ಉತ್ತರ ಪ್ರದೇಶ :14ರ ಬಾಲಕಿಯ ಮೇಲೆ ಮೂವರ ತರುಣರಿಂದ ಗ್ಯಾಂಗ್ ರೇಪ್
Team Udayavani, May 17, 2018, 12:18 PM IST
ಇಟಾ, ಉತ್ತರ ಪ್ರದೇಶ : 14 ವರ್ಷ ಪ್ರಾಯದ ಬಾಲಕಿಯನ್ನು ಆಕೆಯ ಗ್ರಾಮದವರೇ ಆದ ಮೂವರು ತರುಣರು ಗ್ಯಾಂಗ್ ರೇಪ್ ಮಾಡಿರುವ ಘಟನೆ ಕೋತ್ವಾಲಿ ದೇಹಾತ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಬಾಲಕಿಯ ತಂದೆ ಘಟನೆ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ.
“ನಿನ್ನೆ ಬುಧವಾರ ಬೆಳಗ್ಗೆ ಮಗಳು ಶೌಚಕ್ಕೆಂದು ಹೊರಗೆ ಹೋಗಿದ್ದವಳು ಬಹಳ ಹೊತ್ತಾದರೂ ಬಾರದೇ ಇದ್ದಾಗ ಆಕೆಗಾಗಿ ಹುಡಕಾಟ ನಡೆಸಿದೆವು. ಆಕೆ ಹೊಲದಲ್ಲಿ ಪ್ರಜ್ಞಾಹೀನಳಾಗಿ ಬಿದ್ದಿರುವುದು ಕಂಡು ಬಂತು; ಕೂಡಲೇ ಆಕೆಯನ್ನು ಜಿಲ್ಲಾ ಸರಕಾರಿ ಆಸ್ಪತ್ರೆಗೆ ಸೇರಿಸಿದೆವು; ಆಕೆ ತನ್ನ ಮೇಲೆ ಸಾಮೂಹಿಕ ಅತ್ಯಾಚಾರವಾಗಿದೆ ಎಂದು ತಿಳಿಸಿದಳು ಮಾತ್ರವಲ್ಲದೆ ತನ್ನನ್ನು ನಿರ್ಜನ ಪ್ರದೇಶಕ್ಕೆ ಒಯ್ದು ತನ್ನ ಮೇಲೆ ಅತ್ಯಾಚಾರ ನಡೆಸಿದವರ ಹೆಸರನ್ನು ಕೂಡ ತಿಳಿಸಿದಳು” ಎಂದು ಹುಡುಗಿಯ ತಂದೆ ಹೇಳಿದ್ದಾರೆ.
ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡಸುತ್ತಿದ್ದಾರೆ; ತಲೆ ಮರೆಸಿಕೊಂಡಿರುವ ಮೂವರು ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.