ಬೆಲೆ ಏರಿಕೆ ವಿರುದ್ಧ ಅಂದೂ ಇಂದೂ ಆಮಿರ್ ಚಿತ್ರದ ಹಾಡು ಜನಪ್ರಿಯ !
Team Udayavani, Sep 10, 2018, 3:47 PM IST
ಹೊಸದಿಲ್ಲಿ : 2014ರ ಲೋಕಸಭಾ ಚುನಾವಣೆಯಲ್ಲಿ ಆಳುವ ಯುಪಿಎ ಸರಕಾರದ ವಿರುದ್ಧ ಬೆಲೆ ಏರಿಕೆಯನ್ನು ಪ್ರತಿಭಟಿಸಲು ಬಿಜೆಪಿ ವ್ಯಾಪಕವಾಗಿ ಬಳಸಿಕೊಂಡಿದ್ದ ಬಾಲಿವುಡ್ ನಟ ಆಮೀರ್ ಖಾನ್ ಅವರ ಪೀಪ್ಲಿ ಲೈವ್ ಚಿತ್ರದ ಮೆಹಂಗಾಯಿ ದಾಯಾನ್ ಹಾಡನ್ನು ಇಂದು ಭಾರತ್ ಬಂದ್ ಸಂದರ್ಭದಲ್ಲಿ ದಿಲ್ಲಿಯಲ್ಲಿ ಕಾಂಗ್ರೆಸ್ ಪಕ್ಷ ಬಳಸಿಕೊಂಡು ಮುಯ್ಯಿ ತೀರಿಸಿತು.
ನಾಲ್ಕು ವರ್ಷಗಳ ಹಿಂದೆ ಬಿಜೆಪಿ ಪ್ರತಿಭಟನೆಯಲ್ಲಿ ಜನಪ್ರಿಯವಾಗಿದ್ದ ಈ ಹಾಡು ಇಂದು ಕಾಂಗ್ರೆಸ್ ಪ್ರತಿಭಟನೆಯಲ್ಲೂ ಜನಪ್ರಿಯವಾಯಿತು !
ದಿಲ್ಲಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಇಂಧನ ಬೆಲೆ ಏರಿಕೆಯನ್ನು ಪ್ರತಿಭಟಿಸಲು ಎತ್ತಿನ ಗಾಡಿಯ ಮೇಲೆ ಬೈಕನ್ನು ಏರಿಸಿ ಪ್ರದರ್ಶನ ನಡೆಸಿದರು.
ಕಾಂಗ್ರೆಸ್ ನಾಯಕ ಅಜಯ್ ಮಾಕನ್ ಅವರು ಎತ್ತಿನ ಗಾಡಿಯನ್ನು ಏರಿ ಅಲ್ಲೇ ನಿಂತು ಪ್ರತಿಭಟನಕಾರರನ್ನು ಉದ್ದೇಶಿಸಿ ಭಾಷಣ ಮಾಡುತ್ತಿರುವುದು ಕಂಡು ಬಂತು.
ಹಾಗಿದ್ದರೂ ದಿಲ್ಲಿಯಲ್ಲಿ ಇಂದು ಬಂದ್ ಶಾಂತಿಯುತವಾಗಿತ್ತು ಜನಜೀವನ, ವಾಹನ ಸಂಚಾರ ಸಾಮಾನ್ಯವಾಗಿಯೇ ಇತ್ತು. ಕಾಂಗ್ರೆಸ್ ನಾಯಕರೆಲ್ಲ ರಾಮಲೀಲಾ ಮೈದಾನಿನಲ್ಲಿ ಜಮಾಯಿಸಿ ಪ್ರತಿಭಟನೆ ನಡೆಸಿದರು.
ಮಧ್ಯಪ್ರದೇಶದ ಉಜ್ಜೆ„ನ್‌ನಲ್ಲಿ ಪೆಟ್ರೋಲ್ ಪಂಪ್‌ಗ್ಳ ಮೇಲೆ ಕಾಂಗ್ರೆಸ್ ಕಾರ್ಯಕರ್ತರೆನಿಸಿಕೊಂಡ ಪ್ರತಿಭಟನಕಾರರು ದಾಳಿ ನಡೆಸಿ ಅವುಗಳನ್ನು ಧ್ವಂಸಗೈಯಲು ಯತ್ನಿಸಿದರು.
ಮುಂಬಯಿಯಲ್ಲಿ ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಕಾರ್ಯಕರ್ತರು ಅಂಗಡಿ ಮುಂಗಟ್ಟುಗಳನ್ನು ಬಲವಂತದಿಂದ ಮುಚ್ಚಿಸುತ್ತಿರುವುದು ಕಂಡು ಬಂತು; ಇದೇ ಸನ್ನಿವೇಶ ಪರೇಲ್‌ನ ಭಾರತ್‌ಮಾತಾ ಜಂಕ್ಷನ್ ನಾಕಾ ದಲ್ಲೂ ಕಂಡುಬಂತು .
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮದುವೆಗೆ ಒಪ್ಪದ ಕಾರಣ ತಾಯಿ-ಮಗಳನ್ನು ಇರಿದು ಕೊಂದ ಪಾಪಿ..!
ಕೃಷಿ ಕಾಯ್ದೆ ವಿರೋಧಿ ಹೋರಾಟಕ್ಕೆ ಮಹಿಳೆಯರ ಸಾಥ್ : ದೆಹಲಿ ಗಡಿಗೆ ಲಗ್ಗೆಯಿಟ್ಟ ರೈತ ನಾರಿಯರು
ರೈತರು ಪ್ರತಿಭಟನೆ ಮಾಡುತ್ತಿರುವ ಸಿಂಘುವಿನಲ್ಲಿ ಗುಂಡಿನ ದಾಳಿ
ಮಹಿಳಾ ದಿನಾಚರಣೆ : 23 ವರ್ಷಗಳ ನಂತರ ಭಾರತೀಯ ನೌಕಾಪಡೆಗೆ ಮಹಿಳೆಯರ ನೇಮಕ
ಬಿಜೆಪಿ ಮುಖಂಡನ ಮೇಲೆ ಗುಂಡಿನ ದಾಳಿ; ಟಿಎಂಸಿ ಕೈವಾಡ: ಬಿಜೆಪಿ ಆರೋಪ