Udayavni Special

ಲಾಕ್ ಡೌನ್ ಭೀತಿ : ರಾಷ್ಟ್ರ ರಾಜಧಾನಿಯಿಂದ ಮತ್ತೆ ಗುಳೆ ಹೊರಟ ವಲಸೆ ಕಾರ್ಮಿಕರು..!?


Team Udayavani, Apr 20, 2021, 7:13 PM IST

Migrants fear 2020 replay, say may run out of work and resources if lockdown extended

ಸಾಂದರ್ಭಿಕ ಚಿತ್ರ

ನವ ದೆಹಲಿ : ಕೋವಿಡ್ ಸೋಂಕಿನ ರೂಪಾಂತರಿ ಅಲೆಯ ಕಾರಣದಿಂದಾಗಿ ಸೋಂಕನ್ನು ನಿಯಂತ್ರಣ ಮಾಡಲು ಮಹಾರಾಷ್ಟ್ರ, ದೆಹಲಿ, ಸೇರಿ ಕೆಲವು ರಾಜ್ಯಗಳಲ್ಲಿ ಅಲ್ಲಿನ ಸರ್ಕಾರಗಳು ಲಾಕ್ ಡೌನ್ ಹೇರಿವೆ.

ಲಾಕ್ ಡೌನ್ ಗೇ ಭಯ ಬೀತಗೊಂಡಿರುವ ವಲಸೆ ಕಾರ್ಮಿಕರು ಮತ್ತೆ ಗುಳೆ ಹೊರಟಿರುವ ದೃಶ್ಯಗಳು ಮಾಧ್ಯಮಗಳ ಕಣ್ಣಿಗೆ ಬಿದ್ದಿವೆ. ಲಾಕ್ ಡೌನ್ ಮತ್ತೆ ವಿಸ್ತರಣೆಗೊಂಡಲ್ಲಿ ಮತ್ತೆ ಕಳೆದ ವರ್ದ ಪರಿಸ್ಥಿತಿ ಎದುರಾಗಬಹುದೆಂಬ ಭಯದಿಂದ ಹಲವು ಮಂದಿ ವಲಸೆ ಕಾರ್ಮಿಕರು ತಮ್ಮ ಊರಿಗೆ ಮರಳಿ ಹೊರಟಿದ್ದಾರೆ.

ದೆಹಲಿ ಸರ್ಕಾರ ಲಾಕ್ ಡೌನ್ ಹೇರಿರುವ ಕಾರಣದಿಂದ ಭಯಭಿತರಾದ ವಲಸೆ ಕಾರ್ಮಿಕರ ಕುಟುಂಬವೊಂದು ಮರಳಿ ಊರಿಗೆ ಹೊರಟಿದ್ದು, ನಗರದಿಂದ ಹೊರಡಲು ಸಿದ್ಧವಾಗಿರುವ ಬಸ್ ಗಾಗಿ ಕೌಶಾಂಬಿ ಬಸ್ ಡಿಪೋದಲ್ಲಿ ತನ್ನ ಕುಟುಂಬದೊಂದಿಗೆ ಕಾಯುತ್ತಿದ್ದ ಗೀತಾ ಕುಮಾರಿ ಎಂಬ ವಲಸೆ ಕಾರ್ಮಿಕರೊಬ್ಬರು ಸುದ್ದಿ ಸಂಸ್ಥೆ ಪಿಟಿಐ ನೊಂದಿಗೆ ಮಾತನಾಡಿದ್ದಾರೆ.

ಓದಿ : ಕೋವಿಡ್ ಎಫೆಕ್ಟ್:ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ ಎರಡನೇ ದಿನವೂ ಕುಸಿತ, ಹೂಡಿಕೆದಾರರಿಗೆ ನಷ್ಟ

“ಇದು ಕಳೆದ ವರ್ಷದ ಪುನರಾವರ್ತನೆಯಾಗಬಹುದೆಂದು ನಾವು ಭಯಭೀತರಾಗಿದ್ದೇವೆ. ಲಾಕ್‌ ಡೌನ್ ವಿಸ್ತರಿಸಿದರೆ ಏನು ಮಾಡುವುದು ? ಅವರು ದೀರ್ಘಾವಧಿಯವರೆಗೆ ಕೆಲಸದ ಚಟುವಟಿಕೆಗಳನ್ನು ಸಂಪೂರ್ಣವಾಗಿ ನಿಲ್ಲಿಸಿದರೆ ಏನು ಮಾಡುವುದು ? “ಆಗ ನಾವು ಹೊಟ್ಟೆಗೆ ಏನು ಹಾಕಿಕೊಳ್ಳುವುದು ? ಕಳೆದ ಬಾರಿಯ ಪರಿಸ್ಥಿತಿ ಚೇತರಿಕೆಯಾಗುತ್ತದೆ ಎಂದು ನಾವು ಕಾಯುತ್ತಿದ್ದೆವು ಆದರೆ ಅಂತಿಮವಾಗಿ ಮತ್ತೆ ಮನೆಗೆ ಹಿಂತಿರುಗಬೇಕಾದ ಪರಿಸ್ಥಿತಿ ಬಂದಿದೆ.”

“ನನ್ನ ಕುಟುಂಬದಲ್ಲಿ ಹಿರಿಯ ನಾಗರಿಕರೂ ಸೇರಿದಂತೆ ಏಳು ಸದಸ್ಯರು ಇದ್ದಾರೆ. ಕಳೆದ ಬಾರಿಯ ಲಾಕ್‌ ಡೌನ್ ಸಮಯದಲ್ಲಿ, ಪರಿಸ್ಥಿತಿ ಹದಗೆಟ್ಟ ನಂತರ ನಾವು ನೇಪಾಳಕ್ಕೆ ಹೋದೆವು. ನಾವು ನಾಲ್ಕೈದು ತಿಂಗಳಾದ ಬಳಿಕ ಮರಳಿದ್ದೇವೆ. ನಾವು ದಿನಗೂಲಿ ಕೆಲಸ ಮಾಡುತ್ತೇವೆ. ಮತ್ತು ಕೆಲಸವಿಲ್ಲ ನಮ್ಮೂರಲ್ಲಿ ನಮಗೆ ಕೆಲಸಕ್ಕೆ ಅನುಕೂಲವಿಲ್ಲ ಹಾಗಾಗಿ ನಾವು ಇಲ್ಲಿಗೆ ಬರಬೇಕಾಗಿ ಬಂತು. ಆದರೇ ಇಲ್ಲಿ ಮತ್ತೆ ಸೋಂಕು ಹೆಚ್ಚಾಗಿರು ಹಿನ್ನಲೆಯಲ್ಲಿ ಲಾಕ್ ಡೌನ್ ಮಾಡಿದ್ದಾರೆ. ಭವಿಷ್ಯದ ಬಗ್ಗೆ ಭಯವಿದೆ ನಮಗೆ. ಯಾವುದೇ ಕೆಲಸವಿಲ್ಲ, ಲಾಕ್‌ಡೌನ್ ಅನ್ನು ಯಾವಾಗ ಬೇಕಾದರೂ ವಿಸ್ತರಿಸಬಹು. ಹಾಗಾಗಿ ನಾವು ಮತ್ತೆ ನಾವು ಊರಿಗೆ ತೆರಳುವ ಪರಿಸ್ಥಿತಿ ಬಂದಿದೆ “ಎಂದು ಅವರು ಅಳಲು ತೋಡಿಕೊಂಡಿದ್ದಾರೆ.

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಒಂದು ವಾರದ ಲಾಕ್ ಡೌನ್ ಘೋಷಿಸಿ, ಕಾರ್ಮಿಕರಲ್ಲಿ ಊರಿಗೆ ತೆರಳದಂತೆ ಮನವಿ ಮಾಡಿದ ಕೆಲವೇ ಗಂಟೆಗಳ ನಂತರ, ಕಳೆದ ವರ್ಷದ ವಲಸೆಗಾರರ ನಿರ್ಗಮನಕ್ಕೆ ಹೋಲುವ ದೃಶ್ಯಗಳು ಅಂತರರಾಜ್ಯ ಬಸ್ ಟರ್ಮಿನಲ್ ಗಳಲ್ಲಿ ಸಾವಿರಾರು ವಲಸೆ ಕಾರ್ಮಿಕರು ಬಸ್ ಗಾಗಿ ಕಾಯುತ್ತಿರುವ ದೃಶ್ಯಗಳು ಕಂಡು ಬಂದವು.

ಇನ್ನು,  ಲಾಕ್‌ ಡೌನ್‌ನ ಅಲ್ಪಾವಧಿಯನ್ನು ವಿಸ್ತರಿಸುವ ಅಗತ್ಯವಿಲ್ಲ ಎಂದು ಮುಖ್ಯಮಂತ್ರಿ ಕಾರ್ಮಿಕರನ್ನು ದೆಹಲಿಯಿಂದ ಹೊರಹೋಗದಂತೆ ಮನವಿ ಮಾಡಿದ್ದರು. ಆದಾಗ್ಯೂ ಪ್ರಸ್ತುತ, ಲಾಕ್ ಡೌನ್ ಸಮಯದಲ್ಲಿ ಅಂತರರಾಜ್ಯ ಚಲನೆಗೆ ಯಾವುದೇ ನಿರ್ಬಂಧವಿಲ್ಲ.

ಓದಿ : ಕೋವಿಡ್ ಲಸಿಕೆ ವಿತರಣೆಗೆ 5 ರಾಜ್ಯ, ಕೇಂದ್ರಾಡಳಿತ ಪ್ರದೇಶದಲ್ಲಿ ಖಾಸಗಿ ಸೌಲಭ್ಯ ಇಲ್ಲ!

“ನಾವು ಕಳೆದ ವರ್ಷ ಲಾಕ್‌ ಡೌನ್ ಸಂದರ್ಭದಲ್ಲಿ ಇಲ್ಲಿ ಒಂದು ತಿಂಗಳ ಕಾಲ ಸಿಲುಕಿಕೊಂಡಿದ್ದೇವೆ. ಆಹಾರದ ಸಮಸ್ಯೆಯಲ್ಲ, ಆದರೆ ನಮ್ಮ ಜೀವಕ್ಕೆ ನಾವು ಹೆದರುತ್ತಿದ್ದೆವು. ಕಳೆದ ವರ್ಷ ನಾವು ಟ್ರಕ್‌ ನಲ್ಲಿ ಪ್ರಯಾಣಿಸಿ ಜಾನ್‌ ಪುರ ತಲುಪಿದೆವು ಎಂದು ಚಂದನ್ ಸಿರೋಜ್ ಎಂಬ ಮತ್ತೊಬ್ಬ ವಲಸೆ ಕಾರ್ಮಿಕರು ತಿಳಿಸಿದ್ದಾರೆ.

“ಮತ್ತೆ ಸಹಜ ಸ್ಥಿತಿಗೆ ಮರಳಬಹುದು ಎಂದು ಸುಮಾರು ಎರಡು ತಿಂಗಳ ಹಿಂದೆ ಹಿಂತಿರುಗಿದ್ದೇವೆ. ಸೋಮವಾರ ನಾವು ನಮ್ಮ ಉದ್ಯೋಗದಾತರಿಗೆ ನಾವು ಜಾನ್‌ ಪುರಕ್ಕೆ ಹೊರಡುತ್ತಿದ್ದೇವೆ ಎಂದು ಹೇಳಿದಕೊಂಡು, ಸ್ವಲ್ಪ ಹಣವನ್ನು ಕೇಳಿದೆವು. ಅವರು ನಮಗೆ ತಲಾ 500 ರೂಗಳನ್ನು ಮಾತ್ರ ನೀಡಿದರು. ಎಂದು ಸಿರೋಜ್ ಹೇಳಿದ್ದಾರೆ.

ಲಕ್ನೋ ಸಮೀಪದ ಅಕ್ಬರಪುರ ಮೂಲದ ಧರ್ಮವೀರ್ ಸಿಂಗ್  ತನ್ನೂರಿಗೆ ಬಸ್ ಹುಡುಕುತ್ತಿದ್ದರು. ಆದಾಗ್ಯೂ, ಅವರು ಮನೆಗೆ ಹೋಗಲು ವಿಭಿನ್ನ ಕಾರಣಗಳನ್ನು ಹೊಂದಿದ್ದರು.

“ನಾನು ಪಶ್ಚಿಮ ದೆಹಲಿಯ ಸುಭಾಷ್ ನಗರದಲ್ಲಿ ಬಡಗಿ ಕೆಲಸ ಮಾಡುತ್ತಿದ್ದೇನೆ. ಮುಂದಿನ ವಾರ ನನ್ನ ತಂಗಿ ಮದುವೆ ಇರುವ  ಕಾರಣ ನಾನು ನನ್ನೂರಿಗೆ ಹೋಗಬೇಕಾಗಿದೆ. ಮೊದಲು ನಾನು ವಾರಾಂತ್ಯದಲ್ಲಿ ಹೋಗಲು ಯೋಜಿಸುತ್ತಿದ್ದೆ, ಆದರೆ ಲಾಕ್‌ ಡೌನ್ ಸರ್ಕಾರ ಘೋಷಿಸಿದ ನಂತರ, ನನ್ನ ಕುಟುಂಬವು ಸಾಧ್ಯವಾದಷ್ಟು ಬೇಗ ಬರಲು ಹೇಳಿದೆ. ನನ್ನ ಮನೆಯವರಿಗೂ ಕೋವಿಡ್ ಪರಿಸ್ಥಿತಿಯ ಬಗ್ಗೆ ಭಯವಿದೆ ಎಂದು ಅವರು ಪಿಟಿಐ ಗೆ ತಿಳಿಸಿದ್ದಾರೆ.

ಹೀಗೆ ದೆಹಲಿಯಲ್ಲಿ ಕಳೆದ ವರ್ಷದ ದೃಶ್ಯ ಮತ್ತೆ ಎದುರಾಗಿದೆ ಎಂದರೇ ತಪ್ಪಿಲ್ಲ. ಸಾವಿರಾರು ಮಂದಿ ವಲಸೆ ಕಾರ್ಮಿಕರು ಲಾಕ್ ಡೌನ್  ಭೀತಿಯಿಂದ ಮತ್ತೆ ತಮ್ಮೂರಿಗೆ ಗುಳೆ ಹೊರಟಿರುವ ದೃಶ್ಯ ರಾಷ್ಟ್ರ ರಾಜಧಾನಿಯಲ್ಲಿ ಅಲ್ಲಲ್ಲಿ ಕಾಣಿಸಿಕೊಂಡಿದೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.

ಓದಿ : ‘ಸಂಪೂರ್ಣ ಲಾಕ್‍ಡೌನ್‍’ ಹೇರುವಂತೆ ಸಿಎಂಗೆ ಸಚಿವರುಗಳಿಂದ ಮನವಿ

ಟಾಪ್ ನ್ಯೂಸ್

ಮಾನವೀಯತೆಯ ಮೂಲಕ ಅಂತ್ಯ ಸಂಸ್ಕಾರ ಮಾಡುವ ರಬಕವಿಯ ಮುಸ್ಲಿಂ ಯುವಕರು

ಮಾನವೀಯತೆಯ ಮೂಲಕ ಅಂತ್ಯ ಸಂಸ್ಕಾರ ಮಾಡುವ ರಬಕವಿಯ ಮುಸ್ಲಿಂ ಯುವಕರು

Current Instagram policy forbids children under the age of 13 from using the service.

ಚರ್ಚೆ ಹುಟ್ಟುಹಾಕಿದೆ ಫೇಸ್‌ ಬುಕ್ ಪರಿಚಯಿಸಲು ಹೊರಟಿರುವ ಇನ್ಸ್ಟಾ ಗ್ರಾಂ ಫಾರ್ ಕಿಡ್ಸ್

16-6

ಅಪೂರ್ವ ಅನುಭೂತಿಯನ್ನು ನೀಡುವ ಆತ್ಮಕಥನ ‘ಕಾಲ ಉರುಳಿ ಉಳಿದುದು ನೆನಪಷ್ಟೇ

ಮಂಗಳೂರು ದೋಣಿ ನಾಪತ್ತೆ : ನೌಕಾ ಸೇನಾ ಹೆಲಿಕಾಪ್ಟರ್ ಬಳಸಿ ಕಾರ್ಯಚರಣೆಗೆ ಸಿದ್ಧತೆ

ಮಂಗಳೂರು ದೋಣಿ ನಾಪತ್ತೆ : ನೌಕಾ ಸೇನಾ ಹೆಲಿಕಾಪ್ಟರ್ ಬಳಸಿ ಕಾರ್ಯಚರಣೆಗೆ ಸಿದ್ಧತೆ

Bjp chief jp nadda discussed the precaution and relief work with the lawmakers to help states hit by cyclone tauktae

ತೌಖ್ತೇ ಚಂಡಮಾರುತವನ್ನು ಎದುರಿಸಲು ಜನರ ಬೆನ್ನೆಲುಬಾಗಿರಿ : ಕಾರ್ಯಕರ್ತರಿಗೆ ನಡ್ಡಾ ಕರೆ

cats

ಕೋವಿಡ್-ಉಪಚುನಾವಣೆ ವೇಳೆ ಮೃತಪಟ್ಟ ಶಿಕ್ಷಕರ ಕುರಿತು ವಿವರ ಕೇಳಿದ ಸಚಿವ ಸುರೇಶ್ ಕುಮಾರ್‌

cats

‘ಸಾಯೋರು ಎಲ್ಲಾದರೂ ಸಾಯಲಿ’ : ಶಾಸಕ ಚಂದ್ರಪ್ಪಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bjp chief jp nadda discussed the precaution and relief work with the lawmakers to help states hit by cyclone tauktae

ತೌಖ್ತೇ ಚಂಡಮಾರುತವನ್ನು ಎದುರಿಸಲು ಜನರ ಬೆನ್ನೆಲುಬಾಗಿರಿ : ಕಾರ್ಯಕರ್ತರಿಗೆ ನಡ್ಡಾ ಕರೆ

THoukthe Cyclone Effect in Goa, High allert announced by CM

ತೌಖ್ತೇ ಚಂಡಮಾರುತ : ಗೋವಾ ಕಡಲ ತೀರದಲ್ಲಿ ಅವಾಂತರ

cats

ಕೋಳಿ ಮೊಟ್ಟೆ ಕದ್ದ ಪೊಲೀಸಪ್ಪ :  ಖಾಕಿ ಕಳ್ಳತನದ ವಿಡಿಯೋ ವೈರಲ್

cats

ಫೇಸ್ ಬುಕ್ ಸ್ನೇಹಿತನಿಂದ ಹೀನ ಕೃತ್ಯ : ಮಹಿಳೆ ಮೇಲೆ 25 ಕಾಮುಕರಿಂದ ಅತ್ಯಾಚಾರ

cats

ದೆಹಲಿಯಲ್ಲಿ ಮತ್ತೆ ಒಂದು ವಾರ ಲಾಕ್ ಡೌನ್ ಮುಂದುವರಿಕೆ

MUST WATCH

udayavani youtube

ಪುತ್ತೂರು ಮಹಾಲಿಂಗೇಶ್ವರ ದೇಗುಲದ ಸಭಾಂಗಣ ಸದ್ಯಕ್ಕೆ COVID CARE CENTRE

udayavani youtube

ಕನ್ನಡ ಶಾಲೆಯ ವಿಭಿನ್ನ ಇಂಗ್ಲೀಷ್ ಕ್ಲಾಸ್

udayavani youtube

ದೆಹಲಿಯಲ್ಲಿ ಕೋವಿಡ್ 19 ಲಾಕ್ ಡೌನ್ ಮತ್ತೆ ವಿಸ್ತರಿಸಬೇಡಿ

udayavani youtube

ರಾಯಚೂರು ; ಫುಲ್ ಲಾಕ್ ಡೌನ್ ಹಿನ್ನೆಲೆ ಎಣ್ಣೆ ಖರೀದಿಗೆ ಮುಗಿಬಿದ್ದ ಮದ್ಯಪ್ರಿಯರು

udayavani youtube

Oxygen ನಮಗೆ ಬೇಕಿರುವುದಕ್ಕಿಂತ ಜಾಸ್ತಿನೇ ಇದೆ

ಹೊಸ ಸೇರ್ಪಡೆ

ಮಾನವೀಯತೆಯ ಮೂಲಕ ಅಂತ್ಯ ಸಂಸ್ಕಾರ ಮಾಡುವ ರಬಕವಿಯ ಮುಸ್ಲಿಂ ಯುವಕರು

ಮಾನವೀಯತೆಯ ಮೂಲಕ ಅಂತ್ಯ ಸಂಸ್ಕಾರ ಮಾಡುವ ರಬಕವಿಯ ಮುಸ್ಲಿಂ ಯುವಕರು

Current Instagram policy forbids children under the age of 13 from using the service.

ಚರ್ಚೆ ಹುಟ್ಟುಹಾಕಿದೆ ಫೇಸ್‌ ಬುಕ್ ಪರಿಚಯಿಸಲು ಹೊರಟಿರುವ ಇನ್ಸ್ಟಾ ಗ್ರಾಂ ಫಾರ್ ಕಿಡ್ಸ್

15gadag 4

ಔಷಧ-ಹಾಸಿಗೆ-ಆಕ್ಸಿಜನ್‌ ಕೊರತೆಯಾಗದಂತೆ ನೋಡಿಕೊಳ್ಳಿ : ಡಿಸಿ ಸುಂದರೇಶ್‌ ಬಾಬು

16-6

ಅಪೂರ್ವ ಅನುಭೂತಿಯನ್ನು ನೀಡುವ ಆತ್ಮಕಥನ ‘ಕಾಲ ಉರುಳಿ ಉಳಿದುದು ನೆನಪಷ್ಟೇ

15hvr1

ಧರ್ಮಸ್ಥಳದಿಂದ ಬಂತು ಆಕ್ಸಿಜನ್‌ ಟ್ಯಾಂಕರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.