ಪ್ರಧಾನಿ ನರೇಂದ್ರ ಮೋದಿ ಮಾರ್ಚ್ 3ರಂದು ಅಮೇಠಿಗೆ ಭೇಟಿ
Team Udayavani, Feb 27, 2019, 7:19 AM IST
ಅಮೇಠಿ : ಪ್ರಧಾನಿ ನರೇಂದ್ರ ಮೋದಿ ಅವರು ಮಾರ್ಚ್ 4ರಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಸಂಸದೀಯ ಕ್ಷೇತ್ರವಾಗಿರುವ ಅಮೇಠಿಗೆ ಭೇಟಿ ನೀಡಲಿದ್ದಾರೆ.
ಅಮೇಠಿಯ ಕೋರ್ಬಾ ಮುನ್ಶಿಗಂಜ್ ನಲ್ಲಿ ಸರಕಾರಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸುವ ಪ್ರಧಾನಿ ಮೋದಿ ಅವರು ಅನಂತರ ಗೌರೀಗಂಜ್ ನ ಕೋಹರ್ ಪ್ರದೇಶದಲ್ಲಿ ಸಾರ್ವಜನಿಕ ಭಾಷಣ ಮಾಡಲಿದ್ದಾರೆ ಎಂದು ಲೋಕಸಭಾ ಕ್ಷೇತ್ರದ ಬಿಜೆಪಿ ಸಂಚಾಲಕ ರಾಜೇಶ್ ಅಗ್ರಹಾರಿ ಇಂದು ಬುಧವಾರ ತಿಳಿಸಿದ್ದಾರೆ.