ಹಿಮಾಚಲ ಪ್ರದೇಶದ ಚಂಬಾ ಜಿಲ್ಲೆಯಲ್ಲಿ ಲಘು ಭೂಕಂಪ
Team Udayavani, Jan 12, 2019, 9:48 AM IST
ಶಿಮ್ಲಾ : ಹಿಮಾಚಲ ಪ್ರದೇಶದ ಚಂಬಾ ಜಿಲ್ಲೆಯಲ್ಲಿ ಇಂದು ಶನಿವಾರ ಲಘು ಭೂಕಂಪ ಸಂಭವಿಸಿರುವುದು ವರದಿಯಾಗಿದೆ. ಯಾವುದೇ ಸಾವು ನೋವು, ನಾಶ ನಷ್ಟ ಉಂಟಾದ ವರದಿಗಳಿಲ್ಲ.
ಮಧ್ಯಾಹ್ನ 12.31ರ ಹೊತ್ತಿಗೆ ರಿಕ್ಟರ್ ಮಾಪಕದಲ್ಲಿ 3.3 ಅಂಕಗಳ ತೀವ್ರತೆಯ ಭೂಕಂಪ ಸಂಭವಿಸಿರುವುದು ದಾಖಲಾಗಿದೆ. ಇದು ಚಂಬಾ ಜಿಲ್ಲೆಯ ಐದು ಕಿ.ಮೀ. ಈಶಾನ್ಯದಲ್ಲಿ ಕೇಂದ್ರೀಕೃತವಾಗಿತ್ತು.
ಪರಿಣಾಮವಾಗಿ ಆಸುಪಾಸಿನ ಜಿಲ್ಲೆಗಳಲ್ಲೂ ಲಘು ಭೂಕಂಪನಗಳು ಆಗಿವೆ ಎಂದು ಶಿಮ್ಲಾದ ಹವಾಮಾನ ಕೇಂದ್ರ ನಿರ್ದೇಶಕ ಮನೋಹನ್ ಸಿಂಗ್ ಹೇಳಿದರು.
ಚಂಬಾ ಸೇರಿದಂತೆ ಹಿಮಾಚಲ ಪ್ರದೇಶದ ಬಹತೇಕ ಭಾಗಗಳು ಭೂಕಂಪ ಸೂಕ್ಷ್ಮತೆಯ ಪ್ರದೇಶಗಳಾಗಿವೆ.