ರಾಹುಲ್ ಗಾಂಧಿ ಮಾನಸಿಕ ಅಸ್ವಸ್ಥ ಎಂದ ಸಚಿವ
Team Udayavani, Sep 2, 2018, 6:00 AM IST
ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮಾನಸಿಕ ಅಸ್ವಸ್ಥರಾಗಿದ್ದು, ಅವರನ್ನು ಮಾನಸಿಕ ಆಸ್ಪತ್ರೆಗೆ ಸೇರಿಸಬೇಕು ಎಂದು ಕೇಂದ್ರ ಸಚಿವ ಅಶ್ವನಿ ಚೌಬೆ ಹೇಳಿದ್ದಾರೆ. ಮೋದಿಗೆ ರಾಹುಲ್ ಯಾವ ರೀತಿಯಲ್ಲೂ ಸಮಾನರಲ್ಲ. ಮೋದಿ ಆಕಾಶವಾದರೆ ರಾಹುಲ್ ಚರಂಡಿಯಲ್ಲಿನ ಕೀಟ ಎಂದು ಟೀಕಿಸಿದ್ದಾರೆ. ಚೌಬೆ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ರಫೇಲ್ ವಿಚಾರದಲ್ಲಿ ಮೋದಿ ಸುಳ್ಳು ಹೇಳಿದ್ದಾರೆ ಎಂದು ರಾಹುಲ್ ಹೇಳುತ್ತಿದ್ದಾರೆ. ಮಾನಸಿಕ ಅಸ್ವಸ್ಥರು ಮಾತ್ರ ಹೀಗೆ ಹೇಳಲು ಸಾಧ್ಯ ಎಂದಿದ್ದಾರೆ ಚೌಬೆ.