ನ್ಯಾಶನಲ್ ಹೆರಾಲ್ಡ್ : ಹವಾಲಾ ನಂಟು?
Team Udayavani, Aug 5, 2022, 8:00 AM IST
ಹೊಸದಿಲ್ಲಿ: ನ್ಯಾಶನಲ್ ಹೆರಾಲ್ಡ್ ಕೇಸಿಗೆ ಸಂಬಂಧಿಸಿದಂತೆ 2 ಹವಾಲಾ ವಹಿವಾಟು ನಡೆಸಿರುವುದು ಯಂಗ್ ಇಂಡಿಯಾ ಕಚೇರಿ ಶೋಧದ ವೇಳೆ ಜಾರಿ ನಿರ್ದೇಶನಾಲಯಕ್ಕೆ ಗೊತ್ತಾಗಿದೆ ಎಂದು ಹೇಳಲಾಗಿದೆ.
ಈ ಬಗ್ಗೆ ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದ್ದು, ಮುಂಬಯಿ ಮತ್ತು ಕೋಲ್ಕತಾದಲ್ಲಿರುವ ಇಬ್ಬರು ಹವಾಲಾ ಏಜೆಂಟರ ಜತೆ ನಡೆದ ವಹಿವಾಟಿನ ದಾಖಲೆ ಪತ್ತೆಯಾಗಿದೆ. ಶೋಧ ಪ್ರಕ್ರಿಯೆ ಮುಗಿದ ಮೇಲೆ ನಿರ್ದೇ ಶನಾಲಯ ಮುಂದಿನ ಕ್ರಮ ಕೈಗೊಳ್ಳಲಿದೆ ಎನ್ನಲಾಗಿದೆ.
ಹಾಗಾಗಿ ಜಾರಿ ನಿರ್ದೇಶನಾಲಯವು ಮತ್ತೂಮ್ಮೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ವಿಚಾರಣೆಗೆ ಕರೆದು ಹೇಳಿಕೆ ಪಡೆಯುವ ಸಾಧ್ಯತೆ ಇದೆ. ಈ ಹಿಂದಿನ ವಿಚಾರಣೆಯಲ್ಲಿ ಇವರಿಬ್ಬರೂ, ನೀಡಿದ ಹೇಳಿಕೆ ಕುರಿತು ಇ.ಡಿ. ಅಧಿಕಾರಿಗಳು ತೃಪ್ತರಾಗಿಲ್ಲ ಎನ್ನಲಾಗಿದೆ.