ರಸ್ತೆ ನಿರ್ಮಾಣ: ಎನ್‌ಡಿಎ ಬೆಸ್ಟ್‌

Team Udayavani, Oct 9, 2018, 8:20 AM IST

ಹೊಸದಿಲ್ಲಿ: ಯುಪಿಎ ಎರಡನೇ ಅವಧಿಯ ಆಡಳಿತಕ್ಕೆ ಹೋಲಿಸಿದರೆ ಎನ್‌ಡಿಎ ಆಡಳಿತದ 4 ವರ್ಷಗಳಲ್ಲಿ ನಿರ್ಮಾಣವಾದ ರಸ್ತೆಯ ಒಟ್ಟು ಪ್ರಮಾಣ ಶೇ.26ರಷ್ಟು ಏರಿಕೆಯಾಗಿದೆ. ಯುಪಿಎ-2ರಲ್ಲಿ 24,425 ಕಿ.ಮೀ ರಸ್ತೆ ನಿರ್ಮಾಣ ಮಾಡಲಾಗಿದ್ದರೆ, ಎನ್‌ಡಿಎ ಆಡಳಿತದ 4 ವರ್ಷಗಳಲ್ಲಿ 31,000 ಕಿ.ಮೀ ರಸ್ತೆ ನಿರ್ಮಾಣವಾಗಿವೆ. ಎರಡೂ ಸರಕಾರಗಳೂ ಈಗಾಗಲೇ ಇರುವ ರಸ್ತೆಯನ್ನು ದ್ವಿಪಥವನ್ನಾಗಿ ವಿಸ್ತರಿಸುವ ಯೋಜನೆಗಳಿಗೇ ಹೆಚ್ಚಿನ ಒತ್ತು ನೀಡಿವೆ.

ಇನ್ನೊಂದೆಡೆ ಮಾರ್ಚ್‌ ಕೊನೆಯ ವೇಳೆಗೆ ಹೆದ್ದಾರಿ ನಿರ್ಮಾಣ ಯೋಜನೆ 39 ಸಾವಿರ ಕಿ.ಮೀಗೆ ಏರುವ ನಿರೀಕ್ಷೆಯಿದೆ. ಇದು ಯುಪಿಎ-2 ಅವಧಿಗೆ ಹೋಲಿಸಿದರೆ ಶೇ.60ರಷ್ಟು ಹೆಚ್ಚಳವಾಗಿರಲಿದೆ ಎಂದು ಹೆದ್ದಾರಿ ಸಚಿವಾಲಯದ ಅಧಿಕಾರಿಗಳು ಹೇಳಿದ್ದಾರೆ. ಶೇ.76ರಷ್ಟು ಹೆದ್ದಾರಿಗಳ ಸಾಮರ್ಥ್ಯ ಹೆಚ್ಚಳ ಮಾಡಲಾಗಿದೆ. ಸಾಮರ್ಥ್ಯ ಹೆಚ್ಚಳ ಎಂದರೆ ಈಗಾಗಲೇ ಇರುವ ಎರಡು ಅಥವಾ ಅದಕ್ಕೂ ಕಡಿಮೆ ಲೇನ್‌ಗಳ ಹೆದ್ದಾರಿಗಳನ್ನು ಸುಧಾರಣೆ ಮಾಡಿ, ವಾಹನ ದಟ್ಟಣೆ ನಿರ್ವಹಿಸಲು ಸಮರ್ಥವಾಗಿಸುವುದಾಗಿದೆ. 

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ