ರಾಷ್ಟ್ರಪತಿ ಸ್ಥಾನಕ್ಕೆಅಡ್ವಾಣಿ ಹೆಸರು ಪ್ರಸ್ತಾಪಿಸಿದ ಮೋದಿ?

Team Udayavani, Mar 16, 2017, 10:34 AM IST

ನವದೆಹಲಿ: ಬಿಜೆಪಿ ಹಿರಿಯ ನಾಯಕ ಎಲ್‌.ಕೆ.ಅಡ್ವಾಣಿ ಹೆಸರನ್ನು ರಾಷ್ಟ್ರಪತಿ ಹುದ್ದೆಗೆ ಪ್ರಧಾನಿ ನರೇಂದ್ರ ಮೋದಿ ಶಿಫಾರಸು ಮಾಡಿದ್ದಾರೆ ಎಂದು ಹೇಳಲಾಗಿದೆ. 

ಕೆಲ ದಿನಗಳ ಹಿಂದೆ ಗುಜರಾತ್‌ನ ಸೋಮನಾಥದಲ್ಲಿ ಆಯೋಜಿಸಲಾಗಿದ್ದ ಬಿಜೆಪಿ ಸಭೆಯಲ್ಲಿ ಪ್ರಧಾನಿ ಮೋದಿಯವರೇ ಈ ಮಾತುಗಳನ್ನಾಡಿದ್ದಾರೆಂದು ವರದಿಯಾಗಿದೆ. ಈ ಸಂದರ್ಭದಲ್ಲಿ ಅಡ್ವಾಣಿಯವರೂ ಇದ್ದರು. ಹಾಲಿ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ಅಧಿಕಾರದ ಅವಧಿ ಜು.25ರಂದು ಮುಕ್ತಾಯವಾಗಲಿದೆ.

ಒಂದು ವೇಳೆ ದೇಶದ ಅತ್ಯುನ್ನತ ಹುದ್ದೆಗೆ ಅಡ್ವಾಣಿ ನೇಮಕವಾಗಿದ್ದೇ ಆದಲ್ಲಿ ಅದು ಪ್ರಧಾನಿ ಮೋದಿ ಗುರುವಿಗೆ ನೀಡುವ ಗುರುದಕ್ಷಿಣೆ ಎಂದೇ ವಿಶ್ಲೇಷಿಸಲಾಗುತ್ತಿದೆ. ಮೋದಿಯವರನ್ನು ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸಿದ್ದ ವೇಳೆ ಅಡ್ವಾಣಿ ಆಕ್ಷೇಪಿಸಿದ್ದರು. ಕೆಲ ದಿನಗಳ ಹಿಂದಷ್ಟೇ 1992ರಲ್ಲಿ ಅಯೋಧ್ಯೆ ವಿವಾದಿತ ಕಟ್ಟಡದ ಧ್ವಂಸ ಪ್ರಕರಣದಲ್ಲಿ ಅಡ್ವಾಣಿ ಮತ್ತಿತರರ ವಿರುದ್ಧ ರದ್ದಾಗಿದ್ದ ವಿಚಾರಣೆ ಆರಂಭದ ಬಗ್ಗೆ ಸುಪ್ರೀಂ ಒಲವು ವ್ಯಕ್ತಪಡಿಸಿತ್ತು


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ