16.10 ಕೋ. ರೂ. ಮೌಲ್ಯದ ಮಾದಕ ವಸ್ತು ಸಹಿತ ಮೂವರ ಬಂಧನ
Team Udayavani, Jan 13, 2022, 10:30 PM IST
ಮುಂಬಯಿ: ಸುಮಾರು 16.10 ಕೋಟಿ ರೂ. ಮೌಲ್ಯದ ಮೆಟಾಕ್ವಾಲೋನ್ ಹೊಂದಿದ್ದ ಆರೋಪದ ಮೇಲೆ ಮೂವರನ್ನು ಇಲ್ಲಿನ ಆಂಟೋಪ್ ಹಿಲ್ ಪ್ರದೇಶದಲ್ಲಿ ಬಂಧಿಸಲಾಗಿದೆ.
ಸುಳಿವಿನ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ಮುಂಬಯಿ ಪೊಲೀಸರ ಕ್ರೈಂ ಬ್ರಾಂಚ್ ಘಟಕ-1ರ ತಂಡ ಬುಧವಾರ ಸಂಜೆ ಆಂಟೋಪ್ ಹಿಲ್‌ನ ಎಸ್‌ಎಂಡಿ ರಸ್ತೆಯಲ್ಲಿ ಮೂವರು ಆರೋಪಿಗಳನ್ನು ತಡೆದು ವಿಚಾರಣೆ ನಡೆಸಿತು.
ಈ ವೇಳೆ ಅವರ ಬಳಿಯಿದ್ದ ಬ್ಯಾಗ್‌ಗಳನ್ನು ಪರಿಶೀಲಿಸಿದಾಗ ತಂಡಕ್ಕೆ 16.100 ಕೆ. ಜಿ. ಮೆಟಾಕ್ವಾಲೋನ್ ಪತ್ತೆಯಾಗಿದ್ದು, ಇದರ ಮೌಲ್ಯ ಸುಮಾರು 16.10 ಕೋಟಿ ರೂ.ಗಳಷ್ಟಿದೆ. ಈ ಮೂವರ ವಿರುದ್ಧ ದಾಖಲಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.