ಷೇರುಪೇಟೆಗೆ ದಾಖಲೆಯ ಸುಗ್ಗಿ

Team Udayavani, Jan 15, 2021, 6:40 AM IST

ಷೇರುಪೇಟೆಗೆ ದಾಖಲೆಯ ಸುಗ್ಗಿ

ಮುಂಬಯಿ: ಒಂದು ದಿನದ ವಿರಾಮದ ಬಳಿಕ ಮತ್ತೆ ಮುಂಬಯಿ ಷೇರುಪೇಟೆಯಲ್ಲಿ ಏರಿಕೆಯ “ಸುಗ್ಗಿ’ ಶುರುವಾಗಿದೆ. ಇನ್ಫೋಸಿಸ್‌, ವಿಪ್ರೋದಂತಹ ಕಂಪೆನಿಗಳ ತ್ತೈಮಾಸಿಕ ಆದಾಯದ ಫ‌ಲಿತಾಂಶವು ಹೂಡಿಕೆದಾರರಲ್ಲಿ ಭರವಸೆ ಮೂಡಿಸಿದ್ದು, ಗುರುವಾರ ಷೇರುಗಳ ಖರೀದಿ ತುಸು ಜೋರಾಗಿಯೇ ನಡೆಯಿತು.

ಪರಿಣಾಮ ಮುಂಬಯಿ ಷೇರುಪೇಟೆ ಸಂವೇದಿ ಸೂಚ್ಯಂಕ 91.84 ಅಂಕಗಳ ಏರಿಕೆ ಕಂಡು, 49,584.16ರಲ್ಲಿ ವಹಿವಾಟು ಅಂತ್ಯಗೊಳಿಸುವ ಮೂಲಕ ಹೊಸ ಸಾರ್ವಕಾಲಿಕ ದಾಖಲೆ ಬರೆಯಿತು. ನಿಫ್ಟಿ ಕೂಡ 30.75 ಅಂಕಗಳ ಏರಿಕೆ ದಾಖಲಿಸಿ, ದಿನಾಂತ್ಯಕ್ಕೆ 14,595.60ರಲ್ಲಿ ಅಂತ್ಯಗೊಂಡಿತು.

ಹೂಡಿಕೆದಾರರು ಟಿಸಿಎಸ್‌ ಷೇರುಗಳ ಖರೀದಿಯಲ್ಲಿ ತೊಡಗಿದ ಕಾರಣ, ಕಂಪೆನಿಯ ಷೇರು ಮೌಲ್ಯ ಶೇ.2.89ರಷ್ಟು ಏರಿಕೆಯಾಯಿತು. ಇದರೊಂದಿಗೆ ಇಂಡಸ್‌ಇಂಡ್‌ ಬ್ಯಾಂಕ್‌, ಎಲ್‌ಆ್ಯಂಡ್‌ ಟಿ, ಐಟಿಸಿ, ರಿಲಯನ್ಸ್‌ ಇಂಡಸ್ಟ್ರೀಸ್‌, ಎಚ್‌ಯುಎಲ್‌ ಮತ್ತು ಸನ್‌ ಫಾರ್ಮಾ ಕೂಡ ಲಾಭ ಗಳಿಸಿದವು. ಎಚ್‌ಸಿಎಲ್‌ ಟೆಕ್‌, ಆಕ್ಸಿಸ್‌ ಬ್ಯಾಂಕ್‌, ಏಷ್ಯನ್‌ ಪೈಂಟ್ಸ್‌, ಅಲ್ಟ್ರಾ ಟೆಕ್‌ ಸಿಮೆಂಟ್‌, ಇನ್ಫೋಸಿಸ್‌, ಟೆಕ್‌ ಮಹೀಂದ್ರಾ ಷೇರುಗಳು ನಷ್ಟ ಎದುರಿಸಿದವು.

ಚಿನ್ನದ ಬೆಲ 369ರೂ. ಇಳಿಕೆ: ದಿಲ್ಲಿ ಚಿನಿವಾರ ಪೇಟೆಯಲ್ಲಿ ಚಿನ್ನದ ಬೆಲೆ 369 ರೂ. ಇಳಿಕೆಯಾಗಿ, 10 ಗ್ರಾಂಗೆ 48,388 ರೂ. ಆಗಿದೆ. ಬೆಳ್ಳಿ ಬೆಲೆ ಕೂಡ 390 ರೂ. ಕಡಿಮೆಯಾಗಿ, ಕೆಜಿಗೆ 64,534 ರೂ. ಆಗಿದೆ. ಇದೇ ವೇಳೆ, ಸತತ 3ನೇ ದಿನವೂ ಡಾಲರ್‌ ಎದುರು ರೂಪಾಯಿ ಮೌಲ್ಯ ಏರಿಕೆಯಾಗಿದೆ. ಗುರುವಾರ 11 ಪೈಸೆ ಹೆಚ್ಚಳವಾಗಿ, 74.04ರೂ. ಆಗಿದೆ.

ದೇಶದ ಮಧ್ಯಮಾವಧಿ ಪ್ರಗತಿ ದರ ಇಳಿಕೆ? :

ದೇಶದ ಆರ್ಥಿಕತೆಯ ಮೇಲೆ ಕೊರೊನಾದ ದೀರ್ಘ‌ಕಾಲಿಕ ಪರಿಣಾಮ ಮುಂದುವರಿಯಲಿದ್ದು, ಎಪ್ರಿಲ್‌ 2021ರಿಂದ ಆರಂಭವಾಗುವ ವಿತ್ತ ವರ್ಷದಲ್ಲಿ ಆರ್ಥಿಕ ಪ್ರಗತಿಯು ಚೇತರಿಕೆ ಕಾಣಲಿದೆಯಾದರೂ ಅನಂತರದ ದಿನಗಳಲ್ಲಿ ಮತ್ತೆ ಕುಸಿತದ ಆಘಾತ ಎದುರಿಸಲಿದೆ ಎಂದು ಫಿಚ್‌ ರೇಟಿಂಗ್ಸ್‌ ಸಂಸ್ಥೆ ಭವಿಷ್ಯ ನುಡಿದಿದೆ. ಎಪ್ರಿಲ್‌ 2022ರಿಂದ ಮಾರ್ಚ್‌ 2026ರ ವರೆಗೆ ದೇಶದ ಆರ್ಥಿಕ ಪ್ರಗತಿ ಶೇ.6.5ರಷ್ಟಿರಲಿದೆ ಎಂದೂ ಹೇಳಿದೆ.

ಸಗಟು ಹಣದುಬ್ಬರ ಇಳಿಕೆ :

ಈರುಳ್ಳಿ, ಆಲೂಗಡ್ಡೆ ಮತ್ತಿತರ ವಸ್ತುಗಳ ಬೆಲೆ ಕುಸಿತಗೊಂಡ ಪರಿಣಾಮ 2020ರ ಡಿಸೆಂಬರ್‌ನಲ್ಲಿ ಸಗಟು ದರ ಆಧರಿತ ಹಣದುಬ್ಬರ ಶೇ.1.22ಕ್ಕೆ ಇಳಿಕೆಯಾಗಿದೆ ಎಂದು ಸರಕಾರ ಹೇಳಿದೆ. ನವೆಂಬರ್‌ನಲ್ಲಿ ಇದು ಶೇ.1.55 ಆಗಿತ್ತು. 2019ರ ಡಿಸೆಂಬರ್‌ನಲ್ಲಿ ಹಣದುಬ್ಬರ ಶೇ.2.76ರಷ್ಟಿತ್ತು.

ಟಾಪ್ ನ್ಯೂಸ್

ಸಾಗರದಡಿ ಸಕ್ಕರೆಯ ನಿಕ್ಷೇಪ ಪತ್ತೆ! ಸಮುದ್ರದ ತಳದಲ್ಲಿ “ಸುಕ್ರೋಸ್‌’ ಮಾದರಿಯಲ್ಲಿ ಸಂಗ್ರಹ

ಸಾಗರದಡಿ ಸಕ್ಕರೆಯ ನಿಕ್ಷೇಪ ಪತ್ತೆ! ಸಮುದ್ರದ ತಳದಲ್ಲಿ “ಸುಕ್ರೋಸ್‌’ ಮಾದರಿಯಲ್ಲಿ ಸಂಗ್ರಹ

ಗೆಲುವೆಂಬ ಮರೀಚಿಕೆಯ ಬೆನ್ನು ಹತ್ತಿ….

ಗೆಲುವೆಂಬ ಮರೀಚಿಕೆಯ ಬೆನ್ನು ಹತ್ತಿ….

ಮುಗಿಯದ ಪಠ್ಯಪುಸ್ತಕ ಪರಿಷ್ಕರಣೆ ವಿವಾದ

ಮುಗಿಯದ ಪಠ್ಯಪುಸ್ತಕ ಪರಿಷ್ಕರಣೆ ವಿವಾದ

ರಾಜ್ಯದಲ್ಲಿ50 ಸಾವಿರ ಕೋಟಿ ರೂ. ಹೂಡಿಕೆ; ಇಂಧನ ಕ್ಷೇತ್ರದಲ್ಲಿ ಭರ್ಜರಿ ಒಪ್ಪಂದ

ರಾಜ್ಯದಲ್ಲಿ50 ಸಾವಿರ ಕೋಟಿ ರೂ. ಹೂಡಿಕೆ; ಇಂಧನ ಕ್ಷೇತ್ರದಲ್ಲಿ ಭರ್ಜರಿ ಒಪ್ಪಂದ

ವಿಧಾನ ಪರಿಷತ್‌ ಚುನಾವಣೆ: 3 ಪಕ್ಷಗಳಿಂದ 7 ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ

ವಿಧಾನ ಪರಿಷತ್‌ ಚುನಾವಣೆ: 3 ಪಕ್ಷಗಳಿಂದ 7 ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ

ಆತ್ಮತೃಪ್ತಿ, ಹೃದಯ ಶ್ರೀಮಂತಿಕೆಯೇ ಶ್ರೇಷ್ಠ

ಆತ್ಮತೃಪ್ತಿ, ಹೃದಯ ಶ್ರೀಮಂತಿಕೆಯೇ ಶ್ರೇಷ್ಠ

ನ್ಯಾಯಾಂಗದಲ್ಲಿ ಪ್ರಕರಣಗಳು ತ್ವರಿತ ಇತ್ಯರ್ಥವಾಗಲಿ

ನ್ಯಾಯಾಂಗದಲ್ಲಿ ಪ್ರಕರಣಗಳು ತ್ವರಿತ ಇತ್ಯರ್ಥವಾಗಲಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸಚಿವ ಸ್ಥಾನ ಕಿತ್ತುಕೊಂಡ ಶೇ.1 ಕಮಿಷನ್‌ ಆಸೆ!

ಸಚಿವ ಸ್ಥಾನ ಕಿತ್ತುಕೊಂಡ ಶೇ.1 ಕಮಿಷನ್‌ ಆಸೆ!

ಆಪ್‌ ಸಿಎಂ ಅಭ್ಯರ್ಥಿ ಅಜಯ್‌ ಕೊಟಿಯಾಲ್‌ ಬಿಜೆಪಿಗೆ!

ಆಪ್‌ ಸಿಎಂ ಅಭ್ಯರ್ಥಿ ಅಜಯ್‌ ಕೊಟಿಯಾಲ್‌ ಬಿಜೆಪಿಗೆ!

ಭುಗಿಲೆದ್ದ ಹಿಂಸಾಚಾರ: ಆಂಧ್ರಪ್ರದೇಶದಲ್ಲಿ ಸಚಿವ, ಶಾಸಕರ ಮನೆಗೆ ಬೆಂಕಿ!

ಭುಗಿಲೆದ್ದ ಹಿಂಸಾಚಾರ: ಆಂಧ್ರಪ್ರದೇಶದಲ್ಲಿ ಸಚಿವ, ಶಾಸಕರ ಮನೆಗೆ ಬೆಂಕಿ!

ಶ್ರೀನಗರ ಗುಂಡಿನ ದಾಳಿ: ಪೊಲೀಸ್‌ ಪೇದೆಯನ್ನು ಕೊಂದ ಉಗ್ರರು

ಶ್ರೀನಗರ ಗುಂಡಿನ ದಾಳಿ: ಪೊಲೀಸ್‌ ಪೇದೆಯನ್ನು ಕೊಂದ ಉಗ್ರರು

ಕರಾಚಿಯಲ್ಲೇ ಇದ್ದಾನೆ ಭೂಗತ ಪಾತಕಿ ದಾವೂದ್‌ ಇಬ್ರಾಹಿಂ

ಕರಾಚಿಯಲ್ಲೇ ಇದ್ದಾನೆ ಭೂಗತ ಪಾತಕಿ ದಾವೂದ್‌ ಇಬ್ರಾಹಿಂ

MUST WATCH

udayavani youtube

SSLC ಸಾಧಕರಿಗೆ ಉದಯವಾಣಿ ಸನ್ಮಾನ

udayavani youtube

ಉಡುಪಿ : ಹಲವು ಸಂಶಯಗಳನ್ನು ಹುಟ್ಟು ಹಾಕಿದ ಯುವಜೋಡಿ ಸಾವು ಪ್ರಕರಣ

udayavani youtube

ವೈದ್ಯರ ನಿರ್ಲಕ್ಷದಿಂದ ನೆಲದ ಮೇಲೆ ನರಳಾಡಿದ ಗರ್ಭಿಣಿ

udayavani youtube

ಎಸೆಸೆಲ್ಸಿ, ಪಿಯುಸಿ ನಂತರ ಅಗಾಧ ಅವಕಾಶ : “ಉದಯವಾಣಿ’ ವಿಶೇಷ ಕಾರ್ಯಕ್ರಮ

udayavani youtube

ದಾವೋಸ್ ನಲ್ಲಿ ಸಿಎಂ : ವರ್ಲ್ಡ್ ಎಕನಾಮಿಕ್ ಫೋರಮ್ ಸಮಾವೇಶದಲ್ಲಿ ಭಾಗಿ

ಹೊಸ ಸೇರ್ಪಡೆ

ಸಾಗರದಡಿ ಸಕ್ಕರೆಯ ನಿಕ್ಷೇಪ ಪತ್ತೆ! ಸಮುದ್ರದ ತಳದಲ್ಲಿ “ಸುಕ್ರೋಸ್‌’ ಮಾದರಿಯಲ್ಲಿ ಸಂಗ್ರಹ

ಸಾಗರದಡಿ ಸಕ್ಕರೆಯ ನಿಕ್ಷೇಪ ಪತ್ತೆ! ಸಮುದ್ರದ ತಳದಲ್ಲಿ “ಸುಕ್ರೋಸ್‌’ ಮಾದರಿಯಲ್ಲಿ ಸಂಗ್ರಹ

ಗೆಲುವೆಂಬ ಮರೀಚಿಕೆಯ ಬೆನ್ನು ಹತ್ತಿ….

ಗೆಲುವೆಂಬ ಮರೀಚಿಕೆಯ ಬೆನ್ನು ಹತ್ತಿ….

ಮುಗಿಯದ ಪಠ್ಯಪುಸ್ತಕ ಪರಿಷ್ಕರಣೆ ವಿವಾದ

ಮುಗಿಯದ ಪಠ್ಯಪುಸ್ತಕ ಪರಿಷ್ಕರಣೆ ವಿವಾದ

ರಾಜ್ಯದಲ್ಲಿ50 ಸಾವಿರ ಕೋಟಿ ರೂ. ಹೂಡಿಕೆ; ಇಂಧನ ಕ್ಷೇತ್ರದಲ್ಲಿ ಭರ್ಜರಿ ಒಪ್ಪಂದ

ರಾಜ್ಯದಲ್ಲಿ50 ಸಾವಿರ ಕೋಟಿ ರೂ. ಹೂಡಿಕೆ; ಇಂಧನ ಕ್ಷೇತ್ರದಲ್ಲಿ ಭರ್ಜರಿ ಒಪ್ಪಂದ

ವಿಧಾನ ಪರಿಷತ್‌ ಚುನಾವಣೆ: 3 ಪಕ್ಷಗಳಿಂದ 7 ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ

ವಿಧಾನ ಪರಿಷತ್‌ ಚುನಾವಣೆ: 3 ಪಕ್ಷಗಳಿಂದ 7 ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.