ವೈದ್ಯರು ಸತ್ತಿದೆ ಎಂದಿದ್ದ ಮಗು ಬದುಕಿತ್ತು!

Team Udayavani, Dec 2, 2017, 7:00 AM IST

ಹೊಸದಿಲ್ಲಿ: ಬದುಕಿದ್ದ ಮಗುವೊಂದನ್ನು ಸತ್ತಿದೆ ಎಂದು ಹೇಳುವ ಮೂಲಕ ಖಾಸಗಿ ಆಸ್ಪತ್ರೆಯ ವೈದ್ಯರೊಬ್ಬರು ಬೇಜವಾಬ್ದಾರಿಯಾಗಿ ಕರ್ತವ್ಯ ನಿರ್ವಹಿಸಿರುವ ಘಟನೆ ದಿಲ್ಲಿಯಲ್ಲಿ ನಡೆದಿದೆ.  

ದಿಲ್ಲಿಯ ಶಾಲಿಮಾರ್‌ ಬಾಗ್‌ನಲ್ಲಿರುವ ಪ್ರತಿಷ್ಠಿತ ಆಸ್ಪತ್ರೆಯೊಂದರಲ್ಲಿ ಹೆರಿಗೆಯಾಗಿದ್ದ ಮಹಿಳೆಯೊಬ್ಬರಿಗೆ ಅವಳಿಗಳು ಜನಿಸಿದ್ದವು. ಆದರೆ, ಎರಡೂ ಅವಳಿಗಳು ಸಾವನ್ನಪ್ಪಿವೆ ಎಂದಿದ್ದ ವೈದ್ಯರು ಆ ಎರಡೂ ಶಿಶುಗಳ ಕಳೇಬರಗಳನ್ನು ಪ್ಲಾಸಿಕ್‌ ಚೀಲದಲ್ಲಿ ಹಾಕಿ ಹೆತ್ತವರಿಗೆ ಕೊಟ್ಟಿದ್ದರು. ಕಣ್ಣೀರಿಟ್ಟು ಅಂತ್ಯ ಸಂಸ್ಕಾರಕ್ಕಾಗಿ ಕೊಂಡೊಯ್ಯುವಾಗ, ಪ್ಲಾಸ್ಟಿಕ್‌ ಚೀಲದಲ್ಲಿದ್ದ ಶಿಶುಗಳಲ್ಲೊಂದು ಬದುಕಿರುವುದು ಗಮನಕ್ಕೆ ಬಂದಿತ್ತು!

ತಕ್ಷಣವೇ, ಹತ್ತಿರದಲ್ಲಿದ್ದ ಆಸ್ಪತ್ರೆಯೊಂದಕ್ಕೆ ಎರಡೂ ಮಕ್ಕಳನ್ನು ಕೊಂಡೊಯ್ದಾಗ ಒಂದು ಮಗು ಜೀವಂತವಾಗಿ ರುವುದನ್ನು ಅಲ್ಲಿನ ವೈದ್ಯರು ಖಚಿತಪಡಿಸಿದ್ದಾರೆ.  ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಆಸ್ಪತ್ರೆಯ ಆಡಳಿತ ಮಂಡಳಿ, ಪ್ರಕರಣಕ್ಕೆ ಹೆರಿಗೆ ಮಾಡಿದ ವೈದ್ಯರೇ ಕಾರಣ ಎಂದಿದೆ. ಈ ಕುರಿತು ತನಿಖೆಗೂ ಆದೇಶಿಸಲಾಗಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ