ಲಾಕ್ಡೌನ್ನಿಂದ ಬರ್ತ್ ಡೇ ಸಂಭ್ರಮಾಚರಣೆಗೆ ಬ್ರೇಕ್ :ಯುವತಿ ಮನೆಗೆ ಕೇಕ್ ಕಳುಹಿಸಿದ ಪೊಲೀಸ್
Team Udayavani, Apr 24, 2021, 4:11 PM IST
ಮುಂಬೈ: ಕಾಳ್ಗಿಚ್ಚಿನಂತೆ ವ್ಯಾಪಿಸುತ್ತಿರುವ ಕೋವಿಡ್ ಕಾರಣದಿಂದ ಬರ್ತ್ ಡೇ ಪಾರ್ಟಿ ಮೊಟಕುಗೊಳಿಸಿದ ಯುವತಿಯೋರ್ವಳಿಗೆ ಮುಂಬೈ ಪೊಲೀಸರು ಕೇಕ್ ಕಳುಹಿಸಿಕೊಟ್ಟು ವಿಶ್ ಮಾಡಿದ್ದಾರೆ.
ಏಪ್ರಿಲ್ 22 ರಂದು ವಾಣಿಜ್ಯ ನಗರಿ ಮುಂಬೈ ನಿವಾಸಿ ಸಮಿತಾ ಪಾಟೀಲ್ ಅವರದು ಹುಟ್ಟುಹಬ್ಬವಿತ್ತು. ರಾಜ್ಯದಲ್ಲಿ ಲಾಕ್ ಡೌನ್ ಘೋಷಣೆಯಾಗಿದ್ದರಿಂದ ಹಾಗೂ ಕೋವಿಡ್ ಸೋಂಕು ವೇಗವಾಗಿ ಹರಡುತ್ತಿರುವುದರಿಂದ ತನ್ನ ಜನ್ಮದಿನದ ಸಂಭ್ರಮಕ್ಕೆ ಸಮಿತಾ ಬ್ರೇಕ್ ಹಾಕಿದ್ದಾರೆ. ಪಾರ್ಟಿ ಕೇಳಿದ ಸ್ನೇಹಿತರಿಗೆಲ್ಲ ಬುದ್ಧವಾದ ಹೇಳಿದ್ದಾರೆ. ಕೋವಿಡ್ ಸೋಂಕು ರಣಕೇಕೆ ಹಾಕುತ್ತಿರುವ ಇಂತಹ ಪರಿಸ್ಥಿತಿಯಲ್ಲಿ ಸಂಭ್ರಮಾಚರಣೆ ಒಳ್ಳೆಯದಲ್ಲ. ಎಲ್ಲರೂ ಮನೆಯಲ್ಲಿಯೇ ಸುರಕ್ಷಿತವಾಗಿರಿ ಎಂದು ಆಕೆ ಪಾರ್ಟಿ ಕೇಳಿದ ಸ್ನೇಹಿತರಿಗೆಲ್ಲ ಸಲಹೆ ನೀಡಿದ್ದಾರೆ.
ಕೋವಿಡ್ ಸಮಯದಲ್ಲಿ ಸಮಿತಾ ತೋರಿದ ಸಾಮಾಜಿಕ ಜವಾಬ್ದಾರಿಯ ವಾಟ್ಸಾಪ್ ಚಾಟ್ನ ಸ್ಕ್ರೀನ್ ಶಾಟ್ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿವೆ. ಇವು ಮುಂಬೈ ಪೊಲೀಸರ ಗಮನಕ್ಕೂ ಬಂದಿವೆ. ಸಮಿತಾ ಅವರ ಸಾಮಾಜಿಕ ಕಳಕಳಿಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಪೊಲೀಸರು, ಆಕೆಯ ಮನೆಗೆ ಕೇಕ್ ಪಾರ್ಸೆಲ್ ಕಳುಹಿಸಿಕೊಟ್ಟಿದ್ದಾರೆ. ಹಾಗೂ ಅದರ ಮೇಲೆ ‘ಜವಾಬ್ದಾರಿಯುತ ನಾಗರಿಕ’ ಎಂದು ಬರೆಯಲಾಗಿದೆ.
ಇನ್ನು ಮಹಾರಾಷ್ಟ್ರದಲ್ಲಿ ಮಹಾಮಾರಿ ಕೋವಿಡ್ ಸೋಂಕು ಕೈ ಮೀರಿ ಹಬ್ಬುತ್ತಿದೆ. ಈ ವೈರಸ್ಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಅಲ್ಲಿಯ ಸರ್ಕಾರ ವಾರಾಂತ್ಯದ ಲಾಕ್ ಡೌನ್ ಹಾಗೂ ರಾತ್ರಿ ಕರ್ಫ್ಯೂ ವಿಧಿಸಿದೆ. ನೈಟ್ ಕ್ಲಬ್, ಪಾರ್ಟಿಗಳ ಮೇಲೆ ನಿಷೇಧ ಹೇರಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ
Election Commission: ಮೋದಿ, ರಾಹುಲ್ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್
Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್ ಭೇಟಿ; ಆಯೋಗಕ್ಕೆ “ಕೈ’ ದೂರು
Odisha: ಎನ್ಕೌಂಟರ್; ಇಬ್ಬರು ನಕ್ಸಲರ ಹತ್ಯೆ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..