“ನಾರಿ ನಾರಾಯಣಿ’ ಮಂತ್ರ

Team Udayavani, Jul 6, 2019, 4:06 AM IST

naari-naraya

ಮೊದಲ ಪೂರ್ಣ ಪ್ರಮಾಣದ ಅರ್ಥ ಸಚಿವೆ ನಿರ್ಮಲಾ ಸೀತಾರಾಮನ್‌ ಬಜೆಟ್‌ನಲ್ಲಿ ಮಹಿಳಾ ಸಬಲೀಕರಣ ಹೆಚ್ಚಿನ ಪ್ರಾಶಸ್ತ್ಯ ನೀಡುವುದರ ಮೂಲಕ ಅವರ ಮೇಲೆದ್ದ ನಿರೀಕ್ಷೆಯ ಭಾರವನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ. ದೇಶ ಸಾಧಿಸಿರುವ ಅಭಿವೃದ್ಧಿ ಮತ್ತು ಯಶಸ್ಸಿನಲ್ಲಿ ಮಹತ್ತರ ಪಾತ್ರ ವಹಿಸಿರುವ ಮಹಿಳೆಯರನ್ನು ತಮ್ಮ ಬಜೆಟ್‌ ಭಾಷ ಣ ದಲ್ಲಿ ಉಲ್ಲೇಖೀಸಿದ ಅವರು, “ನಾರಿ ನೀನು ನಾರಾಯಣಿ’ ಎಂಬುದೇ ಈ ದೇಶದ ಪರಂಪರೆ ಎಂದು ಒತ್ತಿ ಹೇಳಿದ್ದಾರೆ.

ಮುದ್ರಾ ಯೋಜನೆಯ ವಿಸ್ತರಣೆ: ಗ್ರಾಮೀಣ ಅರ್ಥ ವ್ಯವಸ್ಥೆ ಮುಖ್ಯವಾಗಿ ಮಹಿಳೆಯ ಭಾಗವಹಿಸುವಿಕೆಯನ್ನೇ ಅವಲಂಭಿಸಿದೆ. ಕಳೆದ ಒಂದು ದಶಕದಲ್ಲಿ ಮಹಿಳೆಯರ ಭಾಗವಹಿಸುವಿಕೆಯಿಂದ ಸಾಮಾ ಜಿ ಕ-ಆರ್ಥಿಕ ವಲಯದಲ್ಲಿ ಮಹತ್ತರ ಬದಲಾವಣೆ ಸಂಭವಿಸಿದೆ. ಇದರಿಂದ ಉತ್ತೇಜಿತರಾಗಿ ಮಹಿಳಾ ಸ್ವಸಹಾಯ ತಂಡಗಳಿಗೆ ನೀಡ ಲಾ ಗುವ ಎಲ್ಲಾ ಸೌಕರ್ಯ, ಅನು ದಾ ನಗ ಳನ್ನು ದೇಶದ ಎಲ್ಲಾ ಜಿಲ್ಲೆಗಳಿಗೆ ವಿಸ್ತರಿಸಲಾಗುವುದು.

ಮಹಿಳಾ ಮತ್ತು ಮಕ್ಕಳ ಅಭಿ ವೃ ದ್ಧಿಗೆ ಸಂಬಂಧಿ ಸಿದ ಎಲ್ಲಾ ಯೋಜ ನೆ ಗಳ ಅನು ದಾ ನ ಗ ಳಲ್ಲಿ ಹೆಚ್ಚಳ ಮಾಡಿ ರುವ ಸಚಿ ವರು, ಮಹಿಳಾ ಸ್ವಸ ಹಾಯ ಗುಂಪು ಗಳ ಸೌಲ ಭ್ಯ ವ ನ್ನು (ಎ ಸ್‌ ಎ ಚ್‌ ಜಿ) ಎಲ್ಲಾ ಜಿಲ್ಲೆ ಗ ಳಿಗೆ ವಿಸ್ತ ರಿ ಸಿ ರುವ ಘೋಷಣೆ ಮಾಡಿ ದ್ದಾರೆ. ಇದ ರ ಜತೆಗೆ, ಜನ ಧನ ಬ್ಯಾಂಕ್‌ ಖಾತೆ ಹೊಂದಿ ರುವ ಮಹಿಳಾ ಸ್ವಹಾಯ ಗುಂಪು ಗಳ ಸದ ಸ್ಯ ರಿಗೆ 5,000 ರೂ.ಗ ಳ ವ ರೆಗೆ ಓವ ರ್‌ ಡ್ರಾಫ್ಟ್ ನೀಡುವುದಾಗಿ ಹೇಳಿ ದ್ದಾರೆ. ಅಲ್ಲದೆ, ಒಂದು ಸ್ವಸ ಹಾಯ ಗುಂಪಿ ನಿಂದ ಒಬ್ಬ ಮಹಿಳಾ ಸದ ಸ್ಯೆ ಗೆ ಮುದ್ರಾ ಯೋಜ ನೆ ಯಡಿ 1 ಲಕ್ಷ ರೂ.ಗ ಳ ವ ರೆಗೆ ಸಾಲ ಸೌಲಭ್ಯ ನೀಡುವ ಮೂಲಕ ಮಹಿಳಾ ಉದ್ಯ ಮಕ್ಕೆ ಪ್ರೋತ್ಸಾಹ ನೀಡುವು ದಾಗಿ ಘೋಷಿ ಸಿ ದ್ದಾರೆ.

ಈ ಘೋಷ ಣೆ ಗ ಳನ್ನು ಸಮ ರ್ಥಿ ಸಿ ಕೊಂಡಿ ರುವ ಸಚಿವೆ ನಿರ್ಮಲಾ, “ಮಹಿಳೆಯರ ಸ್ಥಿತಿಗತಿಗಳು ಬದಲಾಗದ ಹೊರತು ಜಗತ್ತಿನ ಏಳಿಗೆ ಆಗುವುದಿಲ್ಲ. ಪಕ್ಷಿಗೆ ಒಂದೇ ರೆಕ್ಕೆಯಲ್ಲಿ ಹರಲು ಹೇಗೆ ಸಾಧ್ಯವಿಲ್ಲವೂ ಇದೂ ಹಾಗೆ’ ಎಂದು ಸ್ವಾಮಿ ವಿವೇಕಾನಂದರು, ಸ್ವಾಮಿ ರಾಮಕೃಷ್ಣ ಪರಮಹಂಸರಿಗೆ ಪತ್ರದಲ್ಲಿ ಹೇಳಿದ್ದ ಸಾಲನ್ನು ನಿರ್ಮಲಾ ಉಲ್ಲೇಖೀಸಿದರು. “ಮಹಿಳೆಯರ ಭಾಗವಹಿಸುವಿಕೆ ಉತ್ತಮಪಡಿಸಲಾಗದೇ ದೇಶದ ಏಳಿಗೆ ಸಾಧ್ಯವಿಲ್ಲ ಎಂದು ನಮ್ಮ ಸರ್ಕಾರ ನಂಬಿದೆ’ ಎಂದರು.

ಮಹಿಳೆ, ಮಕ್ಕಳ ಕಲ್ಯಾಣಕ್ಕೆ ಹೆಚ್ಚಿನ ಅನುದಾನ: ಸಾಮಾಜಿಕ ಸೇವಾ ವಲಯಕ್ಕೆ ಈ ಬಾರಿಯ ಬಜೆಟ್‌ನಲ್ಲಿ ಎಂದಿಗಿಂತ ಹೆಚ್ಚಿನ ಒತ್ತು ನೀಡಲಾಗಿದೆ. ಅದರಡಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯಕ್ಕೆ ಹೆಚ್ಚಿನ ಅನುದಾನ ನೀಡಲಾಗಿದೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಈ ಬಾರಿ 29,164 ಕೋಟಿ ರೂ.ಗಳನ್ನು ಮೀಸ ಲಿ ರಿ ಸ ಲಾ ಗಿ ದೆ. ಇದು ಕಳೆದ 2018-19ರ ಸಾಲಿನ ಬಜೆಟ್‌ನಲ್ಲಿ ನೀಡಿದ್ದ ಹಣಕ್ಕಿಂತ ಶೇ.17ರಷ್ಟು ಹೆಚ್ಚು ಅನು ದಾನ ಈ ಬಾರಿ ಸಿಕ್ಕಿ ದೆ.

ಪ್ರಧಾನಿ ನರೇಂದ್ರ ಮೋದಿ ಅವರ ನೆಚ್ಚಿನ ಯೋಜನೆ “ಬೇಟಿ ಬಚಾವೊ ಭೇಟಿ ಪಢಾವೊ’ಗೆ ಈ ಆರ್ಥಿಕ ಸಾಲಿನಲ್ಲಿ 280 ಕೋಟಿ ಅನುದಾನ ಸಿಕ್ಕಿದೆ. ಮಕ್ಕಳ ಬೆಳವಣಿಗೆ ಕುಂಠಿತ, ಪೌಷ್ಠಿಕಾಂಶದ ಕೊರತೆ, ರಕ್ತ ಹೀನತೆ, ನವಜಾತ ಶಿಶುಗಳ ಅತಿ ಕಡಿಮೆ ತೂಕ ಗಳಂಥ ಸಮಸ್ಯೆಗಳನ್ನು ಸಂಪೂರ್ಣ ನಿವಾರಿಸು ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ “ರಾಷ್ಟ್ರೀಯ ಪೌಷ್ಟಿಕಾಂಶ ಯೋಜನೆ’ 3,400 ಕೋಟಿ ರೂ. ಅನುದಾನ ನೀಡಲಾಗಿದೆ.

ಶಕ್ತಿ ಕೇಂದ್ರಗಳ ಅನುದಾನ ಹೆಚ್ಚಳ: ಮಹಿಳಾ ಶಕ್ತಿ ಕೇಂದ್ರಗಳಿಗೆ ನೀಡುತ್ತಿದ್ದ ಅನುದಾನವನ್ನೂ ಈ ಬಾರಿ ಹೆಚ್ಚಿಸಲಾಗಿದೆ. ಈ ಮೊದಲು 115 ಕೋಟಿ ರೂ. ನೀಡಲಾಗುತ್ತಿದ್ದ ಅನುದಾನವನ್ನು ಈ ಬಾರಿ 150 ಕೋಟಿ ರೂ.ಗೆ ಏರಿಸಲಾಗಿದೆ. ಉದ್ಯೋಗಸ್ಥ ಮಹಿಳೆಯರ ಮಕ್ಕಳಿಗಾಗಿ ತೆರೆಯಲಾಗಿರುವ ಅಂಗನವಾಡಿಗಳಿಗೆ ನೀಡಿರುವ ಅನುದಾನವನ್ನು 30 ಕೋಟಿ ರೂ.ಗಳಿಂದ 50 ಕೋಟಿ ರೂ.ಗಳಿಗೆ ಹೆಚ್ಚಿಸಲಾಗಿದೆ.

ಮಹಿಳೆಯರ ಅಕ್ರಮ ಸಾಗಾಟ, ಅವರ ರಕ್ಷಣೆ, ಸಂತ್ರಸ್ತೆಯರ ಪುನರ್ವಸತಿ ಮೊದಲಾದ ಮಹಿಳಾ ಹಿತಾಸಕ್ತಿ ಕಾಪಾಡುವ “ಉಜ್ವಲ’ ಯೋಜನೆಗೆ ನೀಡ ಲಾ ಗು ತ್ತಿದ್ದ ಅನುದಾನವನ್ನು 20 ಕೋಟಿ ರೂ.ಗಳಿಂದ 30 ಕೋಟಿ ರೂ.ಗಳಿಗೆ ಹೆಚ್ಚಿಸಲಾಗಿದೆ. ಇದೇ ಮಾದರಿಯಲ್ಲಿ ವಿಧವಾ ಗೃಹಗಳಿಗೆ (ವಿಡೋ ಹೋಮ್ಸ್‌) ನೀಡಿರುವ ಅನುದಾನವನ್ನು 8 ಕೋಟಿ ರೂ.ಗ ಳಿಂದ 15 ಕೋಟಿ ರೂ.ಗಳಿಗೆ ಹೆಚ್ಚಿಸಲಾಗಿದೆ.

ಮಹಿಳಾ ಸಬಲೀಕರಣ ಮತ್ತು ರಕ್ಷಣೆ ಉದ್ದೇಶದಡಿ ಕಳೆದ ಸಾಲಿನಲ್ಲಿ 1,315 ಕೋಟಿ ರೂ. ಇದ್ದ ಅನುದಾನವನ್ನು ಈ ಸಾಲಿನ ಬಜೆಟ್‌ನಲ್ಲಿ ಯಶಸ್ವಿಯಾಗಿ 1,148 ಕೋಟಿ ರೂ.ಗೆ ಹೆಚ್ಚಿಸಲಾಗಿದೆ. ಒಟ್ಟಾರೆ ಕೇಂದ್ರ ಪ್ರಯೋಜಿತ ಕಾರ್ಯಕ್ರಮಗಳಿಗೆ ನೀಡಿರುವ ಹಣವನ್ನು 28,914 ಕೋಟಿಗೆ ಹೆಚ್ಚಿಸಲಾಗಿದೆ.

ಸಮಿತಿ ರಚನೆ: ಬಜೆಟ್‌ ಅನು ದಾ ನ ವನ್ನು ಲಿಂಗಾ ಧಾ ರಿ ತ ವಾಗಿ ವಿಶ್ಲೇ ಷಿ ಸುವ ಪದ್ಧತಿ ದಶ ಕ ಗಳ ಹಿಂದಿ ನಿಂದಲೂ ಚಾಲ್ತಿ ಯ ಲ್ಲಿದ್ದು, ಈ ನಿಟ್ಟಿ ನಲ್ಲಿ ಮಹಿ ಳೆ ಯರ ಅಭಿ ವೃ ದ್ಧಿಗೆ ಮತ್ತಷ್ಟು ಬಜೆಟ್‌ ಅನು ದಾ ನ ಗಳು ಸದ್ಬ ಳ ಕೆ ಯಾ ಗುವಂತೆ ಸರ್ಕಾರ, ಖಾಸಗಿ ಸಂಸ್ಥೆ ಗಳ ಸಹ ಭಾ ಗಿ ತ್ವ ದಲ್ಲಿ ಸಮಿ ತಿ ಯೊಂದನ್ನು ರಚಿ ಸು ವು ದಾಗಿ ಅವರು ತಿಳಿ ಸಿ ದರು.

ಪ‹ಧಾನಮಂತ್ರಿ ಮಾತೃ ವಂದನಾ ಯೋಜನೆ: ಕೇಂದ್ರದ ಕಾರ್ಯಕ್ರಮಗಳಾದ ತಾಯಿ ಆರೈಕೆ, ಮಗು ಸಂರಕ್ಷಣೆಗಳಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ತಾಯಿ ಮತ್ತು ಗರ್ಭಿಣಿ ಸ್ತ್ರೀ ಆರೈಕೆ ಯೋಜನೆ ಅಡಿ “ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆ’ಗೆ (ಪಿಎಂಎಂವಿವೈ)2,500 ಕೋಟಿ ರೂ. ಅನುದಾನ ನೀಡಲಾಗಿದೆ. ಕಳೆದ ಬಜೆಟ್‌ಗೆ ಹೋಲಿಸಿದರೆ ಇದು ದುಪ್ಪಟ್ಟು ಹೆಚ್ಚಳ. ಇದೇ ಯೋಜನೆ ಅಡಿ ಗರ್ಭಿಣಿ ಸ್ತ್ರೀ ಆರೈಕೆ ಮತ್ತು ಮೊದಲ ಮಗುವಿಗೆ ಸ್ತನ್ಯಪಾನ ಮಾಡುತ್ತಿರುವ ತಾಯಿ ಆರೈಕೆಗೆ 6,000 ಕೋಟಿ ರೂ. ನೀಡಲಾಗಿದೆ. ಮಕ್ಕಳ ಸಮಗ್ರ ಅಭಿವೃದ್ಧಿ ಸೇವೆ ಅಡಿ ಮಕ್ಕಳ ರಕ್ಷಣೆ ಸೇವಾ ಕಾರ್ಯಕ್ರಮಕ್ಕೆ ನೀಡಿದ್ದ ಅನುದಾನವನ್ನು 925 ಕೋಟಿ ರೂ.ಗ ಳಿಂದ 1,500 ಕೋಟಿ ರೂ.ಗೆ ಹೆಚ್ಚಿಸಲಾಗಿದೆ.

ಮೊದಲ ಬಾರಿಗೆ ಲಿಂಗಾಧಾರಿತವಾಗಿ ಬಜೆಟ್‌ ಹಂಚಿಕೆ ಮಾಡಲು ಸಮಿತಿ ರಚಿಸಿ, ಅದು ಯಶಸ್ವಿಯಾಗುವಂತೆ ನೋಡಿಕೊಂಡಿದ್ದಕ್ಕೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಧನ್ಯವಾಗಳು. ಮಹಿಳೆ ನೇತೃತ್ವದ ಅಭಿವೃದ್ಧಿ ಎಂಬ ನಮ್ಮ ಗುರಿಗೆ ಮತ್ತಷ್ಟು ಬಲ ನೀಡಿದೆ.
-ಸ್ಮತಿ ಇರಾನಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ

ಟಾಪ್ ನ್ಯೂಸ್

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

4-gadaga

Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್‌ಪಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

3-gadaga

Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

2-hunsur

Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ

1-24-friday

Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

1-wewqwq

Loksabha Election; ದೇಶದಲ್ಲಿ ಹಂತ-1: ಮತ ಇಂದು

voter

EVM ಯಾವ ಗುಂಡಿ ಒತ್ತಿದರೂ ಬಿಜೆಪಿಗೆ ಮತ: ಭಾರೀ ಚರ್ಚೆ

1-qwewqeqwe

Cerelac ಶಿಶು ಆಹಾರದಲ್ಲಿ ಹೆಚ್ಚುವರಿ ಸಕ್ಕರೆ ಬೆರೆತಿದೆ: ಗಂಭೀರ ಆರೋಪ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

4-gadaga

Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್‌ಪಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

3-gadaga

Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.