ಎಲೆಕ್ಟ್ರಿಕ್ ಕಾರು ಪರೀಕ್ಷೆ
Team Udayavani, Sep 8, 2018, 6:00 AM IST
ನವದೆಹಲಿ: ಇನ್ನು ಎರಡು ವರ್ಷಗಳಲ್ಲಿ ದೇಶದಲ್ಲಿ ವಿದ್ಯುತ್ ಚಾಲಿತ ಕಾರುಗಳನ್ನು ಉತ್ಪಾದಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಲು ಮಾರುತಿ ಸುಜುಕಿ ಮುಂದಾಗಿದೆ. ಅದಕ್ಕೆ ಪೂರಕವಾಗಿ ಮುಂದಿನ ತಿಂಗಳಿಂದ 50 ವಿದ್ಯುತ್ ಚಾಲಿತ ಕಾರುಗಳನ್ನು ಭಾರತ ಮತ್ತು ವಿಶ್ವದ ಇತರ ರಾಷ್ಟ್ರಗಳಲ್ಲಿ ಪ್ರಯೋಗಕ್ಕೆ ಒಳಪಡಿಸಲು ನಿರ್ಧರಿಸಿದೆ. ಇದರ ಜತೆಗೆ ಈಗಾಗಲೇ ಘೋಷಣೆ ಮಾಡಿರುವಂತೆ ಟೊಯೋಟಾ ಮೋಟಾರ್ ಕಾರ್ಪೊರೇಷನ್ ಜತೆಗೆ ಮಾರುತಿ ಹೊಂದಿರುವ ಸಹಭಾಗಿತ್ವವೂ ಮುಂದುವರಿಯಲಿದೆ ಎಂದು ಸುಜುಕಿ ಮೋಟಾರ್ ಕಾರ್ಪೊರೇಷನ್ ಅಧ್ಯಕ್ಷ ಒಸುಮು ಸುಜುಕಿ ಹೇಳಿದ್ದಾರೆ.
ನೀತಿ ಆಯೋಗ ಏರ್ಪಡಿಸಿದ್ದ “ಮೂವ್’ ಸಮ್ಮೇಳನದಲ್ಲಿ ಮಾತನಾಡಿದ ಅವರು, ಭಾರತದ ಪರಿಸರ ಮತ್ತು ರಸ್ತೆಯ ಸ್ಥಿತಿಗೆ ಅನುಗುಣವಾಗಿ ವಿದ್ಯುತ್ ಕಾರುಗಳ ಪರೀಕ್ಷೆ ನಡೆಯಬೇಕಾಗಿದೆ ಎಂದು ಹೇಳಿದ್ದಾರೆ. ಮಾರುತಿಯ ವ್ಯಾಗನ್ ಆರ್ ಕಾರ್‌ನ 2018ನೇ ಸಾಲಿನ ಮಾದರಿಯನ್ನು ವಿದ್ಯುತ್‌ಚಾಲಿತ ಕಾರು ಪರೀಕ್ಷೆಗಾಗಿ ಬಳಕೆ ಮಾಡಲಾಗುತ್ತದೆ. ಮಾತ್ರವಲ್ಲದೆ 2020ರ ವೇಳೆ ವ್ಯಾಗನ್‌ಆರ್ ಕಾರು ವಿದ್ಯುತ್ ಚಾಲಿತ ಕಾರು ಆಗಿ ದೇಶದ ರಸ್ತೆಗಳಲ್ಲಿ ಸಂಚಾರ ನಡೆಸುವ ಸಾಧ್ಯತೆ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಡಿಮೆ ದರದಲ್ಲಿ 4G ಮೊಬೈಲ್,ಎರಡು ವರ್ಷ ಉಚಿತ ಕರೆ … ‘ಜಿಯೋ’ ಹೊಸ ಆಫರ್ ಘೋಷಣೆ
ಹಿಮಾಚಲ ಪ್ರದೇಶ ರಾಜ್ಯಪಾಲರನ್ನೇ ಅಡ್ಡಗಟ್ಟಿ ಎಳೆದಾಡಿದ ಕಾಂಗ್ರೆಸ್ ಶಾಸಕರು! ಐವರು ಅಮಾನತು
ಜಿಎಸ್ ಟಿ, ತೈಲ ಬೆಲೆ ಏರಿಕೆ ಖಂಡಿಸಿ ದೇಶವ್ಯಾಪಿ ಮಾರುಕಟ್ಟೆ ಬಂದ್, ಮಿಶ್ರ ಪ್ರತಿಕ್ರಿಯೆ
ಕಂಟೆಂಟ್ ಮೇಲೆ ಕಣ್ಣು : ಸೋಶಿಯಲ್ ಮೀಡಿಯಾ, ಒಟಿಟಿಗಳಿಗೆ ಅಂಕುಶ
ಚೀನ ಬೆನ್ನಲ್ಲೇ ಪಾಕ್ ಸ್ನೇಹಹಸ್ತ: ಎಲ್ಒಸಿಯಲ್ಲಿ ಕದನ ವಿರಾಮ