ವಿಕ್ರಮ್ ಲ್ಯಾಂಡರ್ ಪತನದ ಸ್ಥಳ ಪತ್ತೆ ಹಚ್ಚಿದ ನಾಸಾ

Team Udayavani, Dec 3, 2019, 8:27 AM IST

ಬೆಂಗಳೂರು: ಭಾರತದ ಬಾಹ್ಯಾಕಾಶ ಸಂಶೋಧನೆಯ ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದ ಚಂದ್ರಯಾನ-2 ವಿಕ್ರಮ್ ಲ್ಯಾಂಡರ್ ಪತನವಾದ ಸ್ಥಳವನ್ನು ನಾಸಾ ಪತ್ತೆ ಹಚ್ಚಿದೆ. ನಾಸಾ ಮಂಗಳವಾರ ಈ ಮಹತ್ವದ ಫೋಟೋಗಳನ್ನು ಬಿಡುಗಡೆ ಮಾಡಿದೆ.ಅಮೇರಿಕಾದ ನಾಸಾ ಸಂಸ್ಥೆಯ ದಿ ಲೂನಾರ್ ರಿಕಾನೈಸೆನ್ಸ್ ಆರ್ಬಿಟರ್ ಉಪಗ್ರಹ ಈ ಚಿತ್ರಗಳನ್ನು ಸೆರೆ ಹಿಡಿದಿರುವ ಈ ಚಿತ್ರಗಳನ್ನು ಬಿಡುಗಡೆ ಮಾಡಿದೆ.

ಇಸ್ರೋದ ಚಂದ್ರಯಾನ-2ರ  ವಿಕ್ರಮ್ ಲ್ಯಾಂಡರ್ ಪತನಗೊಂಡು ಅಲ್ಲಲ್ಲಿ ಚದುರಿ ಹೋಗಿದೆ. ಇದರ ಬಿಡಿಭಾಗಗಳು ಸುಮಾರು 24 ಸ್ಥಳಗಳಲ್ಲಿ ಹರಡಿಕೊಂಡಿದೆ ಎನ್ನಲಾಗಿದೆ.

ಇದೇ ವರ್ಷದ ಸಪ್ಟೆಂಬರ್ 7ರಂದು ಮಧ್ಯರಾತ್ರಿ 1.55ರ ಸುಮಾರಿಗೆ ಇನ್ನೇನು ಚಂದ್ರನ ಮೇಲೆ ಇಳಿಯುವ ಕೊನೆ ಕ್ಷಣದಲ್ಲಿ ವಿಕ್ರಮ ಲ್ಯಾಂಡರ್ ಸಂಪರ್ಕ ಕಳೆದುಕೊಂಡಿತ್ತು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ