ಕರ್ತಾಪುರ ಕಾರಿಡಾರ್ ಉದ್ಘಾಟನೆಗೆ ಪ್ರಧಾನಿ ಮೋದಿ

Team Udayavani, Oct 22, 2019, 2:10 PM IST

ಹೊಸದಿಲ್ಲಿ: ಭಾರತ – ಪಾಕಿಸ್ಥಾನ ನಡುವಿನ ಕರ್ತಾಪುರ ಕಾರಿಡಾರ್ ನ್ನು ಪ್ರಧಾನಿ ನರೇಂದ್ರ ಮೋದಿಯವರು ನವೆಂಬರ್ 9ರಂದು ಉದ್ಘಾಟಿಸಲಿದ್ದಾರೆ. ಕಾರಿಡಾರ್ ನ ಭಾರತದ ಭಾಗದಲ್ಲಿ ಮೋದಿಯವರು ಉದ್ಘಾಟನೆ ನಡೆಸಲಿದ್ದು, ಅಂದೇ ಯಾತ್ರಾರ್ಥಿಗಳ ಮೊದಲ ತಂಡವನ್ನು ಕಳುಹಿಸಿಕೊಡಲಿದ್ದಾರೆ.

ಪಂಜಾಬ್ ನ ಗುರ್ದಾಸ್ ಪುರದಲ್ಲಿ ಜಿಲ್ಲೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಭಾಗವಹಿಸಲಿದ್ದಾರೆ.

ಪಾಕಿಸ್ಥಾನದಲ್ಲಿ ಕೂಡಾ ಅದೇ ದಿನ ಕಾರಿಡಾರ್ ನ ಉದ್ಘಾಟನೆ ನಡೆಯಲಿದೆ. ಮತ್ತು ಭಾರತದ ಯಾತ್ರಾರ್ಥಿಗಳನ್ನು ಸ್ವಾಗತಿಸಲಿದ್ದಾರೆ.

ಉದ್ಘಾಟನಾ ಕಾರ್ಯಕ್ರಮದ ಬಗ್ಗೆ ಚರ್ಚೆ ನಡೆಸಲು ಭಾರತ ಪಾಕಿಸ್ಥಾನವನ್ನು ಚರ್ಚೆಗೆ ಆಹ್ವಾನಿಸಿದ್ದು, ಆದರೆ ಇದುವರೆಗೆ ಪಾಕ್ ನಿಂದ ಉತ್ತರ ಬಂದಿಲ್ಲ.

ಪಾಕಿಸ್ಥಾನದಲ್ಲಿರುವ ಕರ್ತಾಪುರ ಸಿಖ್ಖರ ಪವಿತ್ರ ಸ್ಥಳವಾಗಿದ್ದು, ಭಾರತದಿಂದ ಈ ನೂತನ ಕಾರಿಡಾರ್ ಮೂಲಕ ಯಾತ್ರಾರ್ಥಿಗಳು ಸಂಚಾರ ಮಾಡಲಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ