ಮೋದಿ ಸರಕಾರ:85 ಸಾ.ಕೋ.ರೂ.ಮೌಲ್ಯದ ಬೆಟ್ಟಿಂಗ್‌ ಅನುಮಾನ

Team Udayavani, May 19, 2019, 5:09 PM IST

ಮುಂಬಯಿ: ಎಲ್ಲ ರೀತಿಯಲ್ಲಿ ಚುನಾವಣೆ ಪ್ರಕ್ರಿಯೆ ಅಂತಿಮ ಹಂತಕ್ಕೆ ತಲುಪುತ್ತಿದ್ದಂತೆ ಸಟ್ಟಾ ಮಾರುಕಟ್ಟೆಯು ವೇಗ ಪಡೆಯುತ್ತಿದೆ.ಗೆಲುವಿನ ವಿಚಾರದ ದರದಲ್ಲಿ ಏರಿಳಿಕೆ ನಡೆಯಲಾರಂಭಿಸಿದ್ದು, ನರೇಂದ್ರ ಮೋದಿ ನೇತೃತ್ವದ ಸರಕಾರದ ಮೇಲೆ ಎಲ್ಲಕ್ಕಿಂತ ಅಧಿಕ ಬೆಟ್ಟಿಂಗ್‌ ನಡೆಯುತ್ತಿದೆ.

ಆದರೆ ಜೂಜಾಟಗಾರರು, ಪ್ರಸಕ್ತ ಚುನಾವಣೆಯಲ್ಲಿ ಬಿಜೆಪಿ ಸಂಪೂರ್ಣ ಬಹುಮತ ಪಡೆಯುವುದಿಲ್ಲ. ಆದರೆ ನರೇಂದ್ರ ಮೋದಿ ಅವರ ನೇತೃತ್ವದ ಎನ್‌ಡಿಎ ಸರಕಾರ ರಚನೆ ಆಗಲಿದೆ ಎಂದು ಹೇಳುತ್ತಿದ್ದಾರೆ.

ಚುನಾವಣೆಗಾಗಿ ಸಟ್ಟಾ ಮಾರುಕಟ್ಟೆ ಯಲ್ಲಿ ಸುಮಾರು 85,000 ಕೋ. ರೂ. ಗಳಷ್ಟು ಮೌಲ್ಯಗಳ ಬೆಟ್ಟಿಂಗ್‌ ನಡೆದಿರುವ ಅನುಮಾನವಿದೆ.

ಯುಪಿಎ, ಮಹಾಮೈತ್ರಿ ಅಧಿಕಾರ: ಭರವಸೆ ಇಲ್ಲ
ಬುಕ್ಕಿಗಳು ಕೂಡಾ ಮತ್ತೆ ಯುಪಿಎ ಸರಕಾರ ಅಧಿಕಾರ ನಡೆಸುವ ಬಗ್ಗೆ ಅಸಾಧ್ಯ ಎಂಬ ಭವಿಷ್ಯವಾಣಿ ನುಡಿಯಲಾರಂಭಿಸಿದ್ದಾರೆ. ಸಟ್ಟಾ ಮಾರುಕಟ್ಟೆಯಲ್ಲಿ ಎನ್‌ಡಿಎ ಸರಕಾರ ರಚಿಸುವ ಬಗ್ಗೆ 12 ಪೈಸೆ ಆಗಿದ್ದರೆ, ಅದೇ ಬಿಜೆಪಿಯ ಪೂರ್ಣ ಬಹುಮತದ ದರ 3.5 ರೂ. ಗಳಷ್ಟು ಯುಪಿಎ 50 ರೂ. ಮಹಾಮೈತ್ರಿಯು 80 ರೂ. ಹಾಗೂ ಕಾಂಗ್ರೆಸ್‌ ಸರಕಾರಕ್ಕೆ 100 ರೂ.ಗಳಂತೆ ನಡೆಯಲಾರಂಭಿಸಿದೆ. ಅಂದರೆ ಬುಕ್ಕಿಗಳ ಲೆಕ್ಕಾಚಾರದಲ್ಲಿ ಮಹಾ ಮೈತ್ರಿಯು ಕಾಂಗ್ರೆಸ್‌ ಸರಕಾರ ರಚನೆ ಆಗುವುದಿಲ್ಲ .
ಬಿಜೆಪಿಗೆ 235 ಸೀಟುಗಳು ಕಾಂಗ್ರೆಸ್‌ಗೆ 60 ಸೀಟುಗಳು ದೊರೆ ಯಲಿವೆ. ಅದರಂತೆ ಮಾರುಕಟ್ಟೆ ಯಲ್ಲಿ ಬಿಜೆಪಿಯ 235 ಸೀಟುಗಳನ್ನು ಪಡೆಯುವ ಬಗ್ಗೆ 32 ಪೈಸೆಯ ದರಕ್ಕೆ ತಲುಪಿದೆ. ಅದೇ 240 ಸೀಟುಗಳಿಗೆ 52 ಪೈಸೆ, 245 ಸೀಟಿಗಾಗಿ 82 ಪೈಸೆ ಹಾಗೂ 250 ಸೀಟಿಗೆ 1.05 ದರ ಇದೆ ಎನ್ನಲಾಗುತ್ತದೆ. ಬುಕ್ಕಿಗಳ ಪ್ರಕಾರ ಬಿಜೆಪಿ 235 ಸೀಟುಗಳನ್ನು ಪಡೆಯುವುದು ಖಚಿತ ಎನ್ನಲಾಗುತ್ತದೆ. ಕಾಂಗ್ರೆಸ್‌ 60 ಸೀಟು ಗಳಿಗೆ 28 ಪೈಸೆ, 65 ಸೀಟುಗಳಿಗೆ 65 ಪೈಸೆ, 70 ಸೀಟುಗಳಿಗಾಗಿ 85 ಪೈಸೆ, 75 ಸೀಟುಗಳಿಗಾಗಿ ಒಂದು ರೂ. ಹಾಗೂ 80 ಸೀಟುಗಳಿಗೆ 1.30 ದರ ಗಳಷ್ಟಕ್ಕೆ ತಲುಪಿದೆ.
ಮಹಾರಾಷ್ಟ್ರದ 48 ಸೀಟುಗಳ ಪೈಕಿ ಬಿಜೆಪಿ ಶಿವಸೇನೆ ಮೈತ್ರಿಯು ಸುಮಾರು 36ರಿಂದ 38 ಸೀಟುಗಳು ಗೆಲ್ಲುವ ಸಂಭವವಿದೆ. ಅದೇ ಮುಂಬಯಿಯ ಆರು ಸೀಟುಗಳ ಪೈಕಿ ಬಿಜೆಪಿ – ಶಿವಸೇನೆಯು 5 ಸೀಟುಗಳನ್ನು ತಮ್ಮ ತೆಕ್ಕೆಗೆ ಹಾಕಿಕ್ಕೊಳ್ಳುತ್ತವೆ ಎಂದು ಅಭಿಪ್ರಾಯ ವ್ಯಕ್ತಪಡಿಸಲಾಗುತ್ತಿದೆ. ದಕ್ಷಿಣ ಮುಂಬಯಿ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿ ಮಿಲಿಂದ್‌ದೇವ್ರಾ ಅವರ ಗೆಲುವು ಖಚಿತ ಎನ್ನಲಾಗುತ್ತಿದೆ. ಮಿಲಿಂದ್‌ ದೇವ್ರಾ ಅವರಿಗೆ 65 ಪೈಸೆಗಳ ದರ ಹಾಗೂ ಶಿವಸೇನೆಯ ಅರವಿಂದ್‌ ಸಾವಂತ್‌ ಅವರಿಗೆ 1.45 ರೂ. ಗಳ ದರಗಳಷ್ಟಾಗಿದೆ, ಅದೇ ಉತ್ತರ ಮುಂಬಯಿಯಲ್ಲಿ ಬಿಜೆಪಿ ಸಂಸದ ಗೋಪಾಲ್‌ಶೆಟ್ಟಿ ಅವರ ಗೆಲುವು ಖಚಿತ ಎನ್ನಲಾಗುತ್ತಿದೆ. ದರವು 5 ಪೈಸೆ ಅದೇ ವಿರುದ್ಧ ನಿಂತ ಕಾಂಗ್ರೆಸ್‌ ಅಭ್ಯರ್ಥಿ ಊರ್ಮಿಳ ಮಾತೋಂಡ್ಕರ್‌ ಅವರಿಗೆ 40 ಪೈಸೆಯ ದರಗಳಷ್ಟಾಗಿದೆ. ಅದೇ ಉತ್ತರ ಮಧ್ಯ ಮುಂಬಯಿ ಬಿಜೆಪಿಯ ಪೂನಂ ಮಹಾಜನ್‌ 60 ಪೈಸೆ ಹಾಗೂ ಕಾಂಗ್ರೆಸ್‌ ಅಭ್ಯರ್ಥಿ ಪ್ರಿಯಾದತ್ತ 1.50 ರೂ. ಗಳಷ್ಟು ಅದೇ ರೀತಿ ಮುಂಬಯಿ ಬಾಕಿ ಮೂರು ಕ್ಷೇತ್ರದಲ್ಲಿ ಬಿಜೆಪಿಯ ಮನೋಜ್‌ ಕೋಟಕ್‌, ಶಿವಸೇನೆಯ ರಾಹುಲ್‌ ಶೇವಾಲೆ ಗೆಲುವು ಪಕ್ಕಾ ಎನ್ನಲಾಗುತ್ತಿದೆ. ಶಿವಸೇನೆಯ ಗಜಾನನ ಕೀರ್ತಿಕರ್‌ ಅವರು ಕೂಡ ಕಾಂಗ್ರೆಸ್‌ ನ ಸಂಜಯ್‌ ನಿರುಪಮ್‌ ಅವರಿಗಿಂತ ಹೆಚ್ಚು ವರ್ಚಸ್ಸು ಪಡೆಯಲಿದ್ದಾರೆ ಎನ್ನಲಾಗುತ್ತಿದೆ.

ರಾಹುಲ್‌ ಗಾಂಧಿ ವಿರುದ್ಧ ಸ್ಮೃತಿ ಇರಾನಿ ವರ್ಚಸ್ಸು
ಸಟ್ಟಾ ಮಾರುಕಟ್ಟೆಯ ಪ್ರಕಾರ, ರಾಹುಲ್‌ ಗಾಂಧಿ ಅವರು ಅಮೇಠಿ ಲೋಕಸಭೆ ಕ್ಷೇತ್ರದಲ್ಲಿ ಸೋಲು ಅನುಭವಿಸಲಿದ್ದಾರೆ. ಅಮೇಠಿಯಲ್ಲಿ ರಾಹುಲ್‌ ಗಾಂಧಿ ಅವರಿಗೆ ದರ ಹೆಚ್ಚಿಸಿ 1.25 ರೂ,. ಹಾಗೂ ಅದೇ ಸ್ಮೃತಿ ಇರಾನಿ ಅವರಿಗೆ 80 ಪೈಸೆಯ ದರವು ಕಡಿಮೆಯಾಗಿ 70 ಪೈಸೆಗೆ ತಲುಪಿದೆ. ಅಂದರೆ ಅವರ ಲೆಕ್ಕಾಚಾರದಲ್ಲಿ ಸ್ಮೃತಿ ಇರಾನಿ ಅವರು ಗೆಲುವುದು ಖಚಿತ ಎನ್ನಲಾಗುತ್ತಿದೆ.

ನರೇಂದ್ರ ಮೋದಿ ಅವರು ಪ್ರಧಾನ ಮಂತ್ರಿ ಆಗುವ ಬಗ್ಗೆ ದರವು 15 ಪೈಸೆಗಳಷ್ಟು ಆಗಿವೆ. ಅಂದರೆ ಮೋದಿ ಅವರು ಪ್ರಧಾನಿ ಆಗುವ ಸಂಭವ ಎಲ್ಲಕ್ಕಿಂತ ಅಧಿಕವಾಗಿದೆ. ಅದೇ ರಾಹುಲ್‌ ಗಾಂಧಿ ಅವರ 60 ರೂ. ಮಾಯಾವತಿ ಅವರಿಗೆ 110 ರೂ. ಹಾಗೂ ಮಮತಾ ಬ್ಯಾನರ್ಜಿ ಅವರಿಗೆ 150 ರೂ. ದರದಲ್ಲಿ ಮಾರುಕಟ್ಟೆ ನಡೆಯುತ್ತಿದೆ ಎನ್ನಲಾಗಿದೆ. ಅಂದರೆ ಮಾರುಕಟ್ಟೆಯಲ್ಲಿ ರಾಹುಲ್‌ಗಾಂಧಿ, ಮಾಯಾವತಿ ಹಾಗೂ ಮಮತಾ ಬ್ಯಾನರ್ಜಿ ಅಧಿಕಾರ ನಡೆಸು ವುದು ಅಸಾಧ್ಯವೆಂದು ಹೇಳಿಬರುತ್ತಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ