ರಾಷ್ಟ್ರಪತಿ ಆಡಳಿತ ಹೇರಿಕೆಯ ಬಳಿಕವೂ ಶಿವಸೇನೆಗೆ ಸರಕಾರ ರಚನೆ ಆಸೆ ಜೀವಂತ

Team Udayavani, Nov 12, 2019, 10:35 PM IST

ಮುಂಬೈ: ಮಹಾರಾಷ್ಟ್ರದಲ್ಲಿ ರಾಜ್ಯಪಾಲರು ನಿಗದಿಪಡಿಸಿದ ಕಾಲಾವಧಿಯಲ್ಲಿ ಸರಕಾರ ರಚನೆಗೆ ಹಕ್ಕುಮಂಡಿಸಲು ಶಿವಸೇನೆ ಮತ್ತು ಎನ್.ಸಿ.ಪಿ. ವಿಫಲವಾದ ಬೆನ್ನಲ್ಲೇ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೊಂಡಿದೆ.

ರಾಜ್ಯಪಾಲರ ಈ ಕ್ರಮಕ್ಕೆ ಶಿವಸೇನೆ ತೀವ್ರ ವಿರೋಧ ವ್ಯಕ್ತಪಡಿಸಿದ್ದು ಈ ನಿರ್ಣಯದ ವಿರುದ್ಧ ಸುಪ್ರೀಂಕೋರ್ಟ್ ಮೊರೆ ಹೋಗುವುದಾಗಿ ಹೇಳಿದೆ. ಈ ನಡುವೆ ಶಿವಸೇನೆಗೆ ಸರಕಾರ ರಚಿಸಲು ಬೆಂಬಲ ನೀಡುವ ಕುರಿತಾಗಿ ಕಾಂಗ್ರೆಸ್ ಮತ್ತು ಎನ್.ಸಿ.ಪಿ. ಮತ್ತೆ ಆಸಕ್ತಿ ತೋರಿವೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಇಂದು ಈ ಮೈತ್ರಿ ಪಕ್ಷಗಳು ಜಂಟಿ ಪತ್ರಿಕಾಗೋಷ್ಠಿ ನಡೆಸಿ ಶಿವಸೇನೆಗೆ ಬೆಂಬಲ ನೀಡುವ ಕುರಿತಾಗಿ ನಮ್ಮ ಮಾತುಕತೆ ಸಾಗಿದೆ ಎಂದು ತಿಳಿಸಿದೆ.

ಇತ್ತ ಶಿವಸೇನೆಯ ಮುಖ್ಯಸ್ಥ ಉದ್ಭವ್ ಠಾಕ್ರೆ ಅವರೂ ಸಹ ಮಾಧ್ಯಗಳೊಂದಿಗೆ ಮಾತನಾಡಿ, ‘ಎನ್.ಸಿ.ಪಿ. – ಕಾಂಗ್ರೆಸ್ ಮತ್ತು ನಮ್ಮ ಸಿದ್ಧಾಂತಗಳ ನಡುವೆ ವೈರುಧ್ಯಗಳಿದ್ದರೂ ಮಹಾರಾಷ್ಟ್ರದಲ್ಲಿ ಸುಭದ್ರ ಸರಕಾರ ನೀಡುವ ನಿಟ್ಟಿನಲ್ಲಿ ನಮ್ಮ ನಡುವೆ ಪ್ರಯತ್ನಗಳು ಸಾಗಿವೆ’ ಎಂದು ಹೇಳುವ ಮೂಲಕ ರಾಜ್ಯದಲ್ಲಿ ಸರಕಾರ ರಚನೆಯ ಪ್ರಕ್ರಿಯೆ ಜೀವಂತವಾಗಿದೆ ಎಂಬ ಸೂಚನೆಯನ್ನು ಉದ್ಭವ್ ನೀಡಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ