ಈ ಬಾರಿಯ ಮಿಸ್ ಇಂಡಿಯಾ ಹೈದರಾಬಾದ್ ಮೂಲದ ಮಾನಸ ವಾರಾಣಸಿ
Team Udayavani, Feb 13, 2021, 9:35 AM IST
ಹೊಸದಿಲ್ಲಿ: ಈ ಬಾರಿಯ ಫೆಮಿನಾ ಮಿಸ್ ಇಂಡಿಯಾ ವರ್ಲ್ 2020ಕ್ಕೆ ಮಾನಸ ವಾರಾಣಸಿ ಆಯ್ಕೆಯಾಗಿದ್ದಾರೆ. ಮೂಲತಃ ಹೈದರಾಬಾದ್ ನವರಾದ ಇವರು ಎಂಜಿನಿಯರ್ ಪದವೀಧರೆ.
23 ವರ್ಷ ವಯಸ್ಸಿನ ಮಾನಸ, ಫೈನಾನ್ಶಿಯಲ್ ಇನ್‌ಫಾರ್ಮೇಶನ್ ಎಕ್ಸ್ ಚೇಂಜ್ ಅನಾಲಿಸ್ಟ್ ಆಗಿ ಕೆಲಸ ಮಾಡುತ್ತಿದ್ದಾರೆ. ಗ್ಲೋಬಲ್ ಇಂಡಿಯನ್ ನಲ್ಲಿ ಶಾಲಾಭ್ಯಾಸ ಮುಗಿಸಿ, ವಾಸವಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ತಾಂತ್ರಿಕ ಕೋರ್ಸ್ ಪೂರೈಸಿದ್ದಾರೆ.
ಇದನ್ನೂ ಓದಿ:ಬಾಲಿವುಡ್ ಬ್ಯೂಟಿ ಪರಿಣಿತಿ ಚೋಪ್ರಾ ಗ್ಲಾಮರಸ್ ಫೋಟೋಸ್
ಇವರಿಗೆ ಪುಸ್ತಕ ಓದು, ಸಂಗೀತ, ನೃತ್ಯ, ಯೋಗ ಮತ್ತು ಪರಿಸರದ ಮೇಲೆ ಆಸಕ್ತಿ. ಎಂಬ್ರಾ ಯಡರಿ ಮೇಲೆ ಮಾನಸಗೆ ಆಸಕ್ತಿ ಹೆಚ್ಚಂತೆ. ಹೀಗಾಗಿ, ಇನ್ ಸ್ಟಾಗ್ರಾಂನಲ್ಲಿ ಎಂಬ್ರಾಯಡರಿ ಮಾಡಿರುವ ಫೋಟೋಗಳನ್ನು ಹಾಕಿ ಖುಷಿ ಪಡುತ್ತಾರೆ. ಹಾಗೆಯೇ, ನಾಯಿಗಳನ್ನು ಕಂಡರೆ ಪ್ರೀತಿ ಹೆಚ್ಚು. ಅದರಲ್ಲೂ ನಾಯಿಗಳು ಮತ್ತು ಸಸಿಗಳ ಜತೆ ಮಾತನಾಡುವುದು ಎಂದರೆ ಖುಷಿಯಂತೆ.
ಹಾಗೆಯೇ ಪ್ರವಾಸದಲ್ಲೂ ಆಸಕ್ತಿ ಇರುವ ಮಾನಸ, ಕರ್ನಾಟಕವೂ ಸೇರಿ ದಂತೆ ದೇಶದ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿದ್ದಾರೆ. ಹಾಗೆಯೇ, ಪ್ರಿಯಾಂಕಾ ಚೋಪ್ರಾ ಅವರೇ ಇವರಿಗೆ ಸ್ಫೂರ್ತಿಯಂತೆ.