ಗುಜರಾತ್‌ ಮುಖ್ಯಮಂತ್ರಿ ಆಗಿದ್ದ ಮೋದಿ ಬಿಜೆಪಿ, ದೇಶದ ಕಪ್ಪು ಚುಕ್ಕೆ : ಮಾಯಾವತಿ

Team Udayavani, May 15, 2019, 3:58 PM IST

ಹೊಸದಿಲ್ಲಿ : “ಬಿಎಸ್‌ಪಿ ಅಧ್ಯಕ್ಷೆ ಮಾಯಾವತಿ ಅವರು ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದ ಅವಧಿಗಿಂತಲೂ ಹೆಚ್ಚಿನ ಅವಧಿಗೆ ನಾನು ಗುಜರಾತ್‌ ಮುಖ್ಯಮಂತ್ರಿಯಾಗಿದ್ದೆ’ ಎಂದು ಹೇಳಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಟಾಂಗ್‌ ನೀಡುವ ರೀತಿಯಲ್ಲಿ ಮಾಯಾವತಿ, “ಗುಜರಾತ್‌ ಮುಖ್ಯಮಂತ್ರಿಯಾಗಿದ್ದ ಪಿಎಂ ಮೋದಿ ಅವರ ಕೊಡುಗೆಯು ಬಿಜೆಪಿಗೆ ಮಾತ್ರವಲ್ಲ ಇಡಿಯ ದೇಶಕ್ಕೆ ಒಂದು ಕಪ್ಪು ಚುಕ್ಕೆಯಾಗಿತ್ತು’ ಎಂದು ಹೇಳಿದ್ದಾರೆ.

ಬಿಎಸ್‌ಪಿ ಅಧಿಕಾರದಲ್ಲಿದ್ದಾಗ ಉತ್ತರ ಪ್ರದೇಶವು ದೊಂಬಿ ಮತ್ತು ಅರಾಜಕತೆಯಿಂದ ಮುಕ್ತವಾಗಿತ್ತು ಎಂದು ಮಾಯಾವತಿ ಹೇಳಿದರು.

ಪ್ರಧಾನಿ ಮೋದಿ ಅವರು ಬಿಎಸ್‌ಪಿ ಯನ್ನು ಯಾವತ್ತೂ “ಬೆಹನ್‌ ಜೀ ಕೀ ಸಂಪತ್ತೀ ಪಾರ್ಟಿ’ ಎಂದೇ ಕರೆಯುತ್ತಿದ್ದರು. ಬಿಎಸ್‌ಪಿ ರಾಷ್ಟ್ರೀಯ ಅಧ್ಯಕ್ಷೆಯಾಗಿ ನಾನು ಏನೆಲ್ಲ ಹೊಂದಿರುವನೆನೋ ಅವೆಲ್ಲವನ್ನೂ ನನಗೆ ನನ್ನ ಹಿತೈಷಿಗಳು ಮತ್ತು ಸಮಾಜ ಬಾಂಧವರು ನೀಡಿದುದಾಗಿದೆ. ನಾನು ಸರಕಾರದಿಂದ ಯಾವುದನ್ನೂ ಅಡಗಿಸಿಟ್ಟಿಲ್ಲ ಎಂದು ಮಾಯಾವತಿ ಹೇಳಿದರು.

ಬಿಎಸ್‌ಪಿ ನನ್ನ ಖಾಸಗಿ ಸೊತ್ತೆಂದು ಹೇಳುವ ಮೂಲಕ ಪ್ರಧಾನಿ ಮೋದಿ ಅವರು ಸಭ್ಯತೆಯ ಎಲ್ಲ ಮಿತಿಗಳನ್ನು ದಾಟಿದ್ದಾರೆ ಎಂದು ಮಾಯಾವತಿ ದೂರಿದರು. ಇದಕ್ಕೆ ಮೊದಲು ಮಾಯಾವತಿ ಅವರು “ಮೋದಿ ಸರಕಾರ ಮುಳುಗುತ್ತಿರುವ ಹಡಗು’ ಎಂದಿದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ