ಪ್ರವಾದಿ ಕುರಿತಾಗಿ ವಿವಾದ; ಮೌನ ಮುರಿದ ಹಿರಿಯ ನಟ ನಾಸಿರುದ್ದೀನ್ ಶಾ
ಈ ವಿಷ ಹರಡುವುದನ್ನು ತಡೆಯಬೇಕು ಎಂದು ಪ್ರಧಾನಿ ಮೋದಿಗೆ ಮನವಿ
Team Udayavani, Jun 9, 2022, 2:15 PM IST
ಮುಂಬಯಿ: ಪ್ರವಾದಿ ಮಹಮ್ಮದ್ ಕುರಿತಾಗಿ ಬಿಜೆಪಿ ವಕ್ತಾರೆಯಾಗಿದ್ದ ನೂಪುರ್ ಶರ್ಮಾ ನೀಡಿದ್ದ ಹೇಳಿಕೆ ವಿವಾದಕ್ಕೆ ಸಂಬಂಧಿಸಿ ಹಿರಿಯ ನಟ ನಾಸಿರುದ್ದೀನ್ ಶಾ ಪ್ರತಿಕ್ರಿಯಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಮಧ್ಯ ಪ್ರವೇಶಿಸಿ ‘ಈ ವಿಷ ಹರಡುವುದನ್ನು ತಡೆಯಬೇಕು’ ಎಂದು ಮನವಿ ಮಾಡಿದ್ದಾರೆ.
ಸುದ್ದಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ, ಈ ಜನರಲ್ಲಿ ಸ್ವಲ್ಪ ಒಳ್ಳೆಯ ಪ್ರಜ್ಞೆಯನ್ನು ಬಡಿದೆಬ್ಬಿಸುವಂತೆ ನಾನು ಪ್ರಧಾನಿಗೆ ಮನವಿ ಮಾಡುತ್ತೇನೆ. ಉತ್ತಮ ಪ್ರಜ್ಞೆಯು ಮೇಲುಗೈ ಸಾಧಿಸುತ್ತದೆ ಮತ್ತು ಮುಸ್ಲಿಮರ ವಿರುದ್ಧದ ‘ದ್ವೇಷದ ಅಲೆ’ ಶೀಘ್ರದಲ್ಲೇ ಕರಗಲಿದೆ ಎಂದು ಹಿರಿಯ ನಟ ಆಶಿಸಿದ್ದಾರೆ.
ಋಷಿಕೇಶದಲ್ಲಿ ನಡೆದ ‘ಧರ್ಮ ಸಂಸದ್’ನಲ್ಲಿ ಹೇಳಿದ ಮಾತನ್ನು ಪ್ರಧಾನಿ ಅವರು ನಂಬಿದರೆ ಅವರೇ ಹೇಳಬೇಕು ಎಂದು ನಾಸಿರುದ್ದೀನ್ ಶಾ ಹೇಳಿದ್ದಾರೆ.
ಈ ವಿಚಾರದಲ್ಲಿ ಉಳಿದ ನಟರ ಅಭಿಪ್ರಾಯಗಳನ್ನು ನಾನು ಹೇಳಲು ಸಾಧ್ಯವಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.