
ಮಧ್ಯಪ್ರದೇಶ: 33 ಕೋಟಿ ರೂ.ಮೌಲ್ಯದ ಹೆಲಿಕಾಪ್ಟರ್ ಗುಜರಿಗೆ ಮಾರಾಟ
Team Udayavani, Jun 28, 2022, 7:30 PM IST

ಸಾಂದರ್ಭಿಕ ಚಿತ್ರ.
ಭೋಪಾಲ: ಮಧ್ಯಪ್ರದೇಶದ ಸರ್ಕಾರದ ಬಳಕೆಯಲ್ಲಿದ್ದ ಹೆಲಿಕಾಪ್ಟರ್ ಅನ್ನು 2.57 ಕೋಟಿ ರೂ.ಗಳಿಗೆ ಗುಜರಿಗೆ ಮಾರಾಟ ಮಾಡಿದ ಘಟನೆ ಬೆಳಕಿಗೆ ಬಂದಿದೆ.
ಅದರ ಮೌಲ್ಯ 33 ಕೋಟಿ ರೂ. ಆಗಿತ್ತು ಎಂದು ಮಧ್ಯಪ್ರದೇಶ ನಾಗರಿಕ ವಿಮಾನಯಾನ ಇಲಾಖೆಯ ನಿರ್ದೇಶಕ ಭರತ್ ಯಾದವ್ ತಿಳಿಸಿದ್ದಾರೆ.
ಬಿಇಎಲ್ 430 ವಿಟಿ ಎಂಪಿಎಸ್ (Bel 430 VT MPS) ಮಾದರಿಯ ಕಾಪ್ಟರ್ ಅನ್ನು 1998ರಲ್ಲಿ ಖರೀದಿಸಲಾಗಿತ್ತು. ಹತ್ತು ವರ್ಷಗಳ ಅವಧಿಯಲ್ಲಿ ಅದನ್ನು 7 ಬಾರಿ ಮಾರಾಟಕ್ಕೆ ಯತ್ನಿಸಲಾಗಿತ್ತು.
ಜನಪ್ರಿಯ ಗಾಯಕಿ ಅನುರಾಧಾ ಪೌದ್ವಾಲ್, ಆಗಿನ ಸಿಎಂ ದಿಗ್ವಿಜಯ ಸಿಂಗ್ ಅವರಿಗೆ ಆಪ್ತ ಕಾರ್ಯದರ್ಶಿಯಾಗಿದ್ದ ರಾಜೇಂದ್ರ ಸಿಂಗ್ ರಘುವಂಶಿ 2003ರಲ್ಲಿ ಇದೇ ಕಾಪ್ಟರ್‌ನಲ್ಲಿ ತೆರಳುತ್ತಿದ್ದಾಗ ಅಪಘಾತಕ್ಕೆ ಈಡಾಗಿತ್ತು. ಇದಾದ ಬಳಿಕ ಅದರ ವಿಮೆಯನ್ನೂ ನವೀಕರಿಸಲಾಗಿರಲಿಲ್ಲ.
ಇದನ್ನೂ ಓದಿ:ಉಡುಪಿ: ಪೋಷಕರಲ್ಲಿ ಅಪಹರಣದ ನಾಟಕವಾಡಿ 5 ಲಕ್ಷಕ್ಕೆ ಬೇಡಿಕೆ ಇಟ್ಟ ಮಗ: ಕೊನೆಗೆ ಆಗಿದ್ದೇ ಬೇರೆ
2012ರಲ್ಲಿ ಅದನ್ನು ದುರಸ್ತಿಗೊಳಿಸಿ, ಸರ್ಕಾರಕ್ಕೆ ನಷ್ಟವೂ ಆಗಿತ್ತು. ಜತೆಗೆ ಸೂಕ್ತ ಖರೀದಿದಾರರು ಬಾರದೇ ಇದ್ದುದರಿಂದ ಗುಜರಿಗೆ ಮಾರಾಟ ಮಾಡಲಾಗಿದೆ ಎಂದು ಭರತ್ ಯಾದವ್ ಹೇಳಿದ್ದಾರೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ

Politics: ಶೋಭಾ ಕರಂದ್ಲಾಜೆ, ರಾಜೀವ್ ಚಂದ್ರಶೇಖರ್,ಅರ್ಜುನ್ ಮುಂಡಾಗೆ ಹೆಚ್ಚುವರಿ ಖಾತೆ

ಬೆಳಗಾವಿ ಕಲಾಪದಲ್ಲಿ BJP ಗಲಿಬಿಲಿ!- ಅಶೋಕ್, ವಿಜಯೇಂದ್ರ ನಡುವೆ ಧರಣಿ, ಸಭಾತ್ಯಾಗ ಗೊಂದಲ

China: ದೇಶಕ್ಕೆ ಚೀನ ಸೋಂಕು?- ದಿಲ್ಲಿ ಏಮ್ಸ್‌ನಲ್ಲಿ ಏಳು ಮಾದರಿ ಪಾಸಿಟಿವ್

ಕೆಂಪಣ್ಣ ಹೊಸ ಕಮಿಷನ್ ಬಾಂಬ್ -ಆಗ ರಾಜಕಾರಣಿಗಳು; ಈಗ ಅಧಿಕಾರಿಗಳ ದರಬಾರು ನಡೆಯುತ್ತಿದೆ

Mangaluru: ಅತಿಥಿ ಉಪನ್ಯಾಸಕರ ಖಾಯಮಾತಿ ಆಗ್ರಹಿಸಿ ಪ್ರತಿಭಟನೆ