ಪ.ಬಂಗಾಲ: ಬಿಜೆಪಿ ಬೆಂಬಲಿಸಿದ ತಾಯಿ, ಮಗಳ ಮೇಲೆ ಟಿಎಂಸಿ ಹಲ್ಲೆ

Team Udayavani, Aug 13, 2018, 6:51 PM IST

ಕೋಲ್ಕತ : ಭಾರತೀಯ ಜನತಾ ಪಕ್ಷವನ್ನು ಬೆಂಬಲಿಸುತ್ತಿದ್ದಾರೆಂಬ ಶಂಕೆಯಲ್ಲಿ ಪಶ್ಚಿಮ ಬಂಗಾಲದ ಅಸನ್‌ಸೋಲ್‌ ಎಂಬಲ್ಲಿ ತಾಯಿ ಮತ್ತು ಮಗಳನ್ನು ಟಿಎಂಸಿ ಬೆಂಬಲಿಗರು ನಿರ್ದಯವಾಗಿ ಹೊಡೆದು ಹಲ್ಲೆ ಮಾಡಿದ್ದಾರೆ. ಮಾತ್ರವಲ್ಲದೆ ಅವರ ಮನೆಯನ್ನು ಕೂಡ ಚೆಲ್ಲಾಡಿದ್ದಾರೆ.

ಅಸನ್‌ಸೋಲ್‌ನ ರೈಲ್‌ಪಾರ್‌ ಪ್ರದೇಶದ ನಿವಾಸಿಯಾಗಿರುವ ಮುತ್ರಿ ಸಿಂಗ್‌ ಮತ್ತು ಆಕೆಯ ಮಗಳು ಟಿಎಂಸಿ ಕಾರ್ಯಕರ್ತರ ದೌರ್ಜನ್ಯಕ್ಕೆ ಗುರಿಯಾದವರು. 

ಟಿಎಂಸಿ ನಾಯಕ ದೀಪಕ್‌ ಗುಪ್ತಾ ಮತ್ತು ಆತನ ಸುಮಾರು 20 ಮಂದಿ ಟಿಎಂಸಿ ಬೆಂಬಲಿಗರು ಈ ದುಷ್ಕೃತ್ಯ ನಡೆಸಿದರು. ‘ನಮ್ಮ ಸಣ್ಣ ಮನೆಯೊಳಗಿನ ಎಲ್ಲ ಸರಕು, ಸಾಮಗ್ರಿಗಳನ್ನು ಅವರು ಒಡೆದು ಹಾಕಿದರು’ ಎಂದು ಮುತ್ರಿ ಸಿಂಗ್‌ ದೂರಿದ್ದಾರೆ.

ಗಾಯಗೊಂಡ ಮುತ್ರಿ ಮತ್ತು ಆಕೆಯ ಮಗಳನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಗಿದೆ. ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. 


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಕರಿಬೇವಿನ ಎಲೆಯಲ್ಲಿರುವ ಗಂಧಕಯುಕ್ತ ಎಣ್ಣೆಯ ಅಂಶವೇ "ಘಮ…' ಎನ್ನುವ ಸುವಾಸನೆಗೆ ಕಾರಣ. ಇದನ್ನು ಅಡುಗೆ ಮನೆಯಲ್ಲಿ ಮಾತ್ರವೇ ಅಲ್ಲದೆ, ಆಯುರ್ವೇದ ಔಷಧಗಳ ತಯಾರಿಕೆಗೂ...

  • "ಬಲೆ ಬೆಳೆ' ಎಂದರೆ ಮುಖ್ಯಬೆಳೆಯನ್ನು ಕೀಟಬಾಧೆಯಿಂದ ರಕ್ಷಿಸುವುದು. ಬಲೆ ಬೆಳೆಯಾಗಿ ಕೆಲವಾರು ಬೆಳೆಗಳನ್ನು ಬೆಳೆಯುತ್ತಾರೆ. ಈ ಎಲ್ಲ ಬೆಳೆಯನ್ನೂ ಒಟ್ಟಿಗೆ ಬೆಳೆಯುವ...

  • ಆ್ಯಂಡ್ರೋಕ್ಲಿಫ್ ಎಂಬ ರೈತನಿದ್ದ. ಅವನು ಶ್ರಮಪಟ್ಟು ದುಡಿದು ಬಂಜರು ಭೂಮಿಯಲ್ಲಿ ಕೃಷಿ ಮಾಡಿದ್ದ. ಹಲವಾರು ಹಣ್ಣುಗಳ ಮರಗಳನ್ನು ಬೆಳೆಸಿ ಕೈತುಂಬ ಫ‌ಸಲು ಕೊಯ್ಯುತ್ತಿದ್ದ....

  • ಆಕಾಶ ವೀಕ್ಷಕರಿಗೆ, ಪ್ರಕೃತಿಪ್ರಿಯರಿಗೆ ಸಂತಸದ ಸುದ್ದಿ. ಇದೇ ಡಿಸೆಂಬರ್‌ 26 ರಂದು ಬಲು ಅಪರೂಪದ ಸೂರ್ಯ ಗ್ರಹಣ! ಇದು ಕಂಕಣ ಸೂರ್ಯಗ್ರಹಣ. ದಕ್ಷಿಣಭಾರತದವರಿಗೆ...

  • ನಗರದ ಕೇಂದ್ರ ಭಾಗವಾದ ಖಾಸಗಿ ಸರ್ವಿಸ್‌ ಬಸ್‌ ನಿಲ್ದಾಣ ಅವ್ಯವಸ್ಥೆಯಿಂದ ಕೂಡಿದೆ. ಬಸ್‌ ನಿಲುಗಡೆಗೆ ಜಾಗವಿಲ್ಲದೆ ಎಲ್ಲೆಂದರಲ್ಲಿ ಬಸ್‌ಗಳನ್ನು ನಿಲುಗಡೆ ಮಾಡಲಾಗುತ್ತದೆ....