“ಮಿಷನ್‌ ಶಕ್ತಿ’ ಅನಂತರ ಭಾರತಕ್ಕೆ ಶತ್ರು ರೇಡಾರ್‌ ಪತ್ತೆದಾರಿಕೆ ಬಲ

Team Udayavani, Mar 31, 2019, 6:00 AM IST

EMISAT

ಹೊಸದಿಲ್ಲಿ: ಇತ್ತೀಚೆಗಷ್ಟೇ ಉಪಗ್ರಹ ನಿಗ್ರಹ ತಂತ್ರಜ್ಞಾನವನ್ನು (ಮಿಷನ್‌ ಶಕ್ತಿ) ಅಳವಡಿಸಿಕೊಂಡು ಮಿಂಚಿದ ಭಾರತ, ಇದೀಗ ಶತ್ರು ರಾಷ್ಟ್ರಗಳ ರೇಡಾರ್‌ಗಳಿರುವ ತಾಣಗಳನ್ನು ಪತ್ತೆ ಹಚ್ಚುವ ಕೆಲಸಕ್ಕಾಗಿ ವಿಶೇಷ ಉಪಗ್ರಹ “ಎಮಿಸ್ಯಾಟ್‌’ ಅನ್ನು ಉಡಾವಣೆ ಮಾಡಲು ಮುಂದಾಗಿದೆ. ಭಾರತೀಯ ಬಾಹ್ಯಾಕಾಶ ಸಂಸ್ಥೆಯ (ಇಸ್ರೋ) ವತಿಯಿಂದ ಎ. 1ರಂದು ಹಾರಿಬಿಡಲಾಗುವ ಈ ಉಪಗ್ರಹ ಉಡಾವಣೆ ಪ್ರಕ್ರಿಯೆ ಹಿಂದಿನ ಎಲ್ಲಾ ಉಡಾವ ಣೆಗಳಿಗಿಂತ ವಿಭಿನ್ನವಾಗಿರಲಿದೆ ಎಂದು ಇಸ್ರೋ ಅಧ್ಯಕ್ಷ ಕೆ. ಶಿವನ್‌ ತಿಳಿಸಿದ್ದಾರೆ.

ಉಡಾವಣೆ ಹೇಗೆ ವಿಭಿನ್ನ?: ರೇಡಾರ್‌ ಮಾಪಕ ಉಪಗ್ರಹದ ಜತೆಗೆ ಇನ್ನೂ 28 ಉಪಗ್ರಹಗಳು ಅಂತರಿಕ್ಷಕ್ಕೆ ಚಿಮ್ಮಲಿದ್ದು, ಈ ವಿದ್ಯಮಾನವನ್ನು ಕಣ್ತುಂಬಿಕೊಳ್ಳಲು ಇದೇ ಮೊದಲ ಬಾರಿಗೆ ಸಾರ್ವಜನಿಕರಿಗೆ ಇಸ್ರೋ ಅವಕಾಶ ಕಲ್ಪಿಸಿದೆ. ಇನ್ನೊಂದೆಡೆ, ಈ ಬಾರಿ ಅಂತರಿಕ್ಷಕ್ಕೆ ಉಡಾವಣೆಗೊಳ್ಳುವ ಉಪಗ್ರಹಗಳನ್ನು ಒಂದೇ ಪ್ರಯತ್ನದಲ್ಲಿ ಮೂರು ವಿಭಿನ್ನ ಕಕ್ಷೆಗಳಲ್ಲಿ ಕೂರಿಸಲಾಗುತ್ತದೆ. ಇದು ಈ ಉಡಾವಣೆಯ 2ನೇ ವಿಶೇಷ.

ವಿವಿಧ ಕಕ್ಷೆಗಳಿಗೆ ಉಪಗ್ರಹಗಳನ್ನು ಕೂರಿಸಲೆಂದೇ ಹೊಸ ಪ್ರಯೋಗವೊಂದಕ್ಕೆ ಇಸ್ರೋ ಮುಂದಾಗಿದೆ. ಉಪಗ್ರಹಗಳನ್ನು ಕೊಂಡೊಯ್ಯುವ ಪಿಎಸ್‌ಎಲ್‌ವಿ ರಾಕೆಟ್‌ ಜತೆಗೆ, ಪಿಎಸ್‌-4 ಎಂಬ ಇಂಜಿನ್‌ನನ್ನು ಅಳವಡಿಸಲಾಗುತ್ತಿದೆ.

ಪಿಎಸ್‌ಎಲ್‌ವಿ ರಾಕೆಟ್‌ ಭೂಮಿಯ ಮೇಲ್ಮೆ„ನಿಂದ 763 ಕಿ.ಮೀ. ದೂರಕ್ಕೆ ಸಾಗಿದ ನಂತರ, ಅಲ್ಲಿ ಕೆಲವು ಪ್ರಮುಖ ಉಪಗ್ರಹಗಳನ್ನು ಬಿಡುಗಡೆ ಮಾಡುತ್ತದೆ. ಇದು ಈ ಯೋಜನೆಯ ಮೊದಲ ಕಕ್ಷೆಯಾಗಿದ್ದು, ಇಲ್ಲಿಂದ ರಾಕೆಟ್‌ ಹಿಮ್ಮುಖವಾಗಿ ಚಲಿಸುತ್ತದೆ. ಆಗ ನೆರವಿಗೆ ಬರುವುದೇ ಪಿಎಸ್‌-4 ಇಂಜಿನ್‌. ಇದು ಚಾಲನೆಗೊಳ್ಳುವುದರಿಂದ ರಾಕೆಟ್‌ ಜತೆಗೆ ಹಿಮ್ಮುಖವಾಗಿ ಚಲಿಸಿ, ಮೊದಲು ತಾನಿದ್ದ 763 ಕಿ.ಮೀ. ಎತ್ತರ ದಿಂದ 504 ಕಿ.ಮೀ.ವರೆಗಿನ ಎತ್ತರಕ್ಕೆ ವಾಪಸ್ಸಾಗುತ್ತದೆ. ಅಲ್ಲಿ ಕೆಲವು ಉಪಗ್ರಹ ಬಿಡುಗಡೆಯಾಗುತ್ತವೆ. ಅನಂತರ, ಪುನಃ ಚಾಲನೆಗೊಳ್ಳುವ ಪಿಎಸ್‌-4, ರಾಕೆಟನ್ನು 485 ಕಿ.ಮೀ.ಗಳಿಗೆ ತಂದು ನಿಲ್ಲಿಸುತ್ತದೆ. ಅಲ್ಲಿ ಮತ್ತಷ್ಟು ಉಪಗ್ರಹಗಳು ಬಿಡುಗಡೆ ಯಾಗುತ್ತವೆ. ಹೀಗೆ, ಮೂರು ಕಕ್ಷೆಗಳಿಗೆ ಕಳಿಸುವ ಉಪಗ್ರಹಗಳನ್ನು 3 ರಾಕೆಟ್‌ಗಳಲ್ಲಿ ಕಳಿಸುವ ಬದಲು, ಒಂದೇ ರಾಕೆಟ್‌ನಲ್ಲಿ ಕಳಿಸಿ ಅವುಗಳನ್ನು 3 ಕಕ್ಷೆಗಳಲ್ಲಿ ಬಿತ್ತುವ ಪ್ರಯೋಗ ಕೈಗೊಳ್ಳಲಾಗಿದೆ.

“ಎಮಿಸ್ಯಾಟ್‌’ ಬಗ್ಗೆ ಒಂದಿಷ್ಟು
ಶತ್ರು ದೇಶಗಳ ರೇಡಾರ್‌ ಪತ್ತೆಗಾಗಿ ಡಿಆರ್‌ಡಿಒ ಅಭಿವೃದ್ಧಿ ಪಡಿಸಿರುವ “ಎಮಿಸ್ಯಾಟ್‌’ ಈ ಬಾರಿಯ ಉಡಾವಣಾ ಉಪಗ್ರಹಗಳ ಸಮೂಹದಲ್ಲಿರುವ ವಿಶೇಷ ಉಪಗ್ರಹ. 436 ಕೆ.ಜಿ. ತೂಕವಿರುವ ಇದು, ವಿದ್ಯುದಯಸ್ಕಾಂತ ತರಂಗಗಳ ಆಧಾರದಲ್ಲಿ ಕೆಲಸ ಮಾಡುತ್ತದೆ ಹಾಗೂ ಶತ್ರು ದೇಶಗಳಲ್ಲಿರುವ ರೇಡಾರ್‌ಗಳನ್ನು ಎಷ್ಟೇ ದೂರದಲ್ಲಿದ್ದರೂ ಪತ್ತೆ ಮಾಡುತ್ತದೆ. ಈವರೆಗೆ, ಶತ್ರುಗಳ ರೇಡಾರ್‌ಗಳ ಪತ್ತೆಗಾಗಿ ಭಾರತೀಯ ಸೇನೆ ವಿಶೇಷ ವಿಮಾನಗಳನ್ನು ಬಳಸಲಾಗುತ್ತಿತ್ತು. ಇನ್ನು ಮುಂದೆ ಎಮಿಸ್ಯಾಟ್‌ನ ಕಣ್ಗಾವಲಿನ ಮೂಲಕ ಕ್ಷಣಾರ್ಧದಲ್ಲಿ ಮಾಹಿತಿ ಸಿಗುತ್ತವೆ.

ಟಾಪ್ ನ್ಯೂಸ್

ಗ್ರಾಮ ಪಂಚಾಯ್ತಿ ಸದಸ್ಯರಿಗೆ ಮತದಾನ ಹಕ್ಕು ಕೊಡಿಸಿದ ಪುಣ್ಯಾತ್ಮ ಕೊಂಡಯ್ಯ: ಸಂತೋಷ ಲಾಡ್

ಗ್ರಾಮ ಪಂಚಾಯ್ತಿ ಸದಸ್ಯರಿಗೆ ಮತದಾನ ಹಕ್ಕು ಕೊಡಿಸಿದ ಪುಣ್ಯಾತ್ಮ ಕೊಂಡಯ್ಯ: ಸಂತೋಷ ಲಾಡ್

ಕೋವಿಡ್ ಸೋಂಕಿತ ದಕ್ಷಿಣ ಆಫ್ರಿಕಾ ಪ್ರಜೆ ಪರಾರಿ : ಖಾಸಗಿ ಹೋಟೆಲ್‌ ವಿರುದ್ಧ ಎಫ್ಐಆರ್‌

ಕೋವಿಡ್ ಸೋಂಕಿತ ದಕ್ಷಿಣ ಆಫ್ರಿಕಾ ಪ್ರಜೆ ಪರಾರಿ : ಖಾಸಗಿ ಹೋಟೆಲ್‌ ವಿರುದ್ಧ ಎಫ್ಐಆರ್‌

ಎಸ್‌ಬಿಐ ಕ್ರೆಡಿಟ್‌ ಕಾರ್ಡ್‌ ಇಎಂಐ ಶುಲ್ಕ ದುಬಾರಿ

ಎಸ್‌ಬಿಐ ಕ್ರೆಡಿಟ್‌ ಕಾರ್ಡ್‌ ಇಎಂಐ ಶುಲ್ಕ ದುಬಾರಿ

ಒಮಿಕ್ರಾನ್‌ ರೂಪಾಂತರಿ ಹಿನ್ನೆಲೆ: ಬಡ್ಡಿದರ ಯಥಾ ಸ್ಥಿತಿ ಸಾಧ್ಯತೆ

ಒಮಿಕ್ರಾನ್‌ ರೂಪಾಂತರಿ ಹಿನ್ನೆಲೆ: ಬಡ್ಡಿದರ ಯಥಾ ಸ್ಥಿತಿ ಸಾಧ್ಯತೆ

ರಾಜ್ಯದಲ್ಲಿಂದು 299 ಕೋವಿಡ್‌ ಸೋಂಕು ಪತ್ತೆ: 6 ಸಾವು

ರಾಜ್ಯದಲ್ಲಿಂದು 299 ಕೋವಿಡ್‌ ಸೋಂಕು ಪತ್ತೆ: 6 ಸಾವು

ಗೋವಾ: ಮಾಜಿ ಮುಖ್ಯಮಂತ್ರಿ,ಕಾಂಗ್ರೆಸ್ ಶಾಸಕ ರವಿ ನಾಯ್ಕ್ ವಿಧಾನಸಭೆ ಸದಸ್ಯತ್ವಕ್ಕೆ ರಾಜೀನಾಮೆ

ಗೋವಾ: ಮಾಜಿ ಮುಖ್ಯಮಂತ್ರಿ,ಕಾಂಗ್ರೆಸ್ ಶಾಸಕ ರವಿ ನಾಯ್ಕ್ ವಿಧಾನಸಭೆ ಸದಸ್ಯತ್ವಕ್ಕೆ ರಾಜೀನಾಮೆ

ಶಾಲೆಗೆ ಗೈರಾದ ವಿದ್ಯಾರ್ಥಿಯನ್ನು ಕರೆಯಲು ಹೋದ ಮುಖ್ಯ ಶಿಕ್ಷಕನ ಮೇಲೆ ಹಲ್ಲೆ: ದೂರು ದಾಖಲು

ಶಾಲೆಗೆ ಗೈರಾದ ವಿದ್ಯಾರ್ಥಿಯನ್ನು ಕರೆಯಲು ಹೋದ ಮುಖ್ಯ ಶಿಕ್ಷಕನ ಮೇಲೆ ಹಲ್ಲೆ: ದೂರು ದಾಖಲುಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಎಸ್‌ಬಿಐ ಕ್ರೆಡಿಟ್‌ ಕಾರ್ಡ್‌ ಇಎಂಐ ಶುಲ್ಕ ದುಬಾರಿ

ಎಸ್‌ಬಿಐ ಕ್ರೆಡಿಟ್‌ ಕಾರ್ಡ್‌ ಇಎಂಐ ಶುಲ್ಕ ದುಬಾರಿ

ಒಮಿಕ್ರಾನ್‌ ರೂಪಾಂತರಿ ಹಿನ್ನೆಲೆ: ಬಡ್ಡಿದರ ಯಥಾ ಸ್ಥಿತಿ ಸಾಧ್ಯತೆ

ಒಮಿಕ್ರಾನ್‌ ರೂಪಾಂತರಿ ಹಿನ್ನೆಲೆ: ಬಡ್ಡಿದರ ಯಥಾ ಸ್ಥಿತಿ ಸಾಧ್ಯತೆ

ಗೋವಾ: ಮಾಜಿ ಮುಖ್ಯಮಂತ್ರಿ,ಕಾಂಗ್ರೆಸ್ ಶಾಸಕ ರವಿ ನಾಯ್ಕ್ ವಿಧಾನಸಭೆ ಸದಸ್ಯತ್ವಕ್ಕೆ ರಾಜೀನಾಮೆ

ಗೋವಾ: ಮಾಜಿ ಮುಖ್ಯಮಂತ್ರಿ,ಕಾಂಗ್ರೆಸ್ ಶಾಸಕ ರವಿ ನಾಯ್ಕ್ ವಿಧಾನಸಭೆ ಸದಸ್ಯತ್ವಕ್ಕೆ ರಾಜೀನಾಮೆ

ಭಾರತದ ಮೊದಲ ಮಹಿಳಾ ಮನೋವೈದ್ಯೆ ಶಾರದಾ ಮೆನನ್‌ ನಿಧನ

ಭಾರತದ ಮೊದಲ ಮಹಿಳಾ ಮನೋವೈದ್ಯೆ ಶಾರದಾ ಮೆನೊನ್‌ ನಿಧನ

31kannada

ಕನ್ನಡಿಗರನ್ನು ಒಗ್ಗಟ್ಟು ಮಾಡುವ ಕೆಲಸ ಮಾಡಬೇಕಾಗಿದೆ: ಜಿ.ಪಂ ಮಾಜಿ ಅಧ್ಯಕ್ಷೆ ನೀಲಮ್ಮ

MUST WATCH

udayavani youtube

ಮನೆಯಲ್ಲಿದ್ದ ಹಾವುಗಳನ್ನು ಓಡಿಸಲು ಹೋಗಿ 13 ಕೋಟಿ ಮೌಲ್ಯದ ಬಂಗಲೆಯನ್ನೇ ಸುಟ್ಟ ಆಸಾಮಿ!

udayavani youtube

ಹಾವುಗಳು ಬರುತ್ತದೆ ಎಂದು ಮನೆಗೇ ಬೆಂಕಿಯಿಟ್ಟ! 13 ಕೋಟಿಯ ಬಂಗಲೆ ಸುಟ್ಟು ಭಸ್ಮ

udayavani youtube

ಸಿದ್ಧಿ ಸಮುದಾಯದ ಮೊದಲ DOCTORATE ಪದವೀಧರೆ, ಇವರೇ !!

udayavani youtube

ಬಿಯರ್ ಬಾಟಲಿಗೆ ಬಾಯಿ ಹಾಕಿದ ನಾಗರಹಾವು!

udayavani youtube

ರಾತ್ರೋರಾತ್ರಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು !

ಹೊಸ ಸೇರ್ಪಡೆ

ಗ್ರಾಮ ಪಂಚಾಯ್ತಿ ಸದಸ್ಯರಿಗೆ ಮತದಾನ ಹಕ್ಕು ಕೊಡಿಸಿದ ಪುಣ್ಯಾತ್ಮ ಕೊಂಡಯ್ಯ: ಸಂತೋಷ ಲಾಡ್

ಗ್ರಾಮ ಪಂಚಾಯ್ತಿ ಸದಸ್ಯರಿಗೆ ಮತದಾನ ಹಕ್ಕು ಕೊಡಿಸಿದ ಪುಣ್ಯಾತ್ಮ ಕೊಂಡಯ್ಯ: ಸಂತೋಷ ಲಾಡ್

ಇಂದಿರಾಗಾಂಧಿ ಕುರಿತ ಛಾಯಾಚಿತ್ರ ಪ್ರದರ್ಶನಕ್ಕೆ ತೆರೆ

ಇಂದಿರಾಗಾಂಧಿ ಕುರಿತ ಛಾಯಾಚಿತ್ರ ಪ್ರದರ್ಶನಕ್ಕೆ ತೆರೆ

ಕೋವಿಡ್ ಸೋಂಕಿತ ದಕ್ಷಿಣ ಆಫ್ರಿಕಾ ಪ್ರಜೆ ಪರಾರಿ : ಖಾಸಗಿ ಹೋಟೆಲ್‌ ವಿರುದ್ಧ ಎಫ್ಐಆರ್‌

ಕೋವಿಡ್ ಸೋಂಕಿತ ದಕ್ಷಿಣ ಆಫ್ರಿಕಾ ಪ್ರಜೆ ಪರಾರಿ : ಖಾಸಗಿ ಹೋಟೆಲ್‌ ವಿರುದ್ಧ ಎಫ್ಐಆರ್‌

suman

ಭಟ್ಕಳ, ಮುರುಡೇಶ್ವರ ಠಾಣೆಗೆ ಭೇಟಿ ನೀಡಿದ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್

ಎಸ್‌ಬಿಐ ಕ್ರೆಡಿಟ್‌ ಕಾರ್ಡ್‌ ಇಎಂಐ ಶುಲ್ಕ ದುಬಾರಿ

ಎಸ್‌ಬಿಐ ಕ್ರೆಡಿಟ್‌ ಕಾರ್ಡ್‌ ಇಎಂಐ ಶುಲ್ಕ ದುಬಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.