
ಟ್ವೀಟಿಗರ ಮನಸೂರೆಗೊಂಡ “ಪುಟಾಣಿ ಕೇಜ್ರಿ’!
Team Udayavani, Feb 11, 2020, 9:14 PM IST

ಈ ಬಾರಿಯ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಆಡಳಿತಾರೂಢ ಆಮ್ ಆದ್ಮಿ ಪಾರ್ಟಿ ಅಧಿಕಾರಕ್ಕೆ ಬರುತ್ತಲೇ ಎಲ್ಲೆಡೆ ಅವರ ಬೆಂಬಲಿಗರು, ಅಭಿಮಾನಿಗಳು ಬೀದಿಗಿಳಿದು ಸಂಭ್ರಮಾಚರಣೆಯಲ್ಲಿ ಮುಳುಗೇಳತೊಡಗಿದರು. ಆ ದೊಡ್ಡ ದೊಡ್ಡ ಗುಂಪುಗಳಲ್ಲಿ ಎದ್ದ ಸಾವಿರಾರು ಅಭಿಮಾನಿಗಳ ನಡುವೆ ಕೇಜ್ರಿವಾಲರಂತೆ ಮಫ್ಲರ್, ಕನ್ನಡಕ ತೊಟ್ಟು, ಪುಟ್ಟದಾಗಿ ಮೀಸೆ ಬಳಿದುಕೊಂಡು, ಆಮ್ ಆದ್ಮಿ ಚಿಹ್ನೆಯುಳ್ಳ ಟೋಪಿ ಧರಿಸಿ ಕಂಗೊಳಿಸಿದ ಪುಟಾಣಿಯೊಬ್ಬ ಮಂಗಳವಾರ ಟ್ವಿಟರ್‌ನಲ್ಲಿ ಹೊಸ ಸೆನ್ಸೇಷನ್ ಆಗಿ ಹೊರಹೊಮ್ಮಿದ್ದಾನೆ.
ಆಮ್ ಆದ್ಮಿ ಪಾರ್ಟಿಯೇ ಖುದ್ದಾಗಿ ತನ್ನ ಟ್ವಿಟರ್ ಹ್ಯಾಂಡಲ್ ಮೂಲಕ ಈ ಬಾಲಕನ ಫೋಟೋವನ್ನು ಹಂಚಿಕೊಂಡಿದೆ. ಹೀಗೆ, ಫೋಟೋ ಟ್ವೀಟ್ ಆದ ಕೆಲವೇ ನಿಮಿಷಗಳಲ್ಲಿ ಅದಕ್ಕೆ 16,000 ಲೈಕ್ಸ್‌ಗಳು ಹಾಗೂ 2,300 ರೀಟ್ವೀಟ್‌ಗಳನ್ನು ಕಂಡಿದೆ. ಹಲವಾರು ಟ್ವೀಟರಿಗರು ಈ ಪುಟಾಣಿಯ ವೇಷಭೂಷಣವನ್ನು ಕೊಂಡಾಡಿದ್ದಾರೆ.
Mufflerman ? pic.twitter.com/OX6e8o3zay
— AAP (@AamAadmiParty) February 11, 2020
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Panaji: ದೆಹಲಿ ಮಾದರಿಯಲ್ಲಿ ಗೋವಾದ ಸಮಸ್ಯೆ ನಿಭಾಯಿಸಲು ಸಾಧ್ಯವಿಲ್ಲ: ಕುತಿನ್ಹೊ

Heavy Rain: ಗೋವಾದಲ್ಲಿ ಭಾರೀ ಮಳೆ… ಧರೆಗುರುಳಿದ ಮರ, ಭೂಕುಸಿತ, ಅಪಾಯದಂಚಿನಲ್ಲಿ ಮನೆ

Election: ಲೋಕಸಭಾ ಚುನಾವಣೆಗೆ ಮತದಾರರನ್ನು ಸೆಳೆಯಲು ನೂತನ ತಂತ್ರ ರೂಪಿಸಿದ ಗಡ್ಕರಿ

Panaji: ರಾಜ್ಯದಲ್ಲಿ ಭಾರೀ ಮಳೆ ಸಾಧ್ಯತೆ; ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚನೆ

Smile Pinki: ಆಸ್ಕರ್ ಪ್ರಶಸ್ತಿ ವಿಜೇತ ‘ಸ್ಮೈಲ್ ಪಿಂಕಿ’ ಕಲಾವಿದೆ ಮನೆ ಕೆಡವಲು ನೋಟಿಸ್