ನನ್ನ ಆಲಿಂಗನದಿಂದ 15 ಕೋಟಿ ಜನರಿಗೆ ಲಾಭ: ನವಜ್ಯೋತ್‌ ಸಿಧು ವ್ಯಂಗ್ಯ

Team Udayavani, Nov 23, 2018, 4:28 PM IST

ಭೋಪಾಲ್‌ : “ಪಾಕ್‌ ನೂತನ ಪ್ರಧಾನಿ ಇಮ್ರಾನ್‌ ಖಾನ್‌ ಅವರ ಪ್ರಮಾಣ ವಚನ ಸಮಾರಂಭಕ್ಕೆಂದು ನಾನು ಪಾಕಿಸ್ಥಾನಕ್ಕೆ ಹೋಗಿದ್ದಾಗ ಅಲ್ಲಿನ ಸೇನಾ ಮುಖ್ಯಸ್ಥರನ್ನು ನಾನು ಆಲಂಗಿಸಿದುದರ ಸತ್‌ಫ‌ಲ ಈಗ ಸಿಗುತ್ತದೆ; ಕನಿಷ್ಠ 15 – 16 ಕೋಟಿ ಜನರಿಗೆ ಅದರ ಲಾಭವಾಗಿದೆ” ಎಂದು ಕಾಂಗ್ರೆಸ್‌ ನಾಯಕ ನವಜ್ಯೋತ್‌ ಸಿಂಗ್‌ ಸಿಧು ಹೇಳಿಕೊಂಡಿದ್ದಾರೆ.

ಮಧ್ಯಪ್ರದೇಶದ ಭೋಪಾಲ್‌ ನಲ್ಲಿ ರಾಜ್ಯ ವಿಧಾನಸಭೆ ಚುನಾವಣೆ ಪ್ರಯುಕ್ತ ಮಾಡುತ್ತಿದ್ದ ಚುನಾವಣಾ ಭಾಷಣದಲ್ಲಿ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ದ ಕಟು ವಾಕ್‌ ದಾಳಿ ನಡೆಸಿದರು.

“ಪ್ರಧಾನಿ ಮೋದಿ ಅವರು ದೇಶದ ಕೆಲವೇ ಕೆಲವು ಸಿರಿವಂತರ, ಕೈಗಾರಿಕೋದ್ಯಮಿಗಳ ಕೈಗೊಂಬೆ ಆಗಿದ್ದಾರೆ’ ಎಂದು ಆರೋಪಿಸಿದರು.

“ನಾನು ಪಾಕ್‌ ಸೇನಾ ಮುಖ್ಯಸ್ಥರನ್ನು ಆಲಿಂಗಿಸಿದ್ದೇನೆ ನಿಜ; ಆದರೆ ಅದರಿಂದ ದೇಶದ ಕನಿಷ್ಠ 15 – 16 ಕೋಟಿ ಜನರಿಗೆ ಲಾಭವಾಗಿದೆ; ಆ ಆಲಿಂಗನವು ರಫೇಲ್‌ ಫೈಟರ್‌ ಜೆಟ್‌ ಡೀಲ್‌ ಆಗಿರಲಿಲ್ಲ’ ಎಂದು ಸಿಧು ವ್ಯಂಗ್ಯವಾಡಿದ್ದಾರೆ. 

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ