ಅಭಿಮಾನಿ ಟ್ವೀಟ್‌ಗೆ ಮೋದಿ ರೀಟ್ವೀಟ್‌, ಈಗ ವೈರಲ್‌!

Team Udayavani, Mar 16, 2017, 10:53 AM IST

ನವದೆಹಲಿ: “ನೀವು ನರೇಂದ್ರ ಮೋದಿ ಅವರಿಗಾಗಿ ಕೆಲಸ ಮಾಡುತ್ತೀರಾ?’ ಎಂದು ಹಿಂಬಾಲಕರೊಬ್ಬರು ಕೇಳಿದರು. ಅದಕ್ಕೆ ನಾನು ನಗುಮುಖದಲ್ಲೇ “ಇಲ್ಲ, ಅವರು ನನಗೋಸ್ಕರ ಕೆಲಸಮಾಡುತ್ತಿದ್ದಾರೆ’ ಎಂದೆ! 

ಯಾರು ಯಾರಿಗೆ ಕೇಳಿದ್ದು, ಹೇಳಿದ್ದು? ಎನ್ನುವ ಗೊಂದಲ ಮೂಡಿದ್ದರೆ ಸಹಜ ಬಿಡಿ. ಇದು ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಅಭಿಮಾನಿ ಅಜಿತ್‌ ಸಿಂಗ್‌ ಎನ್ನುವವರ ನಡುವೆ ನಡೆದ ಸಂಭಾಷಣೆ. ಇದೀಗ ಟ್ವಿಟರ್‌ನಲ್ಲಿ ಸಾಕಷ್ಟು ಸದ್ದು ಮಾಡಿದೆ. ಅಷ್ಟಕ್ಕೂ ಅಜಿತ್‌ ಸಿಂಗ್‌ ರಾಜಕಾರಣಿಯೂ ಅಲ್ಲ, ಸೆಲೆಬ್ರಿಟಿಯೂ ಅಲ್ಲ. ಸಾಮಾನ್ಯ ಪ್ರಜೆ ಅಷ್ಟೆ.

ಅಜಿತ್‌ ಸಿಂಗ್‌ ಪ್ರಧಾನಿ ಅವರಿಗೆ ಹೀಗೊಂದು ಜೋಕ್‌ ಟ್ವೀಟ್‌ ಮಾಡಿ ಅನುಭವ ಹಂಚಿಕೊಂಡಿದ್ದರು. “ಪ್ರಧಾನ್‌ ಸೇವಕ್‌’ ಎಂದು ಹೇಳಿಕೊಂಡಿರುವುದರ ಬಗ್ಗೆ ಪ್ರಸ್ತಾಪಿಸಿ “ನೀವು ನರೇಂದ್ರಮೋದಿ ಅವರಿಗಾಗಿ ಕೆಲಸ ಮಾಡುತ್ತೀರಾ?’ ಎಂದು ಪ್ರಶ್ನಿಸಿದ್ದರು. ಅದಕ್ಕೆ “ಇಲ್ಲ, ಅವರು ನನಗೋಸ್ಕರ
ಕೆಲಸಮಾಡುತ್ತಿದ್ದಾರೆ’ ಎಂದಿರುವುದಾಗಿ ಟ್ವೀಟ್‌ ಮಾಡಿದ್ದರು. ಇದನ್ನು ರೀಟ್ವೀಟ್‌ ಮಾಡಿರುವ ಮೋದಿ, “ಖಂಡಿತವಾಗಿ, ಈ ಮನೋಭಾವ ಇರುವ ದೇಶದ ಪ್ರತಿಯೊಬ್ಬ ಯುವಕರಿಗೆ ಶುಭ ಕೋರುವೆ’ ಎಂದು ಪ್ರತಿಕ್ರಿಯಿಸಿದ್ದರು. ಈ ಸಂಭಾಷಣೆ ಈಗ ಟ್ವಿಟರ್‌ನಲ್ಲಿ “ಐಆ್ಯಮ್‌ನೂÂ ಇಂಡಿಯಾ’ ಟ್ಯಾಗ್‌ಲೈನ್‌ ಜತೆ ಸಾಕಷ್ಟು ವೈರಲ್‌ ಆಗಿದೆ. ಆರು ಸಾವಿರಕ್ಕೂ ಹೆಚ್ಚುಮಂದಿ ಈ ಸಂಭಾಷಣೆಯನ್ನು ಹಂಚಿಕೊಂಡಿದ್ದಾರೆ. 


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ