ದಿಲ್ಲಿ ಗೋದಾಮಿನಲ್ಲಿ ಬೆಂಕಿ ದುರಂತ: ಇಬ್ಬರ ಸಾವು, ಐವರಿಗೆ ಗಾಯ
Team Udayavani, Sep 4, 2018, 7:14 PM IST
ಹೊಸದಿಲ್ಲಿ : ದಿಲ್ಲಿಯ ಸಂಜಯ್ ಗಾಂಧಿ ಟ್ರಾನ್ಸ್‌ಪೊàರ್ಟ್ ನಗರದಲ್ಲಿನ ಗೋದಾಮಿನಲ್ಲಿ ಸಂಭವಿಸಿದ ಭೀಕರ ಆಗ್ನಿ ದುರಂತಕ್ಕೆ ಇಬ್ಬರು ಬಲಿಯಾಗಿದ್ದಾರೆ; ಐವರು ಗಾಯಗೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ.
ಅಗ್ನಿ ದುರಂತದ ಸುದ್ದಿ ತಿಳಿದೊಡನೆಯೇ 11 ಅಗ್ನಿ ಶಾಮಕಗಳನ್ನು ಸ್ಥಳಕ್ಕೆ ರವಾನಿಸಲಾಗಿದೆ. ಸಂಜೆ 4.20ರ ಹೊತ್ತಿಗೆ ದುರಂತದ ಸುದ್ದಿ ತಿಳಿದು ಬಂತು.
ಅಗ್ನಿ ದುರಂತಕ್ಕೆ ಸಿಲುಕಿರುವ ರಕ್ಷಣಾ ಕಾರ್ಯ ಈಗಲೂ ನಡೆಯುತ್ತಿದೆ. ಹಾಗೆಯೇ ಬೆಂಕಿಯನ್ನು ನಂದಿಸುವ ಕೆಲಸವೂ ಸಮರೋಪಾದಿಯಲ್ಲಿ ನಡೆಯುತ್ತಿದೆ ಎಂದು ದಿಲ್ಲಿ ಅಗ್ನಿ ಶಾಮಕ ಸೇವೆಯ ಅಧಿಕಾರಿ ತಿಳಿಸಿದ್ದಾರೆ.
ಬೆಂಕಿ ಅವಘಡಕ್ಕೆ ಕಾರಣವೇನೆಂದು ಗೊತ್ತಾಗಿಲ್ಲ. ಗೋದಾಮಿಯಲ್ಲಿ ಇರಿಸಲಾಗಿದ್ದ ಸಿಎನ್‌ಜಿ ಕಿಟ್‌ಗಳೇ ಅಗ್ನಿ ದುರಂತಕ್ಕೆ ಕಾರಣವಿರಬಹುದೆಂದು ಶಂಕಿಸಲಾಗಿದೆ.