ಪ್ರಧಾನಿ ಮೋದಿಗೆ 23 ವರ್ಷದಿಂದಲೂ ರಾಖಿ ಕಟ್ಟುತ್ತಿರುವ ಪಾಕ್‌ ಸಹೋದರಿ

Team Udayavani, Aug 7, 2017, 11:52 AM IST

ಹೊಸದಿಲ್ಲಿ : ತನ್ನ ಮದುವೆ ಬಳಿಕ ಭಾರತದಲ್ಲಿ ವಾಸವಾಗಿರುವ ಪಾಕ್‌ ಮೂಲದ ಮಹಿಳೆ ಕಮರ್‌ ಮೊಹಿಸಿನ್‌ ಶೇಖ್‌ ಅವರು ಕಳೆದ 23 ವರ್ಷಗಳಿಂದಲೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಾಖೀ ಕಟ್ಟುತ್ತಲೇ ಬಂದಿದ್ದಾರೆ.

”ನಾನು ಮದುವೆಯಾಗಿ ಭಾರತಕ್ಕೆ ಬಂದಂದಿನಿಂದಲೂ ವರ್ಷಂಪ್ರತಿ ಸಹೋದರ ಮೋದಿಗೆ ತಾನು ರಾಖೀ ಕಟ್ಟುತ್ತಲೇ ಬಂದಿದ್ದೇನೆ” ಎಂದಾಕೆ ಸಂಭ್ರಮದಿಂದ ಹೇಳುತ್ತಾರೆ. 

“ಈ ಬಾರಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಿಡುವೇ ಇರಲಿಕ್ಕಿಲ್ಲವೆಂದು ನಾನು ಭಾವಿಸಿದ್ದೆ. ಆದರೆ ಎರಡು ದಿನಗಳ ಹಿಂದೆ ಮೋದಿ ಅವರೇ ನನಗೆ ಫೋನ್‌ ಮಾಡಿ ರಾಖೀ ಬಂಧನವನ್ನು ನೆನಪಿಸಿಕೊಟ್ಟರು. ಇದೀಗ ನಾನು ಸಹೋದರ ಮೋದಿ ಅವರಿಗೆ ರಾಖೀ ಕಟ್ಟುವುದಕ್ಕಾಗಿ ಸಿದ್ಧತೆ ಮಾಡಿಕೊಳ್ಳುತ್ತಿದ್ದೇನೆ’ ಎಂದು ಶೇಖ್‌ ಹೇಳಿರುವುದನ್ನು ಎಎನ್‌ಐ ಸುದ್ದಿ ಸಂಸ್ಥೆ ವರದಿ ಮಾಡಿದೆ. 

“ಮದುವೆಯಾಗಿ ಭಾರತಕ್ಕೆ ಬಂದ ಮೊದಲಲ್ಲಿ ನಾನು ನರೇಂದ್ರ ಭಾಯಿಗೆ ರಾಖೀ ಕಟ್ಟಿದಾಗ ಅತ ಕಾರ್ಯಕರ್ತನಾಗಿದ್ದರು. ತನ್ನ ಕಠಿನ ಪರಿಶ್ರಮ, ಶಿಸ್ತು ಮತ್ತು ಶ್ರದ್ಧೆಯ ಫ‌ಲವಾಗಿ ಅವರಿಂದು ದೇಶದ ಪ್ರಧಾನಿಯಾಗಿದ್ದಾರೆ’ ಎಂದು ಶೇಖ್‌ ಹೆಮ್ಮೆ ಮತ್ತು ಸಂಭ್ರಮದಿಂದ ಹೇಳಿದರು. 

ಈ ನಡುವೆ ಪ್ರಧಾನಿ ಮೋದಿ ಅವರಿಂದು ಟ್ವಿಟರ್‌ ಮೂಲಕ ದೇಶದ ಜನತೆಗೆ ರಕ್ಷಾ ಬಂಧನದ ಶುಭಕಾಮನೆಗಳನ್ನು ಹೇಳಿದ್ದಾರೆ. 

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಕಡಬ: ರಾಜ್ಯದಲ್ಲಿ ಘೋಷಣೆಯಾಗಿರುವ ಎಲ್ಲ 50 ನೂತನ ತಾಲೂಕುಗಳು ಅನುದಾನದ ಕೊರತೆಯಿಂದ ಕಾರ್ಯಾರಂಭ ಮಾಡಿಲ್ಲ. ಆರು ದಶಕಗಳ ಹೋರಾಟದ ಫಲವಾಗಿ ಘೋಷಣೆಯಾದ ಕಡಬ ತಾಲೂಕಿನ...

  • ಒಂದು ದಿನ ಮಧ್ಯಾಹ್ನ ಮರವೊಂದು ತಿಳಿಗಾಳಿಗೆ ತಾನೇ ತೂಗಿಕೊಳ್ಳುತ್ತ ನಿದ್ರಿಸುತ್ತಿತ್ತು. ಅಷ್ಟರಲ್ಲಿ ಮಹಾನ್‌ ಪಂಡಿತನಾದ ಡಾಂಗೌಜಿ ತನ್ನ ಸ್ನೇಹಿತನೊಡನೆ...

  • ಲಕ್ಷಾಂತರ ರೂಪಾಯಿ ವ್ಯಯಿಸಿ ಅಳವಡಿಸಿರುವ ರಬ್ಬರ್‌ ಕೋನ್‌ಗಳ ಪ್ರಸ್ತುತ ಸ್ಥಿತಿ ಹೇಗಿದೆ ಎಂದು ತಿಳಿಯುವ ನಿಟ್ಟಿನಲ್ಲಿ "ಸುದಿನ' ತಂಡವು ರಿಯಾಲಿಟಿ ಚೆಕ್‌ ನಡೆಸಿದೆ....

  • ಮನೆಯ ಸುತ್ತುಮುತ್ತಲಿನಲ್ಲಿ ಬರುವ ಪ್ರತಿಯೊಂದು ಹಕ್ಕಿಗೂ ಅದರದ್ದೇ ಆದ ಚೆಲುವು, ಬೆಡಗು, ಆಕರ್ಷಣೆ. ಅಶ್ವತ್ಥಮರದ ಎಲೆಗಳ ನಡುವೆ ಕುಳಿತಿರುವ ವಸಂತದ ಹಕ್ಕಿ ಕಣ್ಣಿಟ್ಟು...

  • ಭಾರತದ ಗೋಪರಂಪರೆಯಲ್ಲೂ ಹೈನುಗಾರಿಕೆ ತಳಿಗಳಲ್ಲಿ ಗೀರ್‌ ವಿಶಿಷ್ಟ ಸ್ಥಾನ. ಭಾರತೀಯ ಪರಂಪರೆಯಲ್ಲಿ ಹೆಚ್ಚು ಹಾಲು ಕೊಡುವ ತಳಿಗಳಲ್ಲಿ ಇದು ಎರಡನೆಯದು. ಗುಜರಾತಿನ...