
Mumbai: ಭೀಕರ ಹತ್ಯೆ; ದೇಹದ ಭಾಗವನ್ನು ತುಂಡು ಮಾಡಿ ಕುಕ್ಕರ್‌ನಲ್ಲಿ ಬೇಯಿಸಿದ ಪ್ರಿಯಕರ
Team Udayavani, Jun 8, 2023, 9:38 AM IST

ಮುಂಬಯಿ: ಕಳೆದ ವರ್ಷ ದೆಹಲಿಯಲ್ಲಿ ಶ್ರದ್ಧಾ ವಾಕರ್ ಕೃತ್ಯ ನಡೆದ ಬಳಿಕ ದೇಶದಲ್ಲಿ ಅಂಥದ್ದೇ ಭೀಕರ ಘಟನೆಗಳು ಹೆಚ್ಚಾಗಿ ನಡೆಯುತ್ತಿದೆ. ಈಗ ಮತ್ತೊಂದು ಭೀಭತ್ಸ ಘಟನೆ ಮುಂಬಯಿಯಲ್ಲಿ ನಡೆದಿದೆ.
ವ್ಯಕ್ತಿಯೊಬ್ಬ ತನ್ನ ಲಿವ್-ಇನ್ ಸಂಗಾತಿಯನ್ನು ಹತ್ಯೆಗೈದು, ದೇಹದ ಭಾಗವನ್ನು ತುಂಡು ಮಾಡಿ ಅದನ್ನು ಕುಕ್ಕರ್ ನಲ್ಲಿ ಬೇಯಿಸಿರುವ ಘಟನೆ ಮುಂಬಯಿಯಲ್ಲಿ ನಡೆದಿದೆ.
ಮನೋಜ್ ಸಹಾನಿ (36) ಕಳೆದ ಮೂರು ವರ್ಷಗಳಿಂದ ಗೀತಾ ನಗರ 7ನೇ ಹಂತದ ಗೀತಾ ಆಕಾಶ್ ದೀಪ್ ಕಟ್ಟಡದಲ್ಲಿ 704 ಫ್ಲಾಟ್‌ನಲ್ಲಿ ಸರಸ್ವತಿ ವೈದ್ಯ (36) ಎಂಬುವವರೊಂದಿಗೆ ವಾಸವಾಗಿದ್ದರು. ಮನೋಜ್ ಬೋರಿವಾಲಿಯಲ್ಲಿ ಸಣ್ಣ ಅಂಗಡಿ ನಡೆಸುತ್ತಿದ್ದಾರೆ.
ಬುಧವಾರ ಸಂಜೆ (ಜೂ.7 ರಂದು) ಫ್ಲಾಟ್ ನ ಇತರೆ ಸದಸ್ಯರು ಮನೋಜ್ ಅವರ ನಿವಾಸದಿಂದ ಕೆಟ್ಟ ವಾಸನೆ ಬರುತ್ತಿರುವುದರಿಂದ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಬಂದು ನೋಡಿದಾಗ 3-4 ದಿನಗಳ ಹಿಂದೆ ಕೊಲೆಯಾಗಿರುವ ಮಹಿಳೆಯೊಬ್ಬರ ದೇಹದ ಭಾಗಗಳು ಕುಕ್ಕರ್ ನಲ್ಲಿ ಬೇಯುತ್ತಿರುವುದನ್ನು ಪೊಲೀಸರು ನೋಡಿದ್ದಾರೆ.
“ಮನೋಜ್ ಸಹಾನಿ ಮತ್ತು ಸರಸ್ವತಿ ವೈದ್ಯ ಅವರು ಲಿವ್-ಇನ್ ರಿಲೇಶನ್‌ಶಿಪ್‌ನಲ್ಲಿದ್ದರು. ಕೆಲವು ವಿಷಯಕ್ಕೆ ಇಬ್ಬರ ನಡುವೆ ಜಗಳವಾಗಿದೆ. ಇದೇ ವಿಚಾರಕ್ಕೆ ಈ ಕೃತ್ಯ ನಡೆದಿರಬಹುದು. ಆಕೆಯ ದೇಹವನ್ನು ಮರ ಕಟ್ ಮಾಡುವ ಮಿಷನ್ ನಿಂದ ತುಂಡು ಮಾಡಲಾಗಿದೆ. ನಾವು ಮನೆಗೆ ತಲುಪಿ ಬಾಗಿಲು ತೆರೆದಾಗ, ಇದು ಕೊಲೆಯ ಪ್ರಕರಣ ಎಂದು ನಮಗೆ ಗೊತ್ತಾಗಿದೆ. ಶಂಕಿತ ಆರೋಪಿ ಸಾಕ್ಷ್ಯವನ್ನು ಮರೆಮಾಡಲು ಪ್ರಯತ್ನಿಸುವ ಸಲುವಾಗಿ ಈ ರೀತಿ ದೇಹದ ಭಾಗವನ್ನು ಕುಕ್ಕರ್ ನಲ್ಲಿ ಬೇಯಿಸಿರಬಹುದು” ಎಂದು ಪೊಲೀಸ್ ಉಪ ಆಯುಕ್ತ ಜಯಂತ್ ಬಜ್ಬಲೆ ಅವರು ಹೇಳಿದ್ದಾರೆ.
ಈ ಸಂಬಂಧ ಕೊಲೆಯ ಹಿಂದಿನ ಉದ್ದೇಶವನ್ನು ತಿಳಿಯಲು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇಬ್ಬರು ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Uttar Pradesh: ಮಗಳ ಮದುವೆಗೆ ಕೂಡಿಟ್ಟ 18 ಲಕ್ಷ ರೂ. ಗೆದ್ದಲು ಪಾಲು!

Today ಆರ್ಟ್ ಆಫ್ ಲಿವಿಂಗ್ “ಸಂಸ್ಕೃತಿ ಉತ್ಸವ”; ಸಮಾರಂಭಕ್ಕೆ ವಿಶ್ವದ ದೊಡ್ಡಣ್ಣನ ಆತಿಥ್ಯ

Road ವರ್ಷಾಂತ್ಯಕ್ಕೆ ಹೆದ್ದಾರಿಗಳು ಗುಂಡಿ ಮುಕ್ತ: ಸಚಿವ ನಿತಿನ್ ಗಡ್ಕರಿ

Cable TV service ಎಂಎಸ್‌ಒಗಳಿಗೆ 10 ವರ್ಷ ಲೈಸನ್ಸ್: ಕೇಂದ್ರ ಸರಕಾರ

US aims ಭಾರತೀಯರಿಗೆ 10 ಲಕ್ಷಕ್ಕೂ ಅಧಿಕ ಅಮೆರಿಕದ ವಲಸೆರಹಿತ ವೀಸಾ ವಿತರಣೆ
MUST WATCH
ಹೊಸ ಸೇರ್ಪಡೆ

Karnataka Bandh; ‘ನೀರು ನಿಲ್ಲಿಸದಿದ್ದರೆ ಡ್ಯಾಂ ಒಡೆಯುತ್ತೇವೆ’; ರಾಮನಗರದಲ್ಲಿ ಪ್ರತಿಭಟನೆ

Karnataka Bandh; ಚಿಕ್ಕಮಗಳೂರಿನಲ್ಲಿ ವ್ಯಾಪಕ ಬೆಂಬಲ; ಪ್ರತಿಕೃತಿ ದಹಿಸಿ ಪ್ರತಿಭಟನೆ

Canada; ಭಾರತದೊಂದಿಗೆ ಸ್ನೇಹಕ್ಕೆ ಸದಾ ಬದ್ಧ: ಬಿಕ್ಕಟ್ಟಿನ ನಡುವೆ ಟ್ರುಡೊ

Baana Daariyalli movie review; ಗಣೇಶ್- ಗುಬ್ಬಿ ಚಿತ್ರ ಹೇಗಿದೆ?

Asian Games: ವಿಶ್ವದಾಖಲೆಯೊಂದಿಗೆ ಮತ್ತೊಂದು ಚಿನ್ನಕ್ಕೆ ಗುರಿಯಿಟ್ಟ ಭಾರತದ ಶೂಟಿಂಗ್ ತಂಡ