Udayavni Special

30 ಸಾವಿರ ಕೋಟಿ ಲೂಟಿ ಮಾಡಿದ ಮೋದಿ: ಹಾವೇರಿಯಲ್ಲಿ ರಾಹುಲ್ ಗುಡುಗು

Team Udayavani, Mar 9, 2019, 9:14 AM IST

rahul-gandhi.jpg

ಹಾವೇರಿ: ರಫೇಲ್ ಒಪ್ಪಂದದಲ್ಲಿ ಹೆಚ್ ಎಎಲ್ ಗೆ ಪ್ರಧಾನಿ ಮೋದಿ ಮೋಸ ಮಾಡಿದ್ದಾರೆ. ರಫೇಲ್ ಒಪ್ಪಂದದಲ್ಲಿ ಪ್ರಧಾನಿ ಮೋದಿ 30 ಸಾವಿರ ಕೋಟಿ ಲೂಟಿ ಮಾಡಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ.

ಹಾವೇರಿಯಲ್ಲಿ ಶನಿವಾರ ಮಧ್ಯಾಹ್ನ ನಡೆದ ಕಾಂಗ್ರೆಸ್ ಜನ ಪರಿವರ್ತನಾ ರ‍್ಯಾಲಿಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಮೋದಿ ಅಧಿಕಾರದಲ್ಲಿ ಇಂದು ದೇಶ ಎರಡಾಗಿದೆ. ಒಂದು ಅಂಬಾನಿ, ಅದಾನಿ, ಚೋಕ್ಸಿಯವರಂತಹ ಭಾರತ. ಬ್ಯಾಂಕ್ ನ ಹಣ ಕೇವಲ 15-20 ಜನರ ಕೈಯಲ್ಲಿದೆ. ಮತ್ತೊಂದು ನಿರುದ್ಯೋಗದ ಭಾರತ ಎಂದು ಕೇಂದ್ರ ಸರಕಾರದ ವಿರುದ್ಧ ಕಿಡಿಕಾರಿದರು. 

ಅಂಬಾನಿ ಚೌಕಿದಾರ್: ನರೇಂದ್ರ ಮೋದಿ ತಾನು ದೇಶದ ಚೌಕಿದಾರ್ ಎನ್ನುತ್ತಾರೆ. ಆದರೆ ಮೋದಿ ಅನಿಲ್ ಅಂಬಾನಿಯ ಚೌಕಿದಾರ್. ಮೋದಿ ಎಲ್ಲಿಗೆ ಹೋದರೂ ಅಂಬಾನಿ, ಅದಾನಿ ಜೊತೆಗಿರ್ತಾರೆ ಎಂದು ಲೇವಡಿ ಮಾಡಿದರು.

GST- ಗಬ್ಬರ್ ಸಿಂಗ್ ಟಾಕ್ಸ್: ಜಿಎಸ್ ಟಿಯನ್ನು ಗಬ್ಬರ್ ಸಿಂಗ್ ಟ್ಯಾಕ್ಸ್ ಎಂದು ಕರೆದ ರಾಹುಲ್, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಈಗಿರುವ ಜಿಎಸ್ ಟಿಯನ್ನು ತೆಗೆದು, ಬೇರೆ ಒಂದೇ ಜಿಎಸ್ ಟಿ, ಸುಲಭ ಜಿಎಸ್ ಟಿಯನ್ನು ಜಾರಿಗೆ ತರುವುದಾಗಿ ಘೋಷಿಸಿದರು.

ಕಳ್ಳರು ಜೈಲಿಗೆ: ನಾವು ಅಧಿಕಾರಕ್ಕೆ ಬಂದರೆ ನೀರವ್ ಮೋದಿ, ವಿಜಯ್ ಮಲ್ಯರಂತಹ ದೇಶಕ್ಕೆ ಮೋಸ ಮಾಡಿದವರನ್ನು ಜೈಲಿಗೆ ಅಟ್ಟುತ್ತೇವೆ. ಮೋದಿಯವರೇ, ನೀವು ಕಳ್ಳರಿಗೆ ಸಹಾಯ ಮಾಡಿ, ನಾವು ಬಡ ಜನರಿಗೆ ಸಹಾಯ ಮಾಡುತ್ತೇವೆ ಎಂದರು.

ಮಸೂದ್ ಅಜರ್ ನನ್ನು ಬಿಟ್ಟವರ‍್ಯಾರು?: ಇತ್ತೀಚೆಗೆ ನಡೆದ ಪುಲ್ವಾಮಾ ದಾಳಿಯ ಬಗ್ಗೆ ಮಾತನಾಡಿದ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರು, ನಾನು ದೇಶದ ಪ್ರಧಾನಿಯವರಿಗೆ ಒಂದು ಪ್ರಶ್ನೆ ಕೇಳುತ್ತೇನೆ. ಪುಲ್ವಾಮಾದಲ್ಲಿ ಹುತಾತ್ಮರಾದ ಸಿಆರ್ ಪಿಎಫ್ ಯೋಧರನ್ನು ಕೊಂದವರು ಯಾರು? ಜೈಶ್ ಎ ಮೊಹಮ್ಮದ್ ಮುಖಂಡನ ಹೆಸರೇನು? ಭಾರತದಿಂದ ಪಾಕಿಸ್ಥಾನಕ್ಕೆ ಅಜರ್ ಮಸೂದ್ ನನ್ನು ಕಳುಹಿಸಿದವರು ಬಿಜೆಪಿ ಸರಕಾರದವರಲ್ಲವೇ? ಎಂದು ಪ್ರಶ್ನಿಸಿದರು.

ಬಡ ಜನರ ಪರ ಮೈತ್ರಿ ಸರಕಾರ: ಕರ್ನಾಟಕದ ಮೈತ್ರಿ ಸರಕಾರದ ಬಗ್ಗೆ ಮಾತನಾಡಿದ ರಾಹುಲ್, ನಾವು ಕರ್ನಾಟಕದಲ್ಲಿ ಜೆಡಿಎಸ್ ನೊಂದಿಗೆ ಮೈತ್ರಿ ಮಾಡಿಕೊಂಡಿದ್ದೇವೆ. ನಮ್ಮದು ರೈತರ,ಬಡ ಜನರ, ದುರ್ಬಲ ವರ್ಗದ ಪರವಾದ ಸರಕಾರ ಎಂದರು.

ಟಾಪ್ ನ್ಯೂಸ್

ಮಲ್ಲಿಕಾರ್ಜುನ ಖರ್ಗೆಯ ಭ್ರಷ್ಟ ಸಂಪತ್ತಿನ ಮುಂದೆ ಮಿಕ್ಕವರೆಲ್ಲ ಲೆಕ್ಕಕ್ಕಿಲ್ಲ: ಬಿಜೆಪಿ ಆರೋಪ

ಮಲ್ಲಿಕಾರ್ಜುನ ಖರ್ಗೆಯ ಭ್ರಷ್ಟ ಸಂಪತ್ತಿನ ಮುಂದೆ ಮಿಕ್ಕವರೆಲ್ಲ ಲೆಕ್ಕಕ್ಕಿಲ್ಲ: ಬಿಜೆಪಿ ಆರೋಪ

1-aa

ತೃತೀಯ ಲಿಂಗಿಗಳನ್ನು ಒಪ್ಪಿಕೊಳ್ಳದ ಕಾರಣ ನೀವು ದಂಡ ಕಟ್ಟಬೇಕು: ಪದ್ಮಶ್ರೀ ಮಂಜಮ್ಮ ಜೋಗತಿ

“ಜಾಗೃತ ಭಾರತ, ಸಮೃದ್ಧ ಭಾರತ”

ಜಾಗೃತ ಭಾರತ, ಸಮೃದ್ಧ ಭಾರತ

ffhjutgfd

ತುಮಕೂರು : ಮದುವೆ ಮಾಡಿಸುವಂತೆ ಡಿಸಿಗೆ ಅರ್ಜಿ ಸಲ್ಲಿಸಿದ ಯುವಕರು

ಇಂದಿನ ರಾಜಕಾರಣ ನನಗೆ ತೃಪ್ತಿ ಎನಿಸುತ್ತಿಲ್ಲ: ಬಸವರಾಜ ಹೊರಟ್ಟಿ

ಇಂದಿನ ರಾಜಕಾರಣ ನನಗೆ ತೃಪ್ತಿ ಎನಿಸುತ್ತಿಲ್ಲ: ಬಸವರಾಜ ಹೊರಟ್ಟಿ

ಇಂದು ಚಿರು ಹುಟ್ಟುಹಬ್ಬ: ಮೇಘನಾ ಹೊಸ ಸಿನಿಮಾ ಆರಂಭ

ಇಂದು ಚಿರು ಹುಟ್ಟುಹಬ್ಬ: ಮೇಘನಾ ಹೊಸ ಸಿನಿಮಾ ಆರಂಭ

bommai and siddaramaiah

ಒಂದೇ ಹೋಟೆಲ್ ನಲ್ಲಿದ್ದರೂ ಪರಸ್ಪರ ಭೇಟಿಯಾಗದ ಸಿಎಂ-ಮಾಜಿ ಸಿಎಂ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪೂಂಚ್ ನಲ್ಲಿ ಕೂಂಬಿಂಗ್: ಉಗ್ರರ ಹತ್ಯೆ, 48 ಗಂಟೆಗಳ ಬಳಿಕ ಇಬ್ಬರು ಯೋಧರ ಮೃತದೇಹ ಪತ್ತೆ!

ಪೂಂಚ್ ನಲ್ಲಿ ಕೂಂಬಿಂಗ್: ಉಗ್ರರ ಹತ್ಯೆ, 48 ಗಂಟೆಗಳ ಬಳಿಕ ಇಬ್ಬರು ಯೋಧರ ಮೃತದೇಹ ಪತ್ತೆ!

ಸಿಂಘು ಗಡಿ ಹತ್ಯೆ: ಪೊಲೀಸರೆದುರು ಶರಣಾದ ಮತ್ತಿಬ್ಬರು ನಿಹಾಂಗ್ ಸಿಖ್ಖರು

ಸಿಂಘು ಗಡಿ ಹತ್ಯೆ: ಪೊಲೀಸರೆದುರು ಶರಣಾದ ಮತ್ತಿಬ್ಬರು ನಿಹಾಂಗ್ ಸಿಖ್ಖರು

ಕಾಂಗ್ರೆಸ್‌, ದೇಶದ್ರೋಹಿಗಳಿಗೆ ಜಾಗವಿಲ್ಲ: ಸಂಸದೆ ಪ್ರಜ್ಞಾ ಠಾಕೂರ್‌

ಕಾಂಗ್ರೆಸ್‌, ದೇಶದ್ರೋಹಿಗಳಿಗೆ ಜಾಗವಿಲ್ಲ: ಸಂಸದೆ ಪ್ರಜ್ಞಾ ಠಾಕೂರ್‌

ಕೇರಳ ಮಳೆಗೆ 8 ಸಾವು; 12ಕ್ಕೂ ಅಧಿಕ ಮಂದಿ ಕಣ್ಮರೆ

ಕೇರಳ ಮಳೆಗೆ 8 ಸಾವು; 12ಕ್ಕೂ ಅಧಿಕ ಮಂದಿ ಕಣ್ಮರೆ

ಪ್ರಾಚ್ಯವಸ್ತು ಸಂರಕ್ಷಣೆಗೆ ವಿಶ್ವದರ್ಜೆಯ ತಂತ್ರಜ್ಞಾನ

ಪ್ರಾಚ್ಯವಸ್ತು ಸಂರಕ್ಷಣೆಗೆ ವಿಶ್ವದರ್ಜೆಯ ತಂತ್ರಜ್ಞಾನ

MUST WATCH

udayavani youtube

ಪರಸ್ಪರ ಮಜ್ಜಿಗೆ ಎರಚಿಕೊಂಡು ಗೌಳಿ ಬುಡಕಟ್ಟು ಸಮುದಾಯದಿಂದ ದಸರಾ ಆಚರಣೆ

udayavani youtube

ಟೀಂ ಇಂಡಿಯಾ ಮುಖ್ಯ ಕೋಚ್ ಸ್ಥಾನಕ್ಕೆ ದ್ರಾವಿಡ್ ನೇಮಕ

udayavani youtube

ಅಸಹಾಯಕ ಸ್ಥಿತಿಯಲ್ಲಿದ್ದ ವ್ಯಕ್ತಿ ಹಾಗೂ ಕೋತಿಯನ್ನು ರಕ್ಷಿಸಿ ಮಾದರಿಯಾದ ಯುವಕರು

udayavani youtube

ರಾಮನ ಹೆಸರಲ್ಲಿ ಅಧಿಕಾರಕ್ಕೆ ಬಂದವರಿಗೆ ಕುತ್ತು? ಮೈಲಾರಸ್ವಾಮಿ ಕಾರ್ಣಿಕ ನುಡಿ ಏನು ಗೊತ್ತಾ?

udayavani youtube

ಹುಮನಾಬಾದ್ ನಲ್ಲಿ ವಿಜಯ ದಶಮಿ ಸಂಭ್ರಮ : ನೋಡುಗರ ಗಮನ ಸೆಳೆದ ರಾವಣನ ಪ್ರತಿಕೃತಿ

ಹೊಸ ಸೇರ್ಪಡೆ

davanagere news

ಹಿರೇಕಲ್ಮಠದೊಂದಿಗೆ ಅವಿನಾಭಾವ ಸಂಬಂಧ

12

ಕ್ಷಯ ಮುಕ್ತ ದೇಶಕ್ಕೆ ಸಹಕಾರ ಅಗತ್ಯ

ಮಲ್ಲಿಕಾರ್ಜುನ ಖರ್ಗೆಯ ಭ್ರಷ್ಟ ಸಂಪತ್ತಿನ ಮುಂದೆ ಮಿಕ್ಕವರೆಲ್ಲ ಲೆಕ್ಕಕ್ಕಿಲ್ಲ: ಬಿಜೆಪಿ ಆರೋಪ

ಮಲ್ಲಿಕಾರ್ಜುನ ಖರ್ಗೆಯ ಭ್ರಷ್ಟ ಸಂಪತ್ತಿನ ಮುಂದೆ ಮಿಕ್ಕವರೆಲ್ಲ ಲೆಕ್ಕಕ್ಕಿಲ್ಲ: ಬಿಜೆಪಿ ಆರೋಪ

1-aa

ತೃತೀಯ ಲಿಂಗಿಗಳನ್ನು ಒಪ್ಪಿಕೊಳ್ಳದ ಕಾರಣ ನೀವು ದಂಡ ಕಟ್ಟಬೇಕು: ಪದ್ಮಶ್ರೀ ಮಂಜಮ್ಮ ಜೋಗತಿ

“ಜಾಗೃತ ಭಾರತ, ಸಮೃದ್ಧ ಭಾರತ”

ಜಾಗೃತ ಭಾರತ, ಸಮೃದ್ಧ ಭಾರತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.