ಮೋದಿಯೇ ಮೆಚ್ಚಿನ ವ್ಯಕ್ತಿ
ಕ್ರಿಕೆಟಿಗ ಧೋನಿಗೆ ಪಟ್ಟಿಯಲ್ಲಿ ಎರಡನೇ ಸ್ಥಾನ
Team Udayavani, Sep 27, 2019, 5:10 AM IST
ಹೊಸದಿಲ್ಲಿ: ದೇಶದ ಅತಿ ಮೆಚ್ಚಿನ ವ್ಯಕ್ತಿಗಳ ಪೈಕಿ ಕ್ರಿಕೆಟಿಗ ಎಂ.ಎಸ್. ಧೋನಿಯನ್ನು ಹಿಂದಿಕ್ಕಿ ಪ್ರಧಾನಿ ನರೇಂದ್ರ ಮೋದಿ ಪ್ರಥಮ ಸ್ಥಾನ ಪಡೆದಿದ್ದಾರೆ. ಅಷ್ಟೇ ಅಲ್ಲ, ವಿಶ್ವದ ಮೆಚ್ಚಿನ ವ್ಯಕ್ತಿಗಳ ಪೈಕಿ ಮೋದಿ ಆರನೇ ಸ್ಥಾನ ಗಳಿಸಿದ್ದಾರೆ.
ಯುಗೌ ಎಂಬ ಸಂಸ್ಥೆ ನಡೆಸಿದ ಈ ಸಮೀಕ್ಷೆಯಲ್ಲಿ ಭಾರತದ ಶೇ.15.66 ರಷ್ಟು ಜನರು ಮೋದಿಯನ್ನು ಮೆಚ್ಚಿದ್ದಾರೆ. ಇನ್ನು ಧೋನಿಯನ್ನು ಶೇ.8.58ರಷ್ಟು ಜನರು ಮೆಚ್ಚಿದ್ದಾರೆ. 41 ದೇಶಗಳ 42 ಸಾವಿರ ಜನರನ್ನು ಮಾತನಾಡಿಸಿ ಈ ಸಮೀಕ್ಷೆಯನ್ನು ಸಂಸ್ಥೆ ನಡೆಸಿದ್ದು, ಪುರುಷರು ಹಾಗೂ ಮಹಿಳೆಯರು ಎಂಬ ಎರಡು ವಿಭಿನ್ನ ವಿಭಾಗದಲ್ಲಿ ವಿಶ್ವದ ಮೆಚ್ಚಿನ ವ್ಯಕ್ತಿಗಳನ್ನು ಪಟ್ಟಿ ಮಾಡಿದೆ.
ಭಾರತದ ಮೆಚ್ಚಿನ ಮಹಿಳೆಯರ ಪಟ್ಟಿಯಲ್ಲಿ ಮೇರಿಕೋಮ್, ಕಿರಣ್ ಬೇಡಿ, ಲತಾ ಮಂಗೇಶ್ಕರ್, ಸುಷ್ಮಾ ಸ್ವರಾಜ್, ದೀಪಿಕಾ ಪಡುಕೋಣೆ ಮೊದಲ ಐದು ಸ್ಥಾನಗಳಲ್ಲಿದ್ದಾರೆ. ಪುರುಷರ ಪಟ್ಟಿಯಲ್ಲಿ ರತನ್ ಟಾಟಾ (3), ಬರಾಕ್ ಒಬಾಮಾ (4), ಬಿಲ್ ಗೇಟ್ಸ್ (5) ಸ್ಥಾನ ಪಡೆದಿದ್ದಾರೆ.
ಭಾರತದ ಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮೊದಲ ಸ್ಥಾನದಲ್ಲಿದ್ದರೆ, ವಿಶ್ವದ ಮೆಚ್ಚಿನ ವ್ಯಕ್ತಿಗಳ ಪೈಕಿ ಮೋದಿ ಆರನೆಯ ಸ್ಥಾನದಲ್ಲಿದ್ದಾರೆ. ವಿಶ್ವದ ಪಟ್ಟಿಯಲ್ಲಿ ಬಿಲ್ ಗೇಟ್ಸ್ (ಶೇ. 9.6), ಬರಾಕ್ ಒಬಾಮಾ (ಶೇ.9.2), ಜಾಕಿ ಚಾನ್ (ಶೇ. 5.7), ಕ್ಸಿ ಜಿನ್ಪಿಂಗ್ (ಶೇ. 5.1), ಜಾಕ್ ಮಾ (ಶೇ. 4.9) ಮೊದಲ ಐದು ಸ್ಥಾನಗಳಲ್ಲಿದ್ದಾರೆ. ಈ ಎಲ್ಲ ಗಣ್ಯರು ಕಳೆದ ವರ್ಷಕ್ಕೆ ಹೋಲಿಸಿದರೆ ಅದೇ ಸ್ಥಾನವನ್ನು ಕಾದುಕೊಂಡಿದ್ದರೆ, ಪ್ರಧಾನಿ ಮೋದಿ 2 ಸ್ಥಾನ ಮೇಲೇರಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ
Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ
Loksabha Election; ದೇಶದಲ್ಲಿ ಹಂತ-1: ಮತ ಇಂದು
EVM ಯಾವ ಗುಂಡಿ ಒತ್ತಿದರೂ ಬಿಜೆಪಿಗೆ ಮತ: ಭಾರೀ ಚರ್ಚೆ
Cerelac ಶಿಶು ಆಹಾರದಲ್ಲಿ ಹೆಚ್ಚುವರಿ ಸಕ್ಕರೆ ಬೆರೆತಿದೆ: ಗಂಭೀರ ಆರೋಪ
MUST WATCH
ಹೊಸ ಸೇರ್ಪಡೆ
Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್ಪಿ
Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ
Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ
Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ
Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ