ಮೀ ಟೂ:ಮತ್ತೊಬ್ಬ ಪ್ರಮುಖ ಬಿಜೆಪಿ ನಾಯಕನ ಮೇಲೆ ಆರೋಪ;ವಜಾ
Team Udayavani, Nov 4, 2018, 5:47 PM IST
ಡೆಹರಾಡೂನ್ : ಎಂ.ಜೆ .ಅಕ್ಬರ್ ಬಳಿಕ ಮತ್ತೊಬ್ಬ ಪ್ರಮುಖ ಬಿಜೆಪಿ ನಾಯಕನ ಮೇಲೆ ಮೀ ಟೂ ಆರೋಪ ಕೇಳಿ ಬಂದಿದೆ.
ಉತ್ತಾರಖಂಡದ ಬಿಜೆಪಿ ಪ್ರಧಾನ ಕಾರ್ಯದರ್ಶಿ, ಹಿರಿಯ ನಾಯಕರಾಗಿರುವ ಸಂಜಯ್ ಕುಮಾರ್ ಅವರ ವಿರುದ್ಧ ಪಕ್ಷದ ಕಾರ್ಯಕರ್ತೆ ಆರೋಪ ಮಾಡಿದ್ದು, ತಕ್ಷಣ ಪಕ್ಷದ ಹುದ್ದೆಯಿಂದ ವಜಾ ಮಾಡಲಾಗಿದೆ.
ಉತ್ತರಾಖಂಡದಲ್ಲಿ ಕೇಳಿ ಬಂದ ಈ ಆರೋಪ ಪಕ್ಷಕ್ಕೆ ಭಾರೀ ಮುಜುಗರ ತಂದಿಟ್ಟಿದೆ. ಹೀಗಾಗಿ ಪಕ್ಷ ತಕ್ಷಣ ಕ್ರಮ ಕೈಗೊಂಡಿದೆ.