ಮೋದಿ 2030ಕ್ಕೆ ಚಂದ್ರನನ್ನೇ ಭೂಮಿಗೆ ತರುತ್ತಾರೆ :ರಾಹುಲ್
Team Udayavani, Oct 12, 2017, 9:39 AM IST
ಹೊಸದಿಲ್ಲಿ : ಅವಕಾಶ ಸಿಕ್ಕಲೆಲ್ಲಾ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ಧಾಳಿ ನಡೆಸುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ”2028ರ ವೇಳೆ ಮೋದಿ ಜಿ ಗುಜರಾತ್ನ ಪ್ರತಿಯೊಬ್ಬ ವ್ಯಕ್ತಿಗೆ ಚಂದ್ರನ ಮೇಲೆ ಒಂದು ಮನೆ ನಿರ್ಮಿಸಿ ಕೊಡುತ್ತಾರೆ ಮತ್ತು 2030 ಕ್ಕೆ ಚಂದ್ರನನ್ನೇ ಭೂಮಿಗೆ ತರುತ್ತಾರೆ” ಎಂದು ಲೇವಡಿ ಮಾಡಿ ಟ್ವೀಟ್ ಮಾಡಿದ್ದಾರೆ.
”ಮೋದಿ ಅವರ ಮುಂದಿನ ಯೋಜನೆ ಎಂದರೆ 2025 ರ ತನಕ ಮೋದಿ ಗುಜರಾತ್ನ ಪ್ರತಿಯೊಬ್ಬ ವ್ಯಕ್ತಿಗೂ ಚಂದ್ರನ ಮೇಲೆ ತೆರಳಲು ರಾಕೆಟ್ ನೀಡುತ್ತಾರೆ” ಎಂದು ಇನ್ನೊಂದು ಟ್ವೀಟ್ನಲ್ಲಿ ಬರೆದಿದ್ದಾರೆ.
ಇನ್ನೊಂದು ಟ್ವೀಟ್ನಲ್ಲಿ ”ಮೋದಿ ಜಿ, 22 ವರ್ಷಗಳಿಂದ ಗುಜರಾತ್ನಲ್ಲಿ ನಿಮ್ಮ ಸರ್ಕಾರ ಅಸ್ಥಿತ್ವದಲ್ಲಿದೆ. ನೀವು ನೋಡಿದರೆ 2022ರ ವೇಳೆಗೆ ಗುಜರಾತ್ನಲ್ಲಿ ಬಡತನ ಸಂಪೂರ್ಣ ನಿರ್ಮೂಲನ ಮಾಡುತ್ತೇವೆ ಎನ್ನುತ್ತಿರಿ” ಎಂದು ಬರೆದಿದ್ದಾರೆ.
ಚುನಾವಣೆ ಎದುರು ನೋಡುತ್ತಿರುವ ಗುಜರಾತ್ ಪ್ರವಾಸದಲ್ಲಿರುವ ರಾಹುಲ್ ಪ್ರತಿನಿತ್ಯ ಪ್ರಧಾನಿ ವಿರುದ್ಧ ವಿವಿಧ ವಿಷಯಗಳನ್ನು ಮುಂದಿಟ್ಟುಕೊಂಡು ವಾಗ್ಧಾಳಿ ನಡೆಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Election Commission: ಮೋದಿ, ರಾಹುಲ್ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್
Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್ ಭೇಟಿ; ಆಯೋಗಕ್ಕೆ “ಕೈ’ ದೂರು
Odisha: ಎನ್ಕೌಂಟರ್; ಇಬ್ಬರು ನಕ್ಸಲರ ಹತ್ಯೆ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್