ಮೊಬೈಲ್ ಫೋನ್ ತುಟ್ಟಿ; ಸೆಲ್ಫೋನ್ ಜಿಎಸ್ಟಿ ಶೇ.18ಕ್ಕೆ ಹೆಚ್ಚಳ
Team Udayavani, Mar 15, 2020, 6:00 AM IST
ಹೊಸದಿಲ್ಲಿ: ಮೊಬೈಲ್ಗಳ ಮೇಲಿನ ಜಿಎಸ್ಟಿಯನ್ನು ಶೇ. 12ರಿಂದ 18ಕ್ಕೆ ಏರಿಸಲು ಶನಿವಾರ ಹೊಸದಿಲ್ಲಿಯಲ್ಲಿ ನಡೆದ ಜಿಎಸ್ಟಿ ಮಂಡಳಿ ಸಭೆಯಲ್ಲಿ ನಿರ್ಧರಿಸಲಾಗಿದೆ.
ಇದರಿಂದಾಗಿ 10 ಸಾವಿರ ರೂ. ಮೌಲ್ಯದ ಮೊಬೈಲ್ ದರ 600 ರೂ.ಗಳಷ್ಟು ಏರಲಿದೆ. ಈ ಹೊಸ ದರ ಎ.1ರಿಂದ ಜಾರಿಗೆ ಬರಲಿದೆ ಎಂದು ತನ್ನ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ಬಳಿಕ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ಇನ್ನಷ್ಟು ಮಹತ್ವದ ನಿರ್ಧಾರ
ಸಭೆಯ ಅನಂತರ ಸುದ್ದಿಗಾರರೊಂದಿಗೆ ಮಾತನಾಡಿದ ನಿರ್ಮಲಾ, ಸಭೆಯಲ್ಲಿ ಕೈಗೊಳ್ಳಲಾದ ಇನ್ನಿತರ ಮಹತ್ವದ ನಿರ್ಧಾರಗಳ ಬಗ್ಗೆ ಮಾಹಿತಿ ನೀಡಿದರು. ಅದರಂತೆ ವಿಮಾನಗಳ ಮೈಂಟೇನೆನ್ಸ್ ರಿಪೇರ್ ಓವರಾಲ್ (ಒಎಂಆರ್) ಸೇವೆಗಳ ಮೇಲಿನ ಶುಲ್ಕವನ್ನು ಶೇ. 12ರಿಂದ 5ಕ್ಕೆ ಇಳಿಸಲಾಗಿದೆ. ಬೆಂಕಿ ಕಡ್ಡಿಗಳ ಮೇಲಿನ ಜಿಎಸ್ಟಿಯನ್ನು ಶೇ. 12ಕ್ಕೆ ನಿಗದಿಗೊಳಿಸಲಾಗಿದೆ ಎಂದು ತಿಳಿಸಿದರು.
ಉದ್ಯಮಿಗಳಿಗೆ ಸಿಹಿ,ಕಹಿ
2018, 2019ರ ವಿತ್ತೀಯ ವರ್ಷ ಗಳಲ್ಲಿ ತೆರಿಗೆ ರಿಟರ್ನ್ಸ್ ಸಲ್ಲಿಸುವಲ್ಲಿ ತಡ ಮಾಡಿರುವ ಕಾರ್ಪೊರೆಟ್ ಕಂಪೆನಿಗಳಿಗೆ ವಿಧಿಸಬಹುದಾದ ವಿಳಂಬ ಶುಲ್ಕದಿಂದ ವಿನಾಯಿತಿ ನೀಡುವ ನಿರ್ಧಾರವನ್ನು ಜಿಎಸ್ಟಿ ಕೌನ್ಸಿಲ್ ಕೈಗೊಂಡಿದೆ. ವಾರ್ಷಿಕವಾಗಿ 2 ಸಾವಿರ ಕೋ.ರೂ. ಒಳಗಿನ ವಹಿವಾಟು ನಡೆಸುತ್ತಿರುವ ಕಂಪೆನಿಗಳಿಗೆ ಈ ವಿನಾಯಿತಿ ಅನ್ವಯಿಸಲಿದೆ.
ಆದರೆ ಈ ವರ್ಷದಿಂದ ತೆರಿಗೆ ಕಟ್ಟುವಲ್ಲಿ ವಿಳಂಬ ನೀತಿ ಅನುಸರಿಸುವ ಕಂಪೆನಿಗಳಿಗೆ ತೆರಿಗೆಯ ಮೇಲೆ ಬಡ್ಡಿ ವಿಧಿಸಲಾಗುತ್ತದೆ ಎಂದು ಸಚಿವರು ಹೇಳಿದ್ದು, ಈ ಹೊಸ ನಿಯಮ ಜು. 1ರಿಂದ ಜಾರಿಗೊಳ್ಳಲಿದೆ ಎಂದು ಎಚ್ಚರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು
Lok Sabha 1 Phase: ನಿತಿನ್ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…
Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ
Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ