ಬಿಜೆಪಿ ಮಹಿಳಾ ಸಂಸದರೊಂದಿಗೆ ಪ್ರಧಾನಿ ಮೋದಿ ಉಪಾಹಾರ ಸಂವಾದ, ವಿಚಾರ-ವಿನಿಮಯ

Team Udayavani, Jul 12, 2019, 11:41 AM IST

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರಿಂದು ಶುಕ್ರವಾರ ಬೆಳಗ್ಗೆ ತಮ್ಮ ನಿವಾಸದಲ್ಲಿ ಬಿಜೆಪಿಯ ಮಹಿಳಾ ಸಂಸದರನ್ನು ಉಪಾಹಾರ ದಲ್ಲಿ ಭೇಟಿಯಾಗಿ ವಿಚಾರ ವಿನಿಮಯ ನಡೆಸಿದರು.

ಸಂಸತ್ತಿನ ವಿವಿಧ ವರ್ಗ ಸದಸ್ಯರೊಂದಿಗೆ ಪ್ರಧಾನಿ ಮೋದಿ ಅವರು ನಡೆಸುತ್ತಿರುವ ಭೇಟಿ ಸರಣಿಯಲ್ಲಿ ಇದು ಐದನೇಯದ್ದಾಗಿದೆ.

ಏಳು ಸಮೂಹಗಳಲ್ಲಿ ವಿಂಗಡಿಸಲ್ಪಟ್ಟಿರುವ ಪ್ಷದ ಸಂಸದರನ್ನು ಭೇಟಿಯಾಗುವ ಉಪಕ್ರಮದಲ್ಲಿ ಪ್ರಧಾನಿ ಮೋದಿ ಅವರು ಈಗಾಗಲೇ ಒಬಿಸಿ, ಎಸ್‌ಸಿ ಮತ್ತು ಎಸ್‌ ಟಿ ವರ್ಗಗಳಿಗೆ ಸೇರಿದ ಪಕ್ಷದ ಸಂಸದರನ್ನು ಭೇಟಿಯಾಗಿ ವಿಚಾರ ವಿನಿಮಯ ನಡೆಸಿದ್ದಾರೆ. ಇವರಲ್ಲಿ ಕೆಲವರು ಈ ಹಿಂದೆ ಸಚಿವರೂ ಆಗಿದ್ದರು ಎಂದು ಮೂಲಗಳುತಿಳಿಸಿವೆ.

ಬಿಜೆಪಿಯ ಅಧ್ಯಕ್ಷರೂ ಆಗಿರುವ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್‌ ಜೋಷಿ ಮಾತ್ರವೇ ಪ್ರಧಾನಿ ಮೋದಿ ಅವರ ಬಿಜೆಪಿ-ಸಂಸದ-ಸಂವಾದ ಕಾರ್ಯಕ್ರಮದ ಭಾಗವಾಗಿದ್ದಾರೆ.

17ನೇ ಲೋಕಸಭೆಗೆ ಹೊಸದಾಗಿ ಚುನಾಯಿತರಾಗಿರುವವರಲ್ಲಿ 78 ಮಹಿಳಾ ಸಂಸದರು ಇದ್ದು ಇವರಲ್ಲಿ 41 ಮಂದಿ ಬಿಜೆಪಿಯವರಾಗಿದ್ದಾರೆ.

 


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ