ಸದನ ಕೋಲಾಹಲ ಎದುರಿಸಲು ಸಜ್ಜು

ನಾಳೆಯಿಂದ ಸಂಸತ್‌ ಮುಂಗಾರು ಅಧಿವೇಶನ

Team Udayavani, Sep 13, 2020, 6:50 AM IST

ಸದನ ಕೋಲಾಹಲ ಎದುರಿಸಲು ಸಜ್ಜು

ಸಾಂದರ್ಭಿಕ ಚಿತ್ರ

ಹೊಸದಿಲ್ಲಿ: ಈ ಬಾರಿಯ ಸಂಸತ್‌ನ ಮುಂಗಾರು ಅಧಿವೇಶನ ಸೋಮವಾರದಿಂದ ಆರಂಭವಾಗಲಿದೆ. ಲೋಕಸಭೆ, ರಾಜ್ಯಸಭೆಯ ಕಲಾಪಗಳನ್ನು ಸುಗಮವಾಗಿ, ಶಾಂತಿಯುತವಾಗಿ ನಡೆಸಿಕೊಂಡು ಹೋಗಲು ಸರಕಾರ‌ ಸನ್ನದ್ಧವಾಗಿದ್ದರೂ, ವಿಪಕ್ಷಗಳು ಕೆಲವು ಸೂಕ್ಷ್ಮ ವಿಚಾರಗಳ ಚರ್ಚೆಗಳಲ್ಲಿ ಸರ್ಕಾರ­ವನ್ನು ಇಕ್ಕಟ್ಟಿಗೆ ಸಿಲುಕಿ­ಸಲು ನಿರ್ಧರಿಸಿವೆ. ಆದರೆ, ಅದಕ್ಕೆ ದಿಟ್ಟ ಉತ್ತರ ನೀಡಲು ಕೇಂದ್ರವೂ ಸಜ್ಜಾಗಿದೆ.

ವಿಪಕ್ಷಗಳು ಕೊರೊನಾ ವಿಚಾರದಲ್ಲಿ ಸರಕಾರ‌ ಕೈಗೊಂಡ ನಿರ್ಧಾರಗಳು, ಜಿಡಿಪಿ ಪತನ ಹಾಗೂ ಗಡಿಯಲ್ಲಿ ಚೀನ­ದಿಂದ ಎದುರಿಸುತ್ತಿರುವ ಬಿಕ್ಕಟ್ಟು ಪರಿಸ್ಥಿತಿಗೆ ಸಂಬಂಧಿಸಿದಂತೆ ಪ್ರಶ್ನೆಗಳ ಸುರಿಮಳೆ ಸುರಿಸಲು ಕಾಯುತ್ತಿದ್ದರೆ, ಕೇಂದ್ರ ಸರಕಾರ‌ ತಾನು ಇತ್ತೀಚೆಗೆ ಕೈಗೊಂಡಿರುವ 11 ಸುಗ್ರೀವಾಜ್ಞೆಗಳನ್ನು ಎರಡೂ ಸದನಗಳಲ್ಲಿ (ಲೋಕಸಭೆ ಮತ್ತು ರಾಜ್ಯಸಭೆ) ಮಂಡಿಸಿ ಸದನದ ಒಪ್ಪಿಗೆ ಪಡೆಯುವುದಕ್ಕೆ ಪ್ರಥಮ ಆದ್ಯತೆ ನೀಡಿದೆ.

ವಿಪಕ್ಷಗಳನ್ನು ಎದುರಿಸಲು ಬಿಜೆಪಿ ಸನ್ನದ್ಧ
ಅಧಿವೇಶನ ಶುರುವಾಗುತ್ತಿದ್ದಂತೆ ಚೀನ ಬಿಕ್ಕಟ್ಟಿನ ಬಗ್ಗೆ ಸರಕಾರವನ್ನು ಪೇಚಿಗೆ ಸಿಕ್ಕಿಸಲು ವಿಪಕ್ಷಗಳು ರೂಪಿಸಿರುವ ತಂತ್ರಗಾರಿಕೆಯನ್ನು ಸಮರ್ಥವಾಗಿ ಎದುರಿಸಲು ಬಿಜೆಪಿ ಸನ್ನದ್ಧವಾಗಿದೆ. ಈ ಕುರಿತಂತೆ ಪ್ರತಿಕ್ರಿಯಿಸಿರುವ ಪಕ್ಷದ ಆಂತರಿಕ ಮೂಲಗಳು, “ಚರ್ಚೆಗೆ ನಾವು ಸಿದ್ಧವಾಗಿದ್ದೇವೆ. ಸದನದಲ್ಲಿ ಯಾವಾಗ ಆ ಚರ್ಚೆ ನಡೆದರೂ ನಾವು ಸಮರ್ಥವಾಗಿ ಉತ್ತರ ನೀಡುತ್ತೇವೆ. ಗಡಿಯಲ್ಲಿ ನಾವು ಹೇಗೆ ಚೀನಕ್ಕೆ ದಿಟ್ಟತನದ ಉತ್ತರ ನೀಡಿದ್ದೇವೆಯೋ, ಅದೇ ರೀತಿ ಸದನದ ಚರ್ಚೆಗಳನ್ನೂ ದಿಟ್ಟತನದಿಂದ ಎದುರಿಸಲಿದ್ದೇವೆ’ ಎಂದು ಹೇಳಿವೆ.

“ಬಹಿರಂಗ ಚರ್ಚೆ ಬೇಡ’
ಈ ಕುರಿತಂತೆ ಮಾತನಾಡಿರುವ ಸಚಿವರೊಬ್ಬರು, “ನಮ್ಮ ಸರಕಾರ, ಚರ್ಚೆಗಳಿಂದ ಓಡಿಹೋಗುವುದಿಲ್ಲ. ಆದರೆ, ಭಾರತ-ಚೀನ ಗಡಿ ವಿಚಾರ ಅತ್ಯಂತ ಸೂಕ್ಷ್ಮವಾದದ್ದು. ಹಾಗಾಗಿ, ಆ ವಿಚಾರದಲ್ಲಿ ಸರಕಾರ‌ ಯಾವ ಕ್ರಮ ಗಳನ್ನು ಅನುಸರಿಸಲಿದೆ, ಯಾವ ತಂತ್ರಗಾರಿಕೆಯನ್ನು ರೂಪಿಸಲಿದೆ ಎಂಬು ದನ್ನು ಬಹಿರಂಗವಾಗಿ ಚರ್ಚಿಸುವುದು ಸಲ್ಲದು. ಆದರೆ, ಇನ್ನೊಂದು ವಾರ ಅಥವಾ ಕೆಲವೇ ದಿನಗಳಲ್ಲಿ ಗಡಿ ಸಮಸ್ಯೆಯನ್ನು ಇತ್ಯರ್ಥ ಗೊಳಿಸಲು ನಿರ್ಧರಿಸಲಾಗಿದೆ” ಎಂದು ಹೇಳಿದ್ದಾರೆ.

ಸಭೆಯಲ್ಲಿ ವಿವರಣೆ?
ಸರಕಾರದ ಕೆಲವು ನಂಬಲರ್ಹ ಮೂಲಗಳನ್ನು ಉದ್ದೇಶಿಸಿ ಮಾಡಿರುವ ಆ ವರದಿಯಲ್ಲಿ, “ಸಾಮಾನ್ಯವಾಗಿ ಪ್ರತಿಯೊಂದು ಅಧಿವೇಶನ ಶುರುವಾಗುವ ಮುನ್ನ ಕೇಂದ್ರ ಸರಕಾರ‌ ಸರ್ವಪಕ್ಷಗಳ ಸಭೆ ಕರೆಯುತ್ತದೆ. ಆದರೆ, ಈ ಬಾರಿ ಕೊರೊನಾ ಮಾರ್ಗಸೂಚಿ ಹಿನ್ನೆಲೆಯಲ್ಲಿ ಸರ್ವಪಕ್ಷಗಳ ಸಭೆಯನ್ನು ರದ್ದುಗೊಳಿಸಿ, ಅದರ ಬದಲಿಗೆ ವ್ಯವಹಾರ ಸಲಹಾ ಸಮಿತಿಯ (ಬಿಎಸಿ) ಸಭೆ ನಡೆಸಲು ಉದ್ದೇಶಿಸಲಾಗಿದೆ. ಆ ಸಭೆಯಲ್ಲಿ ವಿಪಕ್ಷಗಳ ಪ್ರತಿನಿಧಿಗಳು ಮಾತ್ರವೇ ಭಾಗವಹಿಸುವ ನಿರೀಕ್ಷೆಯಿದ್ದು, ಆ ಸಭೆಯಲ್ಲೇ ಭಾರತ-ಚೀನ ಗಡಿ ಪರಿಸ್ಥಿತಿಯ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಲಾಗು¤ತದೆ. ಅಷ್ಟಾದರೂ, ವಿಪಕ್ಷಗಳ ಪ್ರತಿನಿಧಿಗಳು ದೀರ್ಘ‌ ಸ್ವರೂಪದ ಉತ್ತರ ಬೇಕು ಎಂದಾದರೆ ರಕ್ಷಣಾ ಸಚಿವರಿಂದ ವಿಸ್ತೃತ ಮಾಹಿತಿ ನೀಡಲಾಗುತ್ತದೆ’ ಎಂದು ಹೇಳಲಾಗಿದೆ.

ಟಾಪ್ ನ್ಯೂಸ್

ಎಲ್ಲೆಲ್ಲೋ ಸುತ್ತಿ ಮಂಗಳೂರಿಗೆ ಪ್ರಯಾಣಿಕರು ಹೈರಾಣ

ಎಲ್ಲೆಲ್ಲೋ ಸುತ್ತಿ ಮಂಗಳೂರಿಗೆ ಪ್ರಯಾಣಿಕರು ಹೈರಾಣ

ಶ್ರೀ ವಿಶ್ವಪ್ರಿಯತೀರ್ಥರ ನಿವೃತ್ತಿ, ಜನಸಂಪರ್ಕದಿಂದ ದೂರ

ಶ್ರೀ ವಿಶ್ವಪ್ರಿಯತೀರ್ಥರ ನಿವೃತ್ತಿ, ಜನಸಂಪರ್ಕದಿಂದ ದೂರ

 ಮಾ. 10ರ ಬಳಿಕ ಸಂಪುಟ ವಿಸ್ತರಣೆ ವಿಚಾರಣೆ ಪ್ರಕ್ರಿಯೆ?

 ಮಾ. 10ರ ಬಳಿಕ ಸಂಪುಟ ವಿಸ್ತರಣೆ ವಿಚಾರಣೆ ಪ್ರಕ್ರಿಯೆ?

ಬಿಜೆಪಿ-ಶಿವಸೇನೆ ನಡುವೆ ಹಿಂದುತ್ವದ ಜಗಳ

ಬಿಜೆಪಿ-ಶಿವಸೇನೆ ನಡುವೆ ಹಿಂದುತ್ವದ ಜಗಳ

ಲೋಕಾಯುಕ್ತಕ್ಕೆ ಹೆಚ್ಚಿನ ಅಧಿಕಾರ ಅಗತ್ಯ: ನ್ಯಾ| ವಿಶ್ವನಾಥ ಶೆಟ್ಟಿ

ಲೋಕಾಯುಕ್ತಕ್ಕೆ ಹೆಚ್ಚಿನ ಅಧಿಕಾರ ಅಗತ್ಯ: ನ್ಯಾ| ವಿಶ್ವನಾಥ ಶೆಟ್ಟಿ

ಸ್ಥಳೀಯ ಉತ್ಪನ್ನಗಳ ಪ್ರಚಾರ ಮಾಡಿ: ಬಾಲ ಪುರಸ್ಕಾರ ವಿಜೇತರಿಗೆ ಪ್ರಧಾನಿ ಮೋದಿ ಸಲಹೆ

ಸ್ಥಳೀಯ ಉತ್ಪನ್ನಗಳ ಪ್ರಚಾರ ಮಾಡಿ: ಬಾಲ ಪುರಸ್ಕಾರ ವಿಜೇತರಿಗೆ ಪ್ರಧಾನಿ ಮೋದಿ ಸಲಹೆ

ಕೇಂದ್ರದಿಂದ ಫೆಬ್ರವರಿ ವರೆಗಿನ ಸಬ್ಸಿಡಿ ಸೀಮೆಎಣ್ಣೆ ಬಿಡುಗಡೆ

ಕೇಂದ್ರದಿಂದ ಫೆಬ್ರವರಿ ವರೆಗಿನ ಸಬ್ಸಿಡಿ ಸೀಮೆಎಣ್ಣೆ ಬಿಡುಗಡೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬಿಜೆಪಿ-ಶಿವಸೇನೆ ನಡುವೆ ಹಿಂದುತ್ವದ ಜಗಳ

ಬಿಜೆಪಿ-ಶಿವಸೇನೆ ನಡುವೆ ಹಿಂದುತ್ವದ ಜಗಳ

ಸ್ಥಳೀಯ ಉತ್ಪನ್ನಗಳ ಪ್ರಚಾರ ಮಾಡಿ: ಬಾಲ ಪುರಸ್ಕಾರ ವಿಜೇತರಿಗೆ ಪ್ರಧಾನಿ ಮೋದಿ ಸಲಹೆ

ಸ್ಥಳೀಯ ಉತ್ಪನ್ನಗಳ ಪ್ರಚಾರ ಮಾಡಿ: ಬಾಲ ಪುರಸ್ಕಾರ ವಿಜೇತರಿಗೆ ಪ್ರಧಾನಿ ಮೋದಿ ಸಲಹೆ

ಈ ಬಾರಿಯ ಬಜೆಟ್‌ನಲ್ಲಿ ಕೇಂದ್ರ ರೈಲ್ವೇ ಇಲಾಖೆಗೆ ಶೇ.20 ಹೆಚ್ಚು ಅನುದಾನ?

ಈ ಬಾರಿಯ ಬಜೆಟ್‌ನಲ್ಲಿ ಕೇಂದ್ರ ರೈಲ್ವೇ ಇಲಾಖೆಗೆ ಶೇ.20 ಹೆಚ್ಚು ಅನುದಾನ?

ರಾಜ್‌ಕೋಟ್‌ನ ಸೇತುವೆಗೆ ಜ|ರಾವತ್‌ ಹೆಸರು

ರಾಜ್‌ಕೋಟ್‌ನ ಸೇತುವೆಗೆ ಜ|ರಾವತ್‌ ಹೆಸರು

ಹೆಣ್ಣುಮಕ್ಕಳ ಘನತೆ ಹೆಚ್ಚಿಸುವುದು ತಮ್ಮ ಉದ್ದೇಶ: ಪ್ರಧಾನಿ ಮೋದಿ

ಹೆಣ್ಣುಮಕ್ಕಳ ಘನತೆ ಹೆಚ್ಚಿಸುವುದು ತಮ್ಮ ಉದ್ದೇಶ: ಪ್ರಧಾನಿ ಮೋದಿ

MUST WATCH

udayavani youtube

ನೀರಿನಲ್ಲಿ ಮುಳುಗುತ್ತಿದ್ದ ಜಿಂಕೆ ಮರಿಯನ್ನು ರಕ್ಷಿಸಿದ ನಾಯಿ

udayavani youtube

₹500 ವಿಷಯದಲ್ಲಿ ಜಡೆ ಎಳೆದು ಜಗಳವಾಡಿದ ಆರೋಗ್ಯ ಕಾರ್ಯಕರ್ತೆಯರು

udayavani youtube

ನಾನು ಯಡಿಯೂರಪ್ಪ, ವಿಜಯೇಂದ್ರರ ವಿರೋಧಿ : ಯತ್ನಾಳ್

udayavani youtube

ಪ್ರಕೃತಿಯನ್ನು ಲೂಟಿ ಮಾಡಿದ ಪರಿಣಾಮ ಹೀಗೆಲ್ಲ ಆಗಿದೆ !!

udayavani youtube

ಒಂದೇ ವಾಹನಕ್ಕೆ ಒಂದು ತಿಂಗಳ ಅಂತರದಲ್ಲಿ ಪೊಲೀಸರಿಂದ 16 ನೋಟಿಸ್

ಹೊಸ ಸೇರ್ಪಡೆ

ಕೇವಲ ಒಂದೂವರೆ ರೂಪಾಯಿಗೆ ಒಂದು ಇಡ್ಲಿ!

ಕೇವಲ ಒಂದೂವರೆ ರೂಪಾಯಿಗೆ ಒಂದು ಇಡ್ಲಿ!

ಎಲ್ಲೆಲ್ಲೋ ಸುತ್ತಿ ಮಂಗಳೂರಿಗೆ ಪ್ರಯಾಣಿಕರು ಹೈರಾಣ

ಎಲ್ಲೆಲ್ಲೋ ಸುತ್ತಿ ಮಂಗಳೂರಿಗೆ ಪ್ರಯಾಣಿಕರು ಹೈರಾಣ

ಶ್ರೀ ವಿಶ್ವಪ್ರಿಯತೀರ್ಥರ ನಿವೃತ್ತಿ, ಜನಸಂಪರ್ಕದಿಂದ ದೂರ

ಶ್ರೀ ವಿಶ್ವಪ್ರಿಯತೀರ್ಥರ ನಿವೃತ್ತಿ, ಜನಸಂಪರ್ಕದಿಂದ ದೂರ

 ಮಾ. 10ರ ಬಳಿಕ ಸಂಪುಟ ವಿಸ್ತರಣೆ ವಿಚಾರಣೆ ಪ್ರಕ್ರಿಯೆ?

 ಮಾ. 10ರ ಬಳಿಕ ಸಂಪುಟ ವಿಸ್ತರಣೆ ವಿಚಾರಣೆ ಪ್ರಕ್ರಿಯೆ?

ಬಿಜೆಪಿ-ಶಿವಸೇನೆ ನಡುವೆ ಹಿಂದುತ್ವದ ಜಗಳ

ಬಿಜೆಪಿ-ಶಿವಸೇನೆ ನಡುವೆ ಹಿಂದುತ್ವದ ಜಗಳ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.