ಮಾರುತಿ ಸುಝುಕಿಯಿಂದ ಭರ್ಜರಿ ಆಫ‌ರ್‌: 1 ಲಕ್ಷ ರೂ.ವರೆಗೆ ದರ ಕಡಿತ

Team Udayavani, Sep 6, 2019, 7:24 PM IST

ಹೊಸದಿಲ್ಲಿ: ದೇಶದ ಕಾರು ಮಾರುಕಟ್ಟೆ ಸಂಕಷ್ಟ ಸ್ಥಿತಿಯಲ್ಲಿರುವಾಗಲೇ ಕಡಿಮೆ ಮಾರಾಟ ದಾಖಲಿಸಿದ್ದ ಪ್ರಮುಖ ಕಾರು ತಯಾರಿಕೆ ಕಂಪೆನಿ ಮಾರುತಿ ಸುಝುಕಿ ಭರ್ಜರಿ ಆಫ‌ರ್‌ಗಳನ್ನು ಘೋಷಿಸಿದೆ. ಈ ಮೂಲಕ ಮಾರಾಟ ಹೆಚ್ಚಿಸಲು ಅದು ಮುಂದಾಗಿದೆ.

ಮಾರುತಿ ಸುಝುಕಿಯ ಹಲವು ಮಾಡೆಲ್‌ಗ‌ಳ ಮೇಲೆ ಈ ದರ ಕಡಿತ ಆಫ‌ರ್‌ ಅನ್ವಯವಾಗಲಿದೆ. ವಿತಾರಾ ಬ್ರೀಝಾಕ್ಕೆ 1.05 ಲಕ್ಷ ರೂ.ವರೆಗೆ, ಡಿಜೈರ್‌ಗೆ 90 ಸಾವಿರ ರೂ.ವರೆಗೆ, ಸ್ವಿಫ್ಟ್ ಗೆ 80 ಸಾವಿರ ರೂ.ವರೆಗೆ, ಆಲ್ಟೋ, ಆಲ್ಟೋಕೆ10ಗೆ 70 ಸಾವಿರ ರೂ.ವರೆಗೆ, ಸೆಲರಿಯೋಗೆ 70 ಸಾವಿರ ರೂ.ವರೆಗೆ, ಆಮ್ನಿಗೆ 35 ಸಾವಿರ ರೂ.ವರೆಗೆ, ವ್ಯಾಗನ್‌ಆರ್‌ಗೆ 25 ಸಾವಿರ ರೂ.ವರೆಗೆ ಇಕೋಗೆ 55 ಸಾವಿರ ರೂ.ವರೆಗೆ ದರ ಕಡಿತ ಘೋಷಿಸಲಾಗಿದೆ. ದೇಶಾದ್ಯಂತ ಮಾರುತಿ ಸುಝುಕಿ ಡೀಲರ್‌ಶಿಪ್‌ ಗಳಲ್ಲಿ ಈ ಆಫ‌ರ್‌ ಸಿಗಲಿದೆ. ಮುಂದಿನ ಹಬ್ಬದ ಸಮಯದಲ್ಲಿ ಮಾರುತಿ ಕಾರು ಮಾರಾಟ ಹೆಚ್ಚಳಕ್ಕೆ ಎದುರು ನೋಡುತ್ತಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ