ಮೋದಿಗೆ ಖಾಸಗಿ ವಿಲ್ಲಾದಲ್ಲಿ ಜಪಾನ್ ಪಿಎಂ ಔತಣಕೂಟ
Team Udayavani, Oct 26, 2018, 8:45 AM IST
ಹೊಸದಿಲ್ಲಿ: ಇದೇ 28ರಿಂದ ಜಪಾನ್ಗೆ ಎರಡು ದಿನಗಳ ಪ್ರವಾಸ ಕೈಗೊಳ್ಳಲಿರುವ ಪ್ರಧಾನಿ ನರೇಂದ್ರ ಮೋದಿಗೆ ಜಪಾನ್ ಪ್ರಧಾನಿ ಶಿಂಜೋ ಅಬೆ ಖಾಸಗಿ ವಿಲ್ಲಾದಲ್ಲಿ ಔತಣಕೂಟ ಏರ್ಪಡಿಸಿದ್ದಾರೆ. ಶಿಂಜೋ ಅಬೆ ಭಾರತಕ್ಕೆ ಆಗಮಿಸಿದಾಗ ಪ್ರಧಾನಿ ಮೋದಿ ಒದಗಿಸಿದ ಅದ್ದೂರಿ ಔತಣಕೂಟದ ಮಾದರಿಯಲ್ಲೇ ಯಮನಶಿಯಲ್ಲಿರುವ ವಿಲ್ಲಾದಲ್ಲಿ ಮೋದಿಗೆ ಔತಣ ಕೂಟ ಏರ್ಪಡಿಸಲಾಗಿದೆೆ. ಜಪಾನ್ನ ಕೆಲವೇ ಪ್ರಮುಖ ನಾಯಕರು ಮತ್ತು ಸಂಸದರಿಗೆ ಈ ಔತಣಕೂಟಕ್ಕೆ ಹಾಜರಾಗುವಂತೆ ಆಹ್ವಾನ ನೀಡಲಾಗಿದೆ.
ಜಪಾನ್ ಭೇಟಿಯಲ್ಲಿ ರಕ್ಷಣೆ ಹಾಗೂ ಪ್ರಾದೇಶಿಕ ಭದ್ರತೆ ಕುರಿತ ವಿಚಾರಕ್ಕೆ ಸಂಬಂಧಿಸಿ ಉಭಯ ನಾಯಕರು ಚರ್ಚಿಸಲಿದ್ದಾರೆ. ಅ.28ರಂದು ಬೆಳಗ್ಗೆ ಯಮನಶಿಗೆ ಭೇಟಿ ನೀಡಲಿರುವ ಮೋದಿ, ಅಬೆ ಜೊತೆ ಮಾತುಕತೆ ನಡೆಸಲಿದ್ದಾರೆ. ಅಲ್ಲಿಂದ ಯಮನಶಿ ಎಫ್ಎಎನ್ಯುಸಿ ರೊಬೊಟಿಕ್ಸ್ ಘಟಕಕ್ಕೆ ಭೇಟಿ ನೀಡಿ, ಸಂಜೆ ಔತಣ ಕೂಟಕ್ಕೆ ಹಾಜರಾಗಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!
SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು
Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ.. ಭಯಾನಕ ದೃಶ್ಯ ಸೆರೆ
Loksabha Poll: ತಮಿಳುನಾಡು ಮಾಜಿ ಕಾಂಗ್ರೆಸ್ ನಾಯಕ ಈಗ ಬಿಜೆಪಿ ರಾಷ್ಟ್ರೀಯ ವಕ್ತಾರ
Bhopal: ಅಜ್ಜಿಗೆ ಮನಬಂದಂತೆ ಥಳಿಸಿದ ದಂಪತಿಗೆ ಲಾಠಿ ರುಚಿ ತೋರಿಸಿದ ಪೊಲೀಸರು…