ಎಟಿಎಂನಲ್ಲಿ ಯುವತಿಗೆ ಲೈಂಗಿಕ ಕಿರುಕುಳ; ವಿಡಿಯೋ ಆಧಾರದಲ್ಲಿ ವ್ಯಕ್ತಿ ಅರೆಸ್ಟ್‌

Team Udayavani, May 13, 2019, 5:40 PM IST

ಮುಂಬಯಿ : ಇಲ್ಲಿನ ಮುಳುಂದ್‌ ಎಟಿಎಂ ನಲ್ಲಿ 23ರ ಹರೆಯದ ಯುವತಿಗೆ ಲೈಂಗಿಕ ಕಿರುಕುಳ ಕೊಟ್ಟ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಆಟೋ ರಿಕ್ಷಾ ಚಾಲಕನಿಗೆ ಹಣ ಪಾವತಿಸುವುದಕ್ಕಾಗಿ ಯುವತಿಯು ಹಣ ಡ್ರಾ ಮಾಡಲು ಎಟಿಎಂ ಗೆ ಹೋಗಿದ್ದಳು. ಅಲ್ಲಿ ತಾಂತ್ರಿಕ ಸಮಸ್ಯೆ ಎದುರಾಯಿತು. ಆಗ ಎಟಿಎಂ ಗೆ ಒಬ್ಬ ವ್ಯಕ್ತಿ ಪ್ರವೇಶಿಸಿದ. ಯುವತಿಗೆ ನೆರವಾಗುವುದಾಗಿ ಹೇಳಿದ. ಆದರೆ ಯುವತಿ ಅದನ್ನು ತಿರಸ್ಕರಿಸಿದಳು. ಆದರೂ ಆ ವ್ಯಕ್ತಿ ಬಿಡದೆ ಅಕೆಯೊಂದಿಗೆ ಲೈಂಗಿಕ ದುರ್ವರ್ತನೆ ತೋರಿದ.

ಈ ಇಡಿಯ ಪ್ರಹಸವನ್ನು ಯುವತಿ ತನ್ನ ಸ್ಮಾರ್ಟ್‌ ಫೋನಿನಲ್ಲಿ ವಿಡಿಯೋ ಮಾಡಿಕೊಂಡಿದ್ದಳು. ಇದನ್ನು ತಿಳಿಯುತ್ತಲೇ ಆರೋಪಿ ಅಲ್ಲಿಂದ ಪರಾರಿಯಾದ.

ಒಡನೆಯೇ ಯುವತಿ ಪೊಲೀಸರಿಗೆ ದೂರು ನೀಡಿ ತನ್ನಲ್ಲಿನ ವಿಡಿಯೋ ಸಾಕ್ಷ್ಯ ನೀಡಿದಳು. ಪೊಲೀಸರು ಕೂಡಲೇ ಆರೋಪಿಯನ್ನು ಪತ್ತೆ ಹಚ್ಚಿ ಸೆರೆ ಹಿಡಿದರು. ಮೇಲಾಗಿ ಯುವತಿಯು ತನ್ನ ಮೇಲಾದ ಲೈಂಗಿಕ ಕಿರುಕುಳದ ವಿಡಿಯೋವನ್ನು ಟ್ವಿಟರ್‌ಗೆ ಅಪ್‌ಲೋಡ್‌ ಮಾಡಿದ್ದಳು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ