2022ರೊಳಗೆ ಸರ್ವರಿಗೂ ಸೂರು: ಮಧ್ಯಮ ವರ್ಗಕ್ಕೆ ಪ‹ಧಾನಿ ಭರವಸೆ


Team Udayavani, Feb 14, 2019, 12:30 AM IST

f-15.jpg

ಹೊಸದಿಲ್ಲಿ: “2022ರ ಹೊತ್ತಿಗೆ ಸರ್ವರಿಗೂ ಸೂರು’ ಎಂಬ ಗುರಿಯನ್ನು ತಲುಪಲು ತಮ್ಮ ಸರಕಾರ, ಮನೆಗಳ ನಿರ್ಮಾಣದ ವೇಗವನ್ನು ದುಪ್ಪಟ್ಟು ಹೆಚ್ಚಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ. ರಿಯಲ್‌ ಎಸ್ಟೇಟ್‌ ಉದ್ಯಮಿಗಳ ಸಮ್ಮೇಳನದಲ್ಲಿ ಮಾತನಾಡಿದ ಅವರು, 2022ರೊಳಗೆ ದೇಶದ ಎಲ್ಲ ಬಡವರಿಗೆ ಸ್ವಂತ ಮನೆಯನ್ನು ನೀಡುವ ಉದ್ದೇಶದಿಂದ ಈವರೆಗೆ 1.5 ಕೋಟಿ ಮನೆಗಳನ್ನು ಕಟ್ಟಲಾಗಿದೆ. ಯೋಜನೆ ಆರಂಭವಾದಾಗಿನ ವೇಗಕ್ಕಿಂತ ದುಪ್ಪಟ್ಟು ವೇಗದಲ್ಲಿ ಈ ಮನೆಗಳನ್ನು ನಿರ್ಮಿಸಲಾಗುತ್ತಿದ್ದು, 2022ರೊಳಗೆ ಈ ಕನಸು ನನಸು ಮಾಡಲು ಶತಪ್ರಯತ್ನ ಮಾಡಲಾಗುತ್ತಿದೆ ಎಂದಿದ್ದಾರೆ. 2019-20ನೇ ವಿತ್ತೀಯ ವರ್ಷಕ್ಕಾಗಿ ತಮ್ಮ ಸರಕಾರ ಮಂಡಿಸಿರುವ ಮಧ್ಯಾಂತರ ಬಜೆಟ್‌ನಲ್ಲಿ ಗೃಹ ನಿರ್ಮಾಣ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದ ಅವರು, ಸ್ವಂತ ಮನೆ ಕೊಳ್ಳ ಬಯಸುವವರಿಗೆ ಅನೇಕ ರೀತಿಯ ರಿಯಾಯಿತಿ, ಪ್ರೋತ್ಸಾಹಗಳನ್ನು ನೀಡುವ ಮೂಲಕ ಅವರ ಕನಸು ನನಸು ಮಾಡಲು ಪ್ರಯತ್ನಿಸಲಾಗಿದೆ ಎಂದರು. 

ವಾರ್ಷಿಕ 5 ಲಕ್ಷ ರೂ.ಗಳ ವರೆಗೆ ಆದಾಯ ಹೊಂದಿರುವವರನ್ನು ಆದಾಯ ತೆರಿಗೆಯ ವ್ಯಾಪ್ತಿಯಿಂದ ಹೊರಗಿಡಲಾಗಿದೆ.  ಇದೂ ಸಹ ಮಧ್ಯಮ ವರ್ಗದ ಮನೆ ಕೊಳ್ಳುವ ಕನಸಿಗೆ ಸಹಕಾರ ನೀಡಲಿದ್ದು, ಪರೋಕ್ಷವಾಗಿ ಗೃಹ ನಿರ್ಮಾಣ ಕ್ಷೇತ್ರಕ್ಕೆ ವರದಾನವಾಗಲಿದೆ ಎಂದರು. ಇದರ ಜತೆಯಲ್ಲೇ, ಟಿಡಿಎಸ್‌ ಅನ್ವಯವಾಗುವ ಮನೆ ಬಾಡಿಗೆ ಮಿತಿಯನ್ನು 1.8 ಲಕ್ಷ ರೂ.ಗಳಿಂದ 2.4 ಲಕ್ಷ ರೂ.ಗಳಿಗೆ ಏರಿಸಿದ್ದು, ಮನೆ ಬಾಡಿಗೆ ಆದಾಯದ ವಿನಾಯ್ತಿ ಮಿತಿಯನ್ನು ಒಂದು ಮನೆಯಿಂದ ಎರಡು ಮನೆಗಳ ಬಾಡಿಗೆಗೆ ಹೆಚ್ಚಿಸಿದ್ದು, ಒಂದು ಮನೆ ಮಾರಾಟದಿಂದ ಬಂದ ಹಣವನ್ನು ಒಂದರ ಬದಲು ಎರಡು ಗೃಹ ನಿರ್ಮಾಣ ಸಂಬಂಧಿ ಚಟುವಟಿಕೆಗಳಿಗೆ ಹೂಡಿಕೆ ಮಾಡುವ ಅವಕಾಶ ಕಲ್ಪಿಸಿದ್ದು ಹಾಗೂ ಕೈಗೆಟಕುವ ದರದ ಮನೆಗಳ ನೋಂದಾವಣೆಗೆ 10 ವರ್ಷಗಳ ಕಾಲಾವಧಿ ನೀಡುವ ಮೂಲಕ ತೆರಿಗೆಯಿಂದ ಕೊಂಚ ವಿನಾಯಿತಿ ನೀಡಿದ್ದು, ಈ ಎಲ್ಲವೂ ಗೃಹ ನಿರ್ಮಾಣ ಕ್ಷೇತ್ರದ ಬೆಳವಣಿಗೆಗೆ ಹೆಚ್ಚು ಅನುಕೂಲ ಕಲ್ಪಿಸಲಿದೆ ಎಂದರು. ಕಳೆದ ನಾಲ್ಕೂವರೆ ವರ್ಷಗಳಲ್ಲಿ, ಕೇಂದ್ರ ಸರಕಾರವು ರಿಯಲ್‌ ಎಸ್ಟೇಟ್‌ ಉದ್ದಿಮೆಯ ಅಭಿವೃದ್ಧಿಗೆ ಹೆಚ್ಚು ಮಹತ್ವ ಕೊಡುತ್ತಾ ಬಂದಿದೆ ಎಂದರು. ನೋಟು ಅಮಾನ್ಯ ನಿರ್ಧಾರದಿಂದ ತೊಂದರೆಯಾಯಿತು ಎಂಬುದಕ್ಕೆ ಉತ್ತರಿಸಿದ ಅವರು, ಕಪ್ಪು ಹಣವು ಹೂಡಿಕೆಯಾಗುವುದನ್ನು ತಪ್ಪಿಸಲು ನೋಟು ಅಮಾನ್ಯ ನಿರ್ಧಾರ ಕೈಗೊಳ್ಳಲಾಯಿತು ಎಂದರು.

ರಿಯಲ್‌ ಎಸ್ಟೇಟ್‌ ಉದ್ದಿಮೆದಾರರ ಸಮ್ಮೇಳನದಲ್ಲಿ ಪ್ರಧಾನಿ ಮೋದಿ
ದುಪ್ಪಟ್ಟು ವೇಗದಲ್ಲಿ ಗುರಿ ಮುಟ್ಟುವ ಪ್ರಯತ್ನ ಎಂದ ಪ್ರಧಾನಿ
ಬಜೆಟ್‌ನ ಹಲವಾರು ಘೋಷಣೆಗಳಿಂದ ಉದ್ದಿಮೆಗೆ ನೆರವು 

ಟಾಪ್ ನ್ಯೂಸ್

ಚಿಕ್ಕಬಳ್ಳಾಪುರ ಭಾರೀ ಮಳೆ : ಹಲವು ಬಡಾವಣೆ ಜಲಾವೃತ; ವಾಹನ ಸವಾರರ ಪರದಾಟ

ಚಿಕ್ಕಬಳ್ಳಾಪುರ ಭಾರೀ ಮಳೆ: ಹಲವು ಬಡಾವಣೆ ಜಲಾವೃತ; ವಾಹನ ಸವಾರರ ಪರದಾಟ

ನನ್ನ ಅವಧಿಯಲ್ಲೇ ವಿವಿಧ ಸಮುದಾಯಗಳಿಗೆ ಮೀಸಲು ಸೌಲಭ್ಯ : ಬೊಮ್ಮಾಯಿ

ನನ್ನ ಅವಧಿಯಲ್ಲೇ ವಿವಿಧ ಸಮುದಾಯಗಳಿಗೆ ಮೀಸಲು ಸೌಲಭ್ಯ : ಬೊಮ್ಮಾಯಿ

dks

ಸಿದ್ದರಾಮಯ್ಯ ಮೂರನೇ ಭೇಟಿ ಡಿಕೆಶಿ ಅಧ್ಯಕ್ಷ ಪದವಿಗೆ ಕುತ್ತು ತರಲಿದೆಯೇ?;ಬಿಜೆಪಿ ಪ್ರಶ್ನೆ

ರಸ್ತೆ ಗುಂಡಿ ಖಂಡಿಸಿ ಬೈಕ್ ರ‍್ಯಾಲಿ ಗೆದ್ದವರಿಗೆ ಟ್ರೋಪಿ, ನೋವು ನಿವಾರಕ ಮುಲಾಮ್ ಬಹುಮಾನ

ಕಾರ್ಕಳ: ರಸ್ತೆ ಗುಂಡಿ ಖಂಡಿಸಿ ಬೈಕ್ ರ‍್ಯಾಲಿ: ಗೆದ್ದವರಿಗೆ ಟ್ರೋಫಿ,ನೋವು ನಿವಾರಕ ಮುಲಾಮ್

655-aaa

3 ಹೆಣ್ಣು ಹೆತ್ತಿದ್ದಕ್ಕೆ ಕಿರುಕುಳ : ಮಕ್ಕಳೊಂದಿಗೆ ಬಾವಿಗೆ ಜಿಗಿದು ಮಹಿಳೆ ಆತ್ಮಹತ್ಯೆ

yogi

ರಾಮದ್ರೋಹಿಗಳು ರಾಜ್ಯವನ್ನು ಗಲಭೆಯ ಬೆಂಕಿಗೆ ನೂಕಿದರು : ಸಿಎಂ ಯೋಗಿ

ಭಾಗ್ಯವಂತರು ಮರು ಬಿಡುಗಡೆ

ಭಾಗ್ಯವಂತರು ಮರು ಬಿಡುಗಡೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

yogi

ರಾಮದ್ರೋಹಿಗಳು ರಾಜ್ಯವನ್ನು ಗಲಭೆಯ ಬೆಂಕಿಗೆ ನೂಕಿದರು : ಸಿಎಂ ಯೋಗಿ

narendra-modi

ಕೋವಿಡ್ ಲಸಿಕೆಯ ಯಶಸ್ಸು ಭಾರತದ ಸಾಮರ್ಥ್ಯ ತೋರಿಸಿದೆ : ಪ್ರಧಾನಿ ಮೋದಿ

1221

ಶಾರುಖ್ ಖಾನ್ ಬಿಜೆಪಿ ಸೇರಿದರೆ ಡ್ರಗ್ಸ್ ಶುಗರ್ ಪೌಡರ್ ಆಗಲಿದೆ !

bfnbvcx

ಇಂದು ಭಾರತ-ಪಾಕ್‌ ಜಿದ್ದಾ ಜಿದ್ದಿ : ಮೇರೆ ಮೀರಿದೆ ಅಭಿಮಾನಿಗಳ ಉತ್ಸಾಹ  

ಕೋರ್ಟ್‌ಗಳ ಕುಂದುಕೊರತೆ ಬಗ್ಗೆ ಸಿಜೆಐ ರಮಣ ದನಿ

ಕೋರ್ಟ್‌ಗಳ ಕುಂದುಕೊರತೆ ಬಗ್ಗೆ ಸಿಜೆಐ ರಮಣ ದನಿ

MUST WATCH

udayavani youtube

ಕಾಲುವೆಯಲ್ಲಿ ಕೊಚ್ಚಿ ಹೋಗುತ್ತಿದ್ದ ಯುವಕನ ರಕ್ಷಿಸಿದ ಗ್ರಾಮಸ್ಥರು

udayavani youtube

3 ವರ್ಷದಲ್ಲಿ ಫಲ ಬರುವ ತೆಂಗಿನಕಾಯಿ ಇಲ್ಲಿದೆ ನೋಡಿ

udayavani youtube

ರಾಜ್ಯದ ಪಾಲಿಟೆಕ್ನಿಕ್‌ ಶಿಕ್ಷಣದಲ್ಲಿ ಆಮೂಲಾಗ್ರ ಬದಲಾವಣೆ : ಸಚಿವ ಡಾ. ಅಶ್ವತ್ಥನಾರಾಯಣ

udayavani youtube

11 ಮಂದಿ ಚಾರಣಿಗರು ಸಾವು, 17,000 ಅಡಿ ಎತ್ತರದಲ್ಲಿ ವಾಯುಪಡೆ ಕಾರ್ಯಾಚರಣೆ

udayavani youtube

ಮುಂದುವರೆದ ಒಂಟಿ ಸಲಗದ ದಾಂಧಲೆ ಕಾಂಪೌಂಡ್, ಮನೆಯ ಮೇಲ್ಚಾವಣಿ ಪುಡಿಪುಡಿ

ಹೊಸ ಸೇರ್ಪಡೆ

14shashikala

ಪ್ರಧಾನಿ ಮೋದಿ ಕೈ ಬಲಪಡಿಸಿ: ಶಶಿಕಲಾ ಜೊಲ್ಲೆ

ನರೇಗಾ ಯೋಜನೆ ಸದಳಕೆ ಮಾಡಿಕೊಳ್ಳಿ

ನರೇಗಾ ಯೋಜನೆ ಸದ್ಬಳಕೆ ಮಾಡಿಕೊಳ್ಳಿ

chikkamagalore news

ಮಾಣಿಕ್ಯಧಾರಾದಲ್ಲಿ ಸ್ಪಚ್ಛತಾ ಕಾರ್ಯ

ballari news

ನಾಲ್ಕು ದಿನಗಳ ಆಮರಣಾಂತ ಸತ್ಯಾಗ್ರಹ ಅಂತ್ಯ

23brm1

ಏತ ನೀರಾವರಿ ಯೋಜನೆ ಯಶಸ್ವಿಯಾಗಲ್ಲ ಎಂಬ ಭಾವನೆ ಸರಿಯಲ್ಲ: ತರಳಬಾಳು ಶ್ರೀ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.