜಿ ಪವಾರ್ ಪ್ರತಿಕ್ರಿಯೆ ನೀಡಿದ್ದಾರೆ. ಆ.28ರಂದು ಪಿ.ವರವರ ರಾವ್, ವೆರ್ನಾನ್ ಗೊನ್ಸಾಲ್ವಿಸ್, ಅರುಣ್ ಫೆರೇರಾ, ಸುಧಾ ಭಾರದ್ವಾಜ್‌ರನ್ನು ಬಂಧಿಸಲಾಗಿತ್ತು.
ನಾಲ್ವರು ನಕ್ಸಲರ ಹತ್ಯೆ
ಛತ್ತೀಸ್‌ಗಡದ ನಾರಾಯಣಪುರ ಜಿಲ್ಲೆಯಲ್ಲಿ ಭಾನುವಾರ ನಡೆದ ಎನ್‌ಕೌಂಟರ್‌ನಲ್ಲಿ ನಾಲ್ವರು ನಕ್ಸಲರನ್ನು ಭದ್ರತಾಪಡೆಗಳು ಹತ್ಯೆಗೈದಿವೆ. ಮೃತ ನಕ್ಸಲರ ಪೈಕಿ ಒಬ್ಬ ಮಹಿಳೆಯೂ ಸೇರಿ ದ್ದಾರೆ ಎಂದು ನಾರಾಯಣಪುರ ಎಸ್‌ಪಿ ಜಿತೇಂದ್ರ ಶುಕ್ಲಾ ತಿಳಿಸಿದ್ದಾರೆ. ಗುಮಿ ಯಬೇಡಾ ಗ್ರಾಮದ ಅರಣ್ಯ ದಲ್ಲಿ ಎನ್‌ಕೌಂಟರ್ ನಡೆದಿದ್ದು, ಗುಂಡಿನ ಚಕಮಕಿ ಬಳಿಕ ನಾಲ್ವರು ಮೃತಪಟ್ಟರೆ, ಉಳಿದ ನಕ್ಸಲರು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಘಟನಾ ಸ್ಥಳದಿಂದ ಹಲವು ಶಸ್ತ್ರಾಸ್ತ್ರಗಳನ್ನು ವಶ ಪಡಿಸಿಕೊಳ್ಳಲಾಗಿದೆ ಎಂದು ಶುಕ್ಲಾ ಮಾಹಿತಿ ನೀಡಿದ್ದಾರೆ.
ಮೃತದೇಹ ಪತ್ತೆ
ಏತನ್ಮಧ್ಯೆ, ಛತ್ತೀಸ್‌ಗಡದಿಂದ ಆ.26ರಂದು ನಕ್ಸಲರಿಂದ ಅಪಹರಣಕ್ಕೀಡಾಗಿದ್ದ ಇಬ್ಬರು ವ್ಯಕ್ತಿಗಳ ಮೃತದೇಹ ಭಾನುವಾರ ಮಹಾರಾಷ್ಟ್ರದಲ್ಲಿ ಪತ್ತೆಯಾಗಿದೆ. ಛತ್ತೀಸ್‌ಗಡದ ಬಂಡೆ ಗ್ರಾಮದಿಂದ ಸೋನಾ ಪಧಾ ಮತ್ತು ಸೋಮ್‌ಜೀ ಪಧಾ ಎಂಬವರನ್ನು ನಕ್ಸಲರು ಅಪಹರಿಸಿದ್ದರು. ಅವರಿಗಾಗಿ ಶೋಧ ಕಾರ್ಯ ನಡೆಯುತ್ತಿತ್ತು. ಆದರೆ, ಅಪಹರಣವಾದ 300 ಕಿ.ಮೀ. ದೂರದಲ್ಲಿ ರಸ್ತೆಯೊಂದರ ಪಕ್ಕ ಮೃತದೇಹ ಸಿಕ್ಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರೈತರಿಗೆ ಬಡ್ಡಿ ದರ ಇಳಿಕೆ ಸಿಹಿ: ಶೇ.1.5ರಷ್ಟು ಬಡ್ಡಿ ವಿನಾಯಿತಿ
ದಿಲ್ಲಿಗೆ ಮತ್ತೆ ಕೋವಿಡ್ ಏರಿಕೆ: ಸೋಂಕಿತರಲ್ಲಿ ಶೇ.60 ಮಂದಿ ಆಸ್ಪತ್ರೆಗೆ ದಾಖಲು
ಶೇ.72 ಸಚಿವರ ವಿರುದ್ಧ ಕ್ರಿಮಿನಲ್ ಕೇಸು; ಬಿಹಾರ ಸಂಪುಟದ ಬಗ್ಗೆ ಎಡಿಆರ್ ಅಧ್ಯಯನ ವರದಿ
“ರೋಹಿಂಗ್ಯಾ ವಲಸಿಗರಿಗೆ ಫ್ಲ್ಯಾಟ್ ಕೊಡಲು ನಿರ್ದೇಶಿಸಿಲ್ಲ’
ಉಚಿತ ಕೊಡುಗೆ: ಪಕ್ಷಗಳಿಗೆ ತಡೆ ಸಾಧ್ಯವಿಲ್ಲ: ಸುಪ್ರೀಂಕೋರ್ಟ್
MUST WATCH
ಹೊಸ ಸೇರ್ಪಡೆ
ಮನೆಬಾಗಿಲಿಗೆ ರೈಲ್ವೆ ಪಾರ್ಸೆಲ್ ತರಲಿದ್ದಾನೆ ಅಂಚೆಯಣ್ಣ
ಬೊಮ್ಮಾಯಿಗೆ ಚೌತಿ ಚಂದ್ರನಂತಾದ ಜನೋತ್ಸವ: 28ರ ಜನೋತ್ಸವ ಮತ್ತೆ ಮುಂದಕ್ಕೆ..
ಕೋಡಿ ಹೊಸಬೆಂಗ್ರೆಯಲ್ಲಿ ಕಡಲ್ಕೊರೆತ : ಮನೆ, ರಸ್ತೆ ಅಪಾಯದಲ್ಲಿ; ತಾತ್ಕಾಲಿಕ ಪರಿಹಾರ
ಎಪಿಕ್ ಕಾರ್ಡ್ಗೆ ಆಧಾರ್ ನಂಬರ್ ಲಿಂಕ್ : ಪ್ರಕ್ರಿಯೆ ಚುರುಕುಗೊಳಿಸಲು ಡಿಸಿ ಸೂಚನೆ
ಹೆಚ್ಚುತ್ತಿರುವ ಅಪರಾಧ ಪ್ರಕರಣ : ಮತ್ತೆ ವಾಹನಗಳ ಟಿಂಟ್ ಮೇಲೆ ಪೊಲೀಸ್ ಕಣ್ಣು