ಮುಂಬೈ: ಈರುಳ್ಳಿ ಸಗಟು ಬೆಲೆ ಕೆಜಿಗೆ 7- 8 ರೂ.ಗೆ ಇಳಿಕೆ
Team Udayavani, May 7, 2022, 7:00 AM IST
ನವಿಮುಂಬಯಿ: ಯಥೇತ್ಛ ಪೂರೈಕೆ ಹಾಗೂ ಇತರ ಕೆಲವು ಕಾರಣಗಳಿಂದಾಗಿ ಈರುಳ್ಳಿ ಬೇಡಿಕೆ ಕುಸಿದಿದ್ದು, ವಾಶಿಯಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ (ಎಪಿಎಂಸಿ) ಸರಾಸರಿ ಖರೀದಿ ಬೆಲೆ ಕೆ.ಜಿ.ಗೆ 8 ರೂ.ಗೆ ಇಳಿದಿದೆ.
ವ್ಯಾಪಾರಿಗಳ ಪ್ರಕಾರ, ಬೇಸಗೆ ರಜೆಯಿಂದಾಗಿ ಅನೇಕ ಕುಟುಂಬಗಳು ಊರಿಗೆ ತೆರಳಿರುವುದು ಕೂಡ ಬೇಡಿಕೆ ಇಳಿಕೆಗೆ ಮತ್ತೊಂದು ಕಾರಣವಾಗಿದೆ.
ಕಳೆದ ವರ್ಷ ಮೇ-ಜೂನ್ ಅವಧಿಯಲ್ಲಿ ಈರುಳ್ಳಿ ಸಗಟು ದರ 10 ರೂ.ಗಿಂತ ಕಡಿಮೆಯಾಗಿತ್ತು. ಈ ವರ್ಷ ಈರುಳ್ಳಿ ಖರೀದಿ ದರ ಕನಿಷ್ಠ 7-8 ರೂ. ಆಗಿದೆ ಎಂದು ವ್ಯಾಪಾರಿಯೊಬ್ಬರು ತಿಳಿಸಿದ್ದಾರೆ.
ಫೆಬ್ರವರಿಯಲ್ಲಿ ಚಿಲ್ಲರೆ ಮಾರುಕಟ್ಟೆಯಲ್ಲಿ ಈರುಳ್ಳಿ ದರ ಕೆ.ಜಿ.ಗೆ 80 ರೂ.ಗೆ ತಲುಪಿತ್ತು. ಕಳೆದ ಸೆಪ್ಟಂಬರ್ನಲ್ಲಿ ಕೆ.ಜಿ.ಗೆ 90 ರೂ. ತಲುಪಿತ್ತು. ಅತಿವೃಷ್ಟಿಯಿಂದಾಗಿ ಬೆಳೆಗಳು ಹಾನಿಗೀಡಾ ಗಿದ್ದು, ಡಿಸೆಂಬರ್ನಲ್ಲಿ ಪೂರೈಕೆ ಕಡಿಮೆಯಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
LS Election; ದಿಂಗಾಲೇಶ್ವರ ಶ್ರೀ ಟೀಕೆ ನನಗೆ ಆಶೀರ್ವಾದ ಇದ್ದಂತೆ: ಪ್ರಹ್ಲಾದ್ ಜೋಶಿ
Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ
Kannada Cinema; ಸ್ನೇಹಿತರ ಸುತ್ತ ‘ಪಾರ್ಟ್ನರ್’: ಟ್ರೇಲರ್, ಆಡಿಯೋದಲ್ಲಿ ಹೊಸಬರ ಚಿತ್ರ
Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್
ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು